ADVERTISEMENT

ಹಿರಿಯೂರು: ಅನುದಾನ ಕಡಿತಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:43 IST
Last Updated 21 ಜನವರಿ 2017, 5:43 IST
ಹಿರಿಯೂರು: ಅನುದಾನ ಕಡಿತಕ್ಕೆ ಆಕ್ರೋಶ
ಹಿರಿಯೂರು: ಅನುದಾನ ಕಡಿತಕ್ಕೆ ಆಕ್ರೋಶ   

ಹಿರಿಯೂರು: ‘ಕೇಂದ್ರ ಸರ್ಕಾರ ಅಕ್ಷರ ದಾಸೋಹ ಯೋಜನೆಯ ಅನುದಾನ ವನ್ನು ಕಡಿತಗೊಳಿಸಿರುವುದು ಖಂಡ ನೀಯ. ಅನುದಾನವನ್ನು ಎಂದಿನಂತೆ ನೀಡಬೇಕು’ ಎಂದು ಶುಕ್ರವಾರ ಸಿಐಟಿಯು ನೇತೃತ್ವದಲ್ಲಿ ಅಕ್ಷರ ದಾಸೋಹ ಯೋಜನೆಯ ನೌಕರರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಡ ಮಕ್ಕಳ ಶಿಕ್ಷಣ ಮುಂದು ವರಿಕೆಗೆ ಪೂರಕವಾಗಿರುವ ಈ ಯೋಜನೆಯನ್ನು ಇನ್ನಷ್ಟು ಬಲ ಗೊಳಿಸಬೇಕು. ಯೋಜನೆಯ ಸಿಬ್ಬಂದಿಗೆ ಕನಿಷ್ಟ ಕೂಲಿ ನಿಗದಿ ಮಾಡುವವರೆಗೆ  ನಿತ್ಯ ₹  500 ವೇತನ ನೀಡಬೇಕು. ಸಿಬ್ಬಂದಿಯನ್ನು ನಾಲ್ಕನೇ ದರ್ಜೆ ನೌಕರರೆಂದು ಪರಿಗಣಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಅಡುಗೆ ಮಾಡುವಾಗ ಅಪಘಾತ ಸಂಭವಿಸಿದಲ್ಲಿ ನೀಡುವ ಪರಿಹಾರ ಮೊತ್ತವನ್ನು ₹ 1 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಬೇಕು. ಬಿಸಿಯೂಟ ಯೋಜನೆಯನ್ನು ಖಾಸಗಿಯವರಿಗೆ ವಹಿಸುವ ಪ್ರಸ್ತಾವ ಕೈಬಿಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಸಿಐಟಿಯು ತಾಲ್ಲೂಕು ಅಧ್ಯಕ್ಷೆ ಎನ್. ನಿಂಗಮ್ಮ, ಎಂ. ಬಾಲಮ್ಮ, ಟಿ. ರಾಜಮ್ಮ, ತಿಮ್ಮಕ್ಕ,ಶಿವರುದ್ರಮ್ಮ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿ ಕಾರಿ ಮೂಲಕ ಪ್ರಧಾನಿಗೆ ಬೇಡಿಕೆಗಳ ಮನವಿ ಪತ್ರ ಕಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.