ADVERTISEMENT

ತಡೆಗೋಡೆ ಸೀತಾನದಿ ಪಾಲಾಗುವ ಭೀತಿ!

ಸೆಟ್ಟೊಳ್ಳಿಯಲ್ಲಿ ಅವೈಜ್ಞಾನಿಕ ಕಾಮಗಾರಿ– ಸ್ಥಳೀಯರ ಆರೋಪ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 9:08 IST
Last Updated 6 ಮಾರ್ಚ್ 2017, 9:08 IST
ಸಂದೇಶ್ ಶೆಟ್ಟಿ ಆರ್ಡಿ
ಸಿದ್ದಾಪುರ:  ಕೃಷಿ ಅಭಿವೃದ್ಧಿ ಹಾಗೂ ಕುಡಿಯುವ ನೀರಿಗಾಗಿ ಸರ್ಕಾರ ಸಾಕಷ್ಟು ಅನುದಾನ ಮೀಸಲಿರಿಸಿ, ವಿವಿಧ ಯೋಜನೆ ಜಾರಿಗೊಳಿಸುತ್ತಿದೆ. 

ಲಕ್ಷಾಂತರ ರೂಪಾಯಿ ವ್ಯಯಿಸಿ ಯೋಜನೆ ಅನುಷ್ಠಾನಗೊಳಿಸಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದರೆ ಎಷ್ಟೇ ಪ್ರಮುಖವಾದ ಯೋಜನೆಯಾದರೂ ಅದು ಪ್ರಯೋಜನಕ್ಕೆ ಬರಲ್ಲ. ಅಂತಹ ಯೋಜನೆಗಳಲ್ಲಿ ಒಂದಾದ ಸೆಟ್ಟೊಳ್ಳಿಯಲ್ಲಿ ಸೀತಾನದಿಗೆ ನಿರ್ಮಿಸಿದ ತಡೆಗೋಡೆ ನೀರಿನಲ್ಲಿ ಕೊಚ್ಚಿ ಕೊಂಡು ಹೋಗುವ ಭೀತಿಯಲ್ಲಿದೆ.
 
ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೆಟ್ಟೊಳ್ಳಿ ನಂದಿಕೋಣ ಎಂಬಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟಿನ ಸಮೀಪದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಸುಮಾರು ₹ 49 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿದ್ದರೂ ಅವೈಜ್ಞಾನಿ ಕವಾಗಿದೆ ಎನ್ನುವುದು ಸ್ಥಳೀಯರ ಆರೋಪ. ಮಳೆಗಾಲದಲ್ಲಿ ಅತ್ಯಂತ ರಭಸದಿಂದ ನೀರು ಹರಿಯುವುದರಿಂದ ಯಾವುದೇ ಬಲವಿಲ್ಲದೆ ಶಿಲೆಗಲ್ಲುಗಳನ್ನೇ ಜೋಡಿಸಿದ ತಡೆಗೋಡೆಯು ನೀರುಪಾ ಲಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದು ದೂರಿದ್ದಾರೆ.
 
ಬಲವಾದ ಪಾಯವೇ ಇಲ್ಲ!: ಸಾಮಾನ್ಯವಾಗಿ ನದಿಗಳಿಗೆ ತಡೆಗೋಡೆ ರಚಿಸುವಾಗ ಪ್ರಾರಂಭದಲ್ಲಿ ಸಿಮೆಂಟ್, ಜೆಲ್ಲಿ ಮಿಶ್ರಣಗೊಳಿಸಿ ಬಲವಾದ ಪಾಯ ನಿರ್ಮಿಸುತ್ತಾರೆ. ತದನಂತರ ಒಂದೊಂದೇ ಕಲ್ಲುಗಳನ್ನು ಕಟ್ಟುತ್ತಾ ಸೀಮೆಂಟ್‌ನಿಂದ ಬಲಗೊಳಿಸಬೇಕು. ಅಂತಿಮ ಹಂತದಲ್ಲಿಯೂ ಸಹ ಜೆಲ್ಲಿ, ಸಿಮೆಂಟ್, ಮರಳಿನಿಂದ ವ್ಯವಸ್ಥಿತವಾಗಿ ಬೆಡ್ ಹಾಕುತ್ತಾರೆ. ಇದರಿಂದ ತಡೆಗೋಡೆಯು ಬಲಗೊಳ್ಳುವುದಲ್ಲದೆ ದೀರ್ಘ ಕಾಲದವರೆಗೆ ಸ್ಥಿರವಾಗಿರುತ್ತದೆ.

ಆದರೆ, ಇಲ್ಲಿ ತಡೆಗೋಡೆಯಲ್ಲಿ ಕೇವಲ ಶಿಲೆಗಲ್ಲು ಮಾತ್ರ ಜೋಡಿಸಿದ್ದಾರೆ. ನದಿ ತಿರುವಿನಲ್ಲಿಯೂ ಸಹ ಕಲ್ಲು ಮಾತ್ರ ಜೋಡಿಸಿದ್ದರಿಂದ ಮಳೆಗಾಲದಲ್ಲಿ ನೀರು ಪಾಲಾಗುವ ಸಾಧ್ಯತೆ ಅಧಿಕವಾಗಿದೆ ಎಂಬುದು ಜನರ ಅಭಿಪ್ರಾಯ.
 
ನದಿಯ ಹೂಳೆತ್ತಿಲ್ಲ!: ಕಿಂಡಿ ಅಣೆಕಟ್ಟು ನಿರ್ಮಿಸುವಾಗ ಸುಮಾರು 450 ಮೀಟರ್‌ವರೆಗೆ ನದಿಯ ಹೂಳೆ ತ್ತಬೇಕು. ಆದರೆ, ನಂದಿಕೋಣದಲ್ಲಿ ನಿರ್ಮಿಸಿದ ನದಿಯಲ್ಲಿ ಇದುವರೆಗೆ ಹೂಳೆತ್ತಿಲ್ಲ. ನದಿಯಲ್ಲಿನ ಹೂಳೆತ್ತಿದರೆ ನೀರಿನ ಸಂಗ್ರಹ ಇಮ್ಮಡಿಗೊಳ್ಳುತ್ತದೆ. ಅಧಿಕಾರಿಗಳು ಕಿಂಡಿ ಅಣೆಕಟ್ಟು ನಿರ್ಮಿಸಿ ಕಾಮಗಾರಿ ಮುಗಿದಿದೆ ಎಂದು ಕೈತೊಳೆ ದುಕೊಂಡಿದ್ದಾರೆ ಎಂಬುದು ನಾಗರಿಕರ ದೂರು.
 
ಕುಡಿಯಲು ಹಾಗೂ ಕೃಷಿಭೂಮಿಗೆ ಸಾಕಷ್ಟು ನೀರಿಲ್ಲವೆಂದು ಬೊಬ್ಬೆ ಹೊಡೆ ಯುವ ಬದಲು ಇರುವ ನೀರನ್ನು ಉಳಿಸಿಕೊಳ್ಳಬೇಕು. ಈ ಕಿಂಡಿ ಅಣೆಕ ಟ್ಟಿನಲ್ಲಿ ನಾಲ್ಕು ಮೀಟರ್‌ವರೆಗೆ ನೀರನ್ನು ನಿಲ್ಲಿಸುವ ಸಾಮರ್ಥ್ಯವಿದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳು ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಂಡಲ್ಲಿ ಸುತ್ತಲಿನ ಜನರಿಗೆ ಸಾಕಷ್ಟು ನೀರು ಪೂರೈಸುವು ದಲ್ಲದೆ ಅಂತರ್ಜಲದ ಮಟ್ಟವೂ ಹೆಚ್ಚಳ ವಾಗ ಲಿದೆ ಎಂಬುದು ಸ್ಥಳೀಯರ ಮಾತು.
 
* ಕಿಂಡಿ ಅಣೆಕಟ್ಟಿಗೆ ಪೂರ್ಣ ಪ್ರಮಾಣದಲ್ಲಿ ಹಲಗೆ ಒದಗಿ ಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ದ್ದೇವೆ. ಕಾಮಗಾ ರಿಯ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ
ಪ್ರವೀಣ್, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ
 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.