ADVERTISEMENT

ಖಾಸಗಿಯವರಿಗೂ ಮತ್ಸ್ಯದರ್ಶಿನಿ ಏಜೆನ್ಸಿ

ಕೆಎಫ್‌ಡಿಸಿ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 7:11 IST
Last Updated 23 ಜುಲೈ 2017, 7:11 IST

ಮಂಗಳೂರು: ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ (ಕೆಎಫ್‌ಡಿಸಿ) ವತಿಯಿಂದ ಮೀನು ಮಾರಾಟ ಮಳಿಗೆ ಹಾಗೂ ಮೀನು ಖಾದ್ಯಗಳ ಉಪಾಹಾರ ಗೃಹಗಳನ್ನು ನಿರ್ವಹಿಸುತ್ತಿರುವ ಮತ್ಸ್ಯದರ್ಶಿನಿ ಹೆಸರಿನಲ್ಲಿ ಖಾಸಗಿಯ ವರಿಗೂ ಏಜೆನ್ಸಿಗಳನ್ನು ನೀಡಲು ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೆಎಫ್‌ಡಿಸಿ ಅಧ್ಯಕ್ಷ ರಾಜೇಂದ್ರ ನಾಯಕ್‌ ತಿಳಿಸಿದರು.

ನಿಗಮದ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಆಡಳಿತ ಮಂಡಳಿ ಸಭೆಯ ಬಳಿಕ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ‘ಮತ್ಸ್ಯದರ್ಶಿನಿ ಮೀನು ಮಾರಾಟ ಮಳಿಗೆಗಳು ಹಾಗೂ ಮೀನು ಉಪಾಹಾರ ಗೃಹಗಳಲ್ಲಿ ಉತ್ತಮವಾಗಿ ವಹಿವಾಟು ನಡೆಯುತ್ತಿದೆ.

ಏಜೆನ್ಸಿಗಾಗಿ ಖಾಸಗಿಯವರಿಂದಲೂ ಬೇಡಿಕೆ ಬಂದಿದೆ. ಕೇರಳದ ಕೊಚ್ಚಿನ್‌ನಲ್ಲಿ ಒಬ್ಬರು ಈಗಾಗಲೇ ಏಜೆನ್ಸಿ ಪಡೆದಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಏಜೆನ್ಸಿ ಕೋರಿರುವವರಿಗೆ ಮತ್ಸ್ಯದರ್ಶಿನಿ ಬ್ರಾಂಡ್‌ ಬಳಸಿಕೊಳ್ಳಲು ಅವಕಾಶ ನೀಡಲಾಗುವುದು. ರಿಯಾಯ್ತಿ ದರದಲ್ಲಿ ಮೀನು ಹಾಗೂ ಇತರೆ ಪದಾರ್ಥಗಳನ್ನು ಪೂರೈಸಲಾಗುವುದು’ ಎಂದರು.

ADVERTISEMENT

ಈಗ 18 ಹವಾನಿಯಂತ್ರಿತ ಮೀನು ಮಾರಾಟ ಮಳಿಗೆಗಳು, ಮೀನು ಉಪಹಾರ ಗೃಹಗಳು, 25 ಆಧುನಿಕ ಸುಸಜ್ಜಿತ ಮೀನು ಮಾರುಕಟ್ಟೆಗಳು, ಒಂದು ಯುರೋಪಿಯನ್‌ ಸ್ಟ್ಯಾಂಡರ್ಡ್‌ ಮಾದರಿಯ ಆಧುನಿಕ ಮೀನು ಸಂಸ್ಕರಣಾ ಘಟಕ, ಎರಡು ಮೀನು ಸಂಸ್ಕರಣಾ ಪೂರ್ವ ಘಟಕಗಳು, ಆರು ಮಂಜುಗಡ್ಡೆ ಸ್ಥಾವರಗಳು, ಎರಡು ಸಂಚಾರಿ ಮೀನು ಮಾರಾಟ ಮತ್ತು ಮೀನು ಉಪಹಾರ ಗೃಹ ವಾಹನಗಳು, ಆಲಂಕಾರಿಕ ಮೀನುಗಳು ಮತ್ತು ಅದರ ಸಾಮಗ್ರಿಗಳ ಮಾರಾಟ ವ್ಯವಸ್ಥೆಯನ್ನು  ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಮತ್ಸ್ಯಾಶ್ರಯ ಯೋಜನೆಯಡಿ ಬಡ ಮೀನುಗಾರರ ಕುಟುಂಬಗಳಿಗೆ ವಸತಿ ಸೌಕರ್ಯ ಕಲ್‍ಪಿಸುವ ಕಾರ್ಯಕ್ರಮದ ನೋಡಲ್ ಏಜೆನ್ಸಿಯಾಗಿ ನಿಗಮವು 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. 17,000 ಫಲಾನುಭವಿಗಳಿಗೆ ₹ 82.68 ಕೋಟಿ ಬಿಡುಗಡೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ,ಉಡುಪಿ ಜಿಲ್ಲೆಯ ತೆಕ್ಕಟ್ಟೆಯಲ್ಲಿ ಕ್ರಮ ವಾಗಿ ₹ 68.87 ಲಕ್ಷ ಹಾಗೂ ₹ 43.24 ಲಕ್ಷ ಸುಸಜ್ಜಿತ ಮೀನು ಮಾರು ಕಟ್ಟೆ ನಿರ್ಮಾಣವಾಗಿದೆ. ಉಡು ಪಿ, ಸಾಗರ ಮತ್ತು ನರಸಿಂಹರಾ ಜಪುರ ದಲ್ಲಿ ಅತ್ಯಾ ಧುನಿಕ ಮೀನು ಮಾರುಕಟ್ಟೆ ನಿರ್ಮಾಣದ ಪ್ರಸ್ತಾವ ಸಿದ್ಧಪಡಿಸ ಲಾಗಿದೆ ಎಂದರು.

ನಿಗಮದ ನಿರ್ದೇಶಕರಾದ ದೀಪಕ್‌ ಕುಮಾರ್, ರಮೇಶ್ ಪೂಜಾರಿ, ರಾಮ ಎಂ.ಮೊಗೇರ, ಅಬ್ದುಲ್ ಅಝೀಝ್‌, ಎಂ.ಬಿ.ಶಿವಣ್ಣ, ವಿಲಿಯಂ ಮಾರ್ಟಿಸ್, ಆರ್‌.ಕಿರಣ್‌ಕುಮಾರ್‌, ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಶೆಟ್ಟಿ, ನಿಗಮದ ಪದನಿ ಮಿತ್ತ ನಿರ್ದೇಶಕರೂ ಆಗಿರುವ ಮೀನು ಗಾರಿಕೆ ಇಲಾಖೆ ನಿರ್ದೇಶಕ ಎಚ್‌.ಎಸ್‌. ವೀರಪ್ಪ ಗೌಡ, ಸಾರ್ವಜನಿಕ ಉದ್ದಿಮೆ ಗಳ ಇಲಾಖೆ ಕಾರ್ಯದರ್ಶಿ ರಾಜೇಶ್ವರಿ ಲಿಂಗಯ್ಯ, ಹಣಕಾಸು ಇಲಾಖೆ ಉಪ ಕಾರ್ಯದರ್ಶಿ ಮುರಳೀಧರ, ನಿಗಮದ ಪ್ರಧಾನ ವ್ಯವಸ್ಥಾಪಕ ಪಿ.ಎಂ.ಮುದ್ದಣ್ಣ ಉಪಸ್ಥಿತರಿದ್ದರು.

**

ತದಡಿ ಮೀನು ಸಂಸ್ಕರಣಾ ಘಟಕ
ಉತ್ತರ ಕನ್ನಡ ಜಿಲ್ಲೆಯ ತದ ಡಿಯಲ್ಲಿ ಹಳೆಯ ಮೀನು ಸಂಸ್ಕ ರಣಾ ಘಟಕವನ್ನು ಅಭಿವೃದ್ದಿ ಪಡಿಸಿ ಐರೋಪ್ಯ ರಾಷ್ಟ್ರ ಒಕ್ಕೂಟದ ಗುಣಮಟ್ಟ ದಲ್ಲಿ ಮೀನು ಸಂಸ್ಕರಣೆ ಮತ್ತು ರಫ್ತು ಘಟಕವನ್ನು ಸ್ಥಾಪಿಸಲಾ ಗುತ್ತಿದೆ. ₹ 13.34 ಕೋಟಿ ವೆಚ್ಚದ ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ₹ 5 ಕೋಟಿ ಅನುದಾನ ಒದಗಿಸುತ್ತಿವೆ. ನಿಗಮ ₹ 3.34 ಕೋಟಿ ಭರಿಸುತ್ತಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಶೆಟ್ಟಿ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.