ADVERTISEMENT

ಚೀನಿ ಪ್ರಜೆಯ ಬೆರಳು ಮರುಜೋಡಣೆ

​ಪ್ರಜಾವಾಣಿ ವಾರ್ತೆ
Published 26 ಮೇ 2017, 5:53 IST
Last Updated 26 ಮೇ 2017, 5:53 IST

ಮಂಗಳೂರು: ಮೇ 16ರಂದು ಕರಾವಳಿ ಕಾವಲು ಪಡೆಯ ಸದಸ್ಯರು ರಕ್ಷಿಸಿದ 31 ವರ್ಷ ವಯಸ್ಸಿನ ಚೀನಿ ನಾವಿಕ ಹಾಂಗ್ ಜಿಯಾಂಗ್ಯು ಅವರ ತೋರುಬೆರಳು ತುಂಡಾಗಿತ್ತು. ಆಳವಾದ ಸಮುದ್ರದಲ್ಲಿ ಕೆಲಸ ಮಾಡುವಾಗ ಬೆರಳು ತುಂಡಾಗಿದ್ದು, ಎ.ಜೆ. ಆಸ್ಪತ್ರೆ ಮತ್ತು ಸಂಶೋ ಧನಾ ಕೇಂದ್ರದಲ್ಲಿ ಅವರ ಬೆರಳನ್ನು ಮರುಜೋಡಿಸಲಾಗಿದೆ.

ಬಹುತೇಕ ಜೋತಾಡುವ ಸ್ಥಿತಿಯ ಲ್ಲಿದ್ದ ಬೆರಳಿಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು.  ಡಾ. ಸನತ್ ಭಂಡಾರಿ, ಡಾ. ದಿನೇಶ್ ಕದಂ ಮತ್ತು ಡಾ. ಗೌರವ್ ಶೆಟ್ಟಿ ಅವರು ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮುರಿದ ಮೂಳೆಯ ಜೊತೆ ಸ್ನಾಯು ರಜ್ಜುವಿನ ಮರುಜೋಡಣೆ ಮತ್ತು ಮೈಕ್ರೋವ್ಯಾಸ್ಕುಲರ್ ಶಸ್ತ್ರಚಿಕಿತ್ಸೆಯನ್ನು ವೈದ್ಯರ ತಂಡ ನಡೆಸಿದೆ.

ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಆತನನ್ನು ಮೇ18ರಂದು ಚೀನಾ ದೇಶಕ್ಕೆ ವಿಮಾ ನದ ಮೂಲಕ ಕಳುಹಿಸಲು ಆಸ್ಪತ್ರೆ ಯಿಂದ ಬಿಡುಗಡೆ ಮಾಡಲಾಗಿದೆ. ಯಾವುದೇ ಸಂದರ್ಭದಲ್ಲಿ ಅಂಗ ಛೇದನವಾದಾಗ ಬೇರ್ಪಟ್ಟ ಭಾಗವನ್ನು ಶುದ್ಧವಾದ ಪಾಲಿಥೀನ್ ಚೀಲದಲ್ಲಿ ಸಂಗ್ರಹಿಸಿ ಬಿಗಿಯಾಗಿ ಕಟ್ಟಿ ಆ ಚೀಲವನ್ನು ಮಂಜುಗಡ್ಡೆ ಹಾಕಿದ ಶೀತಲೀಕರಿಸಿದ ನೀರಿನಲ್ಲಿಟ್ಟು ಶೀಘ್ರವಾಗಿಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕಾಗಿ ವೈದ್ಯರು ಸಲಹೆ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.