ADVERTISEMENT

ಅಂತರರಾಷ್ಟ್ರೀಯ ಟೇಕ್ವಾಂಡೊ: ಶಾರದಾ ವಿದ್ಯಾನಿಕೇತನ ತಂಡ ಭಾಗಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 6:50 IST
Last Updated 24 ಏಪ್ರಿಲ್ 2017, 6:50 IST

ಮಂಗಳೂರು: ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಚೀನದ ಕಿಂಗ್ಡಾವ್‌ ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಟೇಕ್ವಾಂಡೊ ಚಾಂಪಿಯನ್‌ಶಿಪ್‌ನಲ್ಲಿ ಶಾಲೆಯನ್ನು ಪ್ರತಿನಿಧಿಸಲಿದ್ದಾರೆ.

ಇದೇ 27ರಿಂದ ಮೇ 3ರವರೆಗೆ ಚೀನಾದ ಕಿಂಗ್‍ಡಾವ್ ನಗರದಲ್ಲಿ ನಡೆಯಲಿರುವ ಅಂತರ ರಾಷ್ಟ್ರೀಯ ಟೇ ಕ್ವಾಂಡೊ ಚಾಂಪಿಯನ್‌ಶಿಪ್‌ನಲ್ಲಿ ವಿವಿಧ ರಾಜ್ಯಗಳಿಂದ 15 ಸ್ಪರ್ಧಾಳುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜು, ಮೂವರು ಸ್ಪರ್ಧಾಳುಗಳು ಆಯ್ಕೆಯಾಗಿದ್ದಾರೆ. ದ್ವಿತೀಯ ಪಿಯುಸಿಯ ಶಶಾಂಕ್ ಆರ್ (55 ಕೆ.ಜಿ. ತೂಕ ಹಾಗೂ ಜೂನಿಯರ್ ವಿಭಾಗ), 10ನೇ ತರಗತಿಯ ಪ್ರಜ್ವಲ್ ಕೆ-  (48 ಕೆ.ಜಿ. ಹಾಗೂ ಕೆಡೆಟ್ ವಿಭಾಗ) ಮತ್ತು  ನಿಶಾಂತ್ ಕೋಟ್ಯಾನ್ (48 ಕೆ.ಜಿ. ಹಾಗೂ ಕೆಡೆಟ್ ವಿಭಾಗ) ಭಾರತದ ನ್ಯಾಶನಲ್‌ ಫೆಡರೇಶನ್‌ನ ಆಯ್ಕೆ ಸಮಿತಿಯಿಂದ ಆಯ್ಕೆಯಾಗಿದ್ದಾರೆ.

ADVERTISEMENT

ಬಿ.ಎಂ. ಕೃಷ್ಣ ಮೂರ್ತಿ, ಭಾರತ ತಂಡದ ತರಬೇತುದಾರಾಗಿ ಹಾಗೂ ಶಾಲಾ ಟೇಕ್ವಾಂಡೊ ತರಬೇತುದಾರ, ಗುರುರಾಜ್ ಇಟಗಿ ಭಾರತ ತಂಡದ ಸಹಾಯಕ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.