ADVERTISEMENT

₹ 1.30 ಕೋಟಿ ವೆಚ್ಚದಲ್ಲಿ ಡಾಂಬರೀಕರಣ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 8:30 IST
Last Updated 6 ಸೆಪ್ಟೆಂಬರ್ 2017, 8:30 IST

ಹಿರಿಯೂರು: ತಾಲ್ಲೂಕಿನ ಕಾಟನಾಯಕನಹಳ್ಳಿಯಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಡಿ. ಸುಧಾಕರ್ ಅವರು ₹ 1.30 ಕೋಟಿ ವೆಚ್ಚದ ಆನೆಸಿದ್ರಿ–ಕಾಟನಾಯಕನಹಳ್ಳಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ರಾಷ್ಟ್ರೀಯ ಹೆದ್ದಾರಿ 4ರಿಂದ ನೇರ ಸಂಪರ್ಕ ಕಲ್ಪಿಸುವ ಈ ರಸ್ತೆ ತುಂಬ ಹದಗೆಟ್ಟಿತ್ತು. ನಬಾರ್ಡ್ ಯೋಜನೆಯಡಿ 3 ಕಿ.ಮೀ. ಉದ್ದದ ರಸ್ತೆಯ ಡಾಂಬರೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಎತ್ತಿನಗಾಡಿಗಳು ಹೋಗದಂತಹ ಹಳ್ಳಿಗೂ ‘ನಮ್ಮ ಗ್ರಾಮ ನಮ್ಮ ರಸ್ತೆ’ ಸೇರಿದಂತೆ ವಿವಿಧ ಯೋಜನೆಗಳಡಿ ಅನುದಾನ ಬಿಡುಗಡೆ ಮಾಡಿಸಿ ರಸ್ತೆ ನಿರ್ಮಿಸಲಾಗಿದೆ. ಕುಡಿಯುವ ನೀರು, ರಸ್ತೆ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಂದು ಶಾಸಕರು ಹೇಳಿದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಆರ್. ನಾಗೇಂದ್ರನಾಯ್ಕ್, ಸಿ.ಬಿ. ಪಾಪಣ್ಣ, ತಾಲ್ಲೂಕು ಪಂಚಾಯ್ತಿ ಸದಸ್ಯೆ ತಿಪ್ಪಮ್ಮ ನಾಗರಾಜು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಸಂತಲಕ್ಷ್ಮಿ, ಗುರುಮೂರ್ತಿ, ಎಂಜಿನಿಯರ್‌ಗಳಾದ ಟಿ.ಎಸ್. ಮಲ್ಲಿಕಾರ್ಜುನ್, ಎಂ. ಮಂಜಣ್ಣ, ಗುತ್ತಿಗೆದಾರ ಎಚ್. ಲೋಕೇಶ್, ವಿಜಯಲಕ್ಷ್ಮಿ ಚಿತ್ರಲಿಂಗಪ್ಪ, ದೊರೆಸ್ವಾಮಿ, ಲಕ್ಷ್ಮೀದೇವಿ ವೇದಮೂರ್ತಿ, ಸೂರ್ಯನಾಯ್ಕ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.