ADVERTISEMENT

ಆತ್ಯಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 9:31 IST
Last Updated 10 ಮಾರ್ಚ್ 2017, 9:31 IST

ಸುರತ್ಕಲ್‌: ಕಾವೂರಿನ ಕಾಲೇಜಿನಲ್ಲಿ ಮಾನಸಿಕ ಕಿರುಕುಳದಿಂದ ನೊಂದು ಕೇರಳ ಮೂಲದ ವಿದ್ಯಾರ್ಥಿನಿ ಆತ್ಮಹ ತ್ಯೆಗೆ ಯತ್ನಿಸಿದ್ದು, ಕಾಲೇಜು ಆಡಳಿತ ಮಂಡಳಿಯ ಧೋರಣೆ ಖಂಡಿಸಿ, ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.

ಕಾವೂರಿನ ಕಾಲೇಜೊಂದರ ತೃತೀಯ ವರ್ಷ ಸ್ಪೀಚ್ ಆಂಡ್ ಹಿಯ ರಿಂಗ್ ಕೋರ್ಸ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಅದೇ ಹಾಸ್ಟೆ ಲ್‌ನ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಿಸಿದ್ದರು.

ಇದರಿಂದ ಆಕ್ರೋಶಿತರಾದ ವಿದ್ಯಾರ್ಥಿಗಳು ಬುಧವಾರ ಕಾಲೇಜಿನಲ್ಲಿ ಪ್ರತಿಭಟನೆ ಮಾಡಿ, ಕಾಲೇಜು ಮುಖ್ಯ ಸ್ಥರ ಜತೆಗೆ ಮಾತನಾಡಲು ಪ್ರಯತ್ನಿಸಿದ್ದರು. ಯಾವುದೇ ರೀತಿಯಲ್ಲಿ ಸ್ಪಂದಿ ಸದೇ ಇದ್ದುದರಿಂದ ಎಸ್‌ಎಫ್‌ಐ ನೇತೃತ್ವ ದಲ್ಲಿ ಗುರುವಾರ ತರಗತಿ ಬಹಿಷ್ಕರಿಸಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದರು. 

ವಿನಾಕಾರಣ ಇಂಟರ್ನಲ್ ಅಂಕ ಕಡಿತಗೊಳಿಸಿ, ಪರೀಕ್ಷೆಯಲ್ಲಿ ಅನುತ್ತೀ ರ್ಣಗೊಳಿಸಿದ ಕಾಲೇಜಿನ ನಿರ್ಧಾರ ದಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಇದೇ ರೀತಿ ತೃತೀಯ ವರ್ಷದ 18 ವಿದ್ಯಾರ್ಥಿಗಳನ್ನೂ ಅನುತ್ತೀರ್ಣಗೊಳಿ ಸಲಾಗಿದೆ. ವಿಶ್ವವಿದ್ಯಾಲಯದ ನಿಯಮ ಪ್ರಕಾರ ಈ ರೀತಿ ವಿದ್ಯಾರ್ಥಿಗಳನ್ನು ಹಿಂ ದಕ್ಕೆ ತಳ್ಳುವಂತಿಲ್ಲ ಎಂದು ಎಂದು ವಿದ್ಯಾ ರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಯುತ ಸಮಸ್ಯೆಗಳನ್ನು ಸರಿ ಪಡಿಸಿ, ವಿದ್ಯಾರ್ಥಿ ಸ್ನೇಹಿ ಪರಿಸರ ಒದ ಗಿಸುವ ತನಕ ಹೋರಾಟ ಮುಂದು ವರಿಸುವುದಾಗಿ ಎಚ್ಚರಿಸಿದರು.
ಎಸ್‌ಎಫ್‌ಐ ಜಿಲ್ಲಾ ಘಟಕದ ಉಪಾಧ್ಯಕ್ಷ ಹಂಝ ಕಿನ್ಯಾ, ಅಮಲ್ ಕೆ. ಜಾರ್ಜ್, ಹನುಮಂತ ಪಂಜಿಮೊಗರು, ವಿದ್ಯಾರ್ಥಿಗಳಾದ ಸೋನು ಮೋಹನ್, ಮನೀಷ ಮುಂತಾದವರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT