ADVERTISEMENT

‘ತನಿಖಾ ವರದಿಯಲ್ಲಿ ಸ್ವಂತಿಕೆ ನಾಪತ್ತೆ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 5:20 IST
Last Updated 22 ನವೆಂಬರ್ 2017, 5:20 IST

ಮಂಗಳೂರು: ‘ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ತನಿಖಾ ವರದಿಯಲ್ಲಿ ಸ್ವಂತಿಕೆ ನಾಪತ್ತೆಯಾಗಿದೆ. ಮೂರನೇ ವ್ಯಕ್ತಿಗಳು ನೀಡಿದ ಮಾಹಿತಿ ಆಧ ರಿಸಿದ ತನಿಖಾ ವರದಿಗಳೇ ಹೆಚ್ಚು ಪ್ರಕಟ ವಾಗುತ್ತಿವೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಪಿ.ಶಿವರಾಮು ಹೇಳಿದರು.

ಮೀಡಿಯಾ ಅಲ್ಯುಮ್ನಿ ಅಸೋಸಿ ಯೇಶನ್‌ ಆಫ್‌ ಮಂಗಳ ಗಂಗೋತ್ರಿ (ಮಾಮ್‌) ಹಾಗೂ ಸಂದೇಶ ಶಿಕ್ಷಣ ಮತ್ತು ಸಂಸ್ಕೃತಿ ಪ್ರತಿಷ್ಠಾನ ಜಂಟಿಯಾಗಿ ಮಂಗಳವಾರ ಸಂದೇಶ ಪ್ರತಿಷ್ಠಾನದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಾಧ್ಯಮಗಳಿಗೆ ಲಗಾಮು ಬೇಕೆ?’ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್ಚಿನ ಸಂದರ್ಭಗಳಲ್ಲಿ ಮಾಧ್ಯ ಮಗಳಲ್ಲಿ ಪ್ರಕಟವಾಗುವ ಮತ್ತು ಪ್ರಸಾರವಾಗುವ ತನಿಖಾ ವರದಿಗಳನ್ನು ಪತ್ರಕರ್ತರು ಸ್ವಂತ ಶ್ರಮದಿಂದ ಬಯಲಿಗೆ ತಂದಿರುವುದಿಲ್ಲ. ಯಾವುದೋ ವ್ಯಕ್ತಿ ಗಳು ನೀಡಿದ ಮಾಹಿತಿ ಆಧರಿಸಿ ಈ ವರದಿಗಳು ಪ್ರಕಟವಾಗುತ್ತವೆ. ರಹಸ್ಯ ಕಾರ್ಯಾಚರಣೆಗಳ ಹಿಂದೆಯೂ ಇಂತ ಹುದೇ ಅಂಶ ಕೆಲಸ ಮಾಡಿರುತ್ತದೆ ಎಂದರು.

ADVERTISEMENT

ಪೈಪೋಟಿಗೆ ಬಿದ್ದಿರುವ ಮಾಧ್ಯಮ ಗಳು ನೀತಿ ಸಂಹಿತೆಗಳನ್ನು ಮರೆತಂತೆ ವರ್ತಿಸುತ್ತಿರುವುದು ವಿಷಾದದ ಸಂಗತಿ. ಭಯೋತ್ಪಾದಕರ ದಾಳಿ ನಡೆದಾಗ ಕೆಲವು ಸುದ್ದಿ ವಾಹಿನಿಗಳು ನೇರ ಪ್ರಸಾರ ಮಾಡುತ್ತವೆ. ಇದರಿಂದ ಭಯೋತ್ಪಾದಕರಿಗೆ ಅನುಕೂಲ ಆಗಬ ಹುದು ಎಂಬ ಯೋಚನೆಯೂ ಅವರಿಗೆ ಇದ್ದಂತಿಲ್ಲ. ಇತರರ ಕಡೆ ಬೆರಳು ತೋರು ವುದನ್ನಷ್ಟೇ ಪತ್ರಿಕೋದ್ಯಮ ಎಂದು ಭಾವಿಸುವ ಜನರು ಮಾಧ್ಯಮಗಳಲ್ಲಿ ಹೆಚ್ಚುತ್ತಿದ್ದಾರೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಚಿದಂಬರ ಬೈಕಂ ಪಾಡಿ, ‘ಸುದ್ದಿ ನೀಡುವ ಆತುರದಲ್ಲಿ ಪತ್ರ ಕರ್ತನಿಂದ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಆಗುವಂತಹ ಕೆಲಸಗಳು ಆಗಬಾರದು. ಈ ಎಚ್ಚರ ಎಲ್ಲ ಪತ್ರಕರ್ತರಲ್ಲಿ ಇರ ಬೇಕು’ ಎಂದರು.

ನಂತರ ನಡೆದ ಸಂವಾದದಲ್ಲಿ ಪತ್ರಕರ್ತರಾದ ಚಿದಂಬರ ಬೈಕಂಪಾಡಿ, ಬಾಲಕೃಷ್ಣ ಹೊಳ್ಳ, ಸಾಮಾಜಿಕ ಹೋರಾ ಟಗಾರ ದಿನೇಶ್ ಹೊಳ್ಳ, ಮಾಧ್ಯಮ ಚಿಂತಕ ಫಾದರ್ ರಿಚರ್ಡ್‌ ಡಿಸೋಜ, ವಕೀಲ ಸಂತೋಷ್ ಪೀಟರ್‌ ಡಿಸೋಜ ವಿಷಯ ಮಂಡಿಸಿದರು.

ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾದರ್ ವಿಕ್ಟರ್‌ ವಿಜಯ್‌ ಲೋಬೊ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಮ್‌ ಅಧ್ಯಕ್ಷ
ವೇಣು ಶರ್ಮ, ಉಪಾಧ್ಯಕ್ಷ ಡಾ.ರೊನಾಲ್ಡ್‌ ಅನಿಲ್‌ ಫರ್ನಾಂಡಿಸ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.