ADVERTISEMENT

ಚಿರತೆಗಳ ಹಾವಳಿ ತಡೆಗೆ ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 7:36 IST
Last Updated 16 ಫೆಬ್ರುವರಿ 2017, 7:36 IST
ಮೂಡುಬಿದಿರೆ: ಶಿರ್ತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲೆಬೆಟ್ಟು ಕೊಡಂಬೇಲು ಪರಿಸರದಲ್ಲಿ ಆಗಾಗ್ಗೆ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಈಗಾ ಗಲೇ ಕೆಲವು ದನಗಳನ್ನು ತಿಂದು ಹಾಕಿದ್ದು ಸಾರ್ವಜನಿಕರು ಭಯ ಭೀತರಾಗಿದ್ದಾರೆ.
 
ಕೂಡಲೇ ಚಿರತೆ ಹಾವಳಿ ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಸೋಮವಾರ ನಡೆ ದ ಶಿರ್ತಾಡಿ ಗ್ರಾಮ ಸಭೆಯಲ್ಲಿ ಅರಣ್ಯ ಅಧಿಕಾರಿಯನ್ನು  ಒತ್ತಾಯಿಸಿದರು.
 
ಪಂಚಾಯಿತಿ ಅಧ್ಯಕ್ಷೆ ಲತಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.  ಚಿರತೆಗಳು ಸುಳಿದಾಡುತ್ತಿರುವುದರ ವಿಷಯದ ಕುರಿತು ಈವರೆಗೆ ಯಾರೂ ಗಮನಕ್ಕೆ ತಂದಿಲ್ಲ. ಬೋನು ಇಟ್ಟು ಚಿರತೆ ಹಿಡಿಯಲು ಪ್ರಯತ್ನಿಸಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ ಚಂದ್ರಕಾಂತ್ ಸಭೆಯಲ್ಲಿ ಹೇಳಿದರು. 
 
ಶಿರ್ತಾಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಸೀಬಾ ಅವರು ಮಾಹಿತಿ ನೀಡಿ, ದಡಾರ -ರುಬೆಲ್ಲಾ ಲಸಿಕೆ ಕುರಿತು ವದಂತಿಗಳಿಗೆ ಕಿವಿಗೊಡಬೇಡಿ. ಎಲ್ಲ ಮಕ್ಕಳಿಗೂ ಲಸಿಕೆ ಯನ್ನು ತಪ್ಪದೇ ಹಾಕಿಸುವಂತೆ  ಹೇಳಿದರು.
 
ಶಿರ್ತಾಡಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸದ್ಯ ನಾನು ಒಬ್ಬಳೇ ವೈದ್ಯಾಧಿಕಾರಿ ಇರುವುದರಿಂದ ರಾತ್ರಿ ವೇಳೆ ಕರ್ತವ್ಯ ನಿರ್ವಹಣೆ ಸಾಧ್ಯ ಆಗುತ್ತಿಲ್ಲ ಎಂದು ಡಾ. ನಸೀಬಾ ಸಭೆಗೆ ಮಾಹಿತಿ ನೀಡಿದರು.
 
ಉದ್ಯೋಗ ಖಾತರಿ ಯೋಜನೆಯಲ್ಲಿ ಹಳೆ ಬಾವಿಗಳನ್ನು ಪುನಶ್ಚೇತನಗೊ ಳಿಸಲು ಅನುದಾನ ಸಿಗುತ್ತಿಲ್ಲ. ಹಳೆ ಬಾವಿ ಗಳಿಗೆ ರಿಂಗ್ ಹಾಕಲು ಅನುದಾನದ ಅಗತ್ಯ ಇದೆ  ಎಂದು ಸದಸ್ಯ ಸುಕೇಶ್ ಶೆಟ್ಟಿ ಹೇಳಿದರು. 
 
ಈ ಬಗ್ಗೆ ನಿರ್ಣಯ ಮಾಡಿ ಜಿಲ್ಲಾ ಪಂಚಾಯಿತಿಗೆ  ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಭಿವೃದ್ಧಿ ಅಧಿಕಾರಿ ಭೀಮಾ ನಾಯ್ಕ್ ಹೇಳಿದರು.  ಮಕ್ಕಿ ರಸ್ತೆ ಅವ್ಯವಸ್ಥೆ ಕುರಿತು ಗ್ರಾಮಸ್ಥ ಅಬೂಬಕ್ಕರ್ ಕೇಳಿದಾಗ, ಮಳೆ ಹಾನಿ ದುರಸ್ತಿ ಅಡಿ ಈ ಕುರಿತು ₹ 5 ಲಕ್ಷ ಅನುದಾನ ಇಡಲಾಗಿದೆ ಎಂದು ಎಂಜಿನಿಯರ್‌ ಇಲಾಖೆ ಕೃಷ್ಣ ನಾಯ್ಕ್ ಹೇಳಿದರು.
 
ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ, ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗವೇಣಿ  ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಸುವರ್ಣ ಪಾಲ್ಗೊಂಡರು.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.