ADVERTISEMENT

‘ತೂಗು ಸೇತುವೆ ಅಭಿವೃದ್ಧಿಗೆ ಪೂರಕ’

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 6:00 IST
Last Updated 15 ಮಾರ್ಚ್ 2017, 6:00 IST

ಮಂಗಳೂರು: ಕೆಂಜಾರಿನಲ್ಲಿರುವ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾ ರಂಭ ಹಾಗೂ ಉಪನ್ಯಾಸ ಕಾರ್ಯಕ್ರಮ ದಲ್ಲಿ ಭಾರತದ ‘ಬ್ರಿಡ್ಜ್ ಮ್ಯಾನ್’ ಎಂದೇ ಖ್ಯಾತರಾದ ಬಿ. ಗಿರೀಶ್ ಭಾರದ್ವಾಜ್‌ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಗ್ರಾಮೀಣ ಪ್ರದೇಶ ಗಳಲ್ಲಿನ ತೂಗು ಸೇತುವೆಗಳು ಜನರ ಆರೋಗ್ಯವನ್ನು ಕಾಪಾಡಲು, ಶಿಕ್ಷಣ ನೀಡಲು, ಅಭಿವೃದ್ಧಿಯನ್ನು ಹೊಂದಲು ಅತ್ಯಗತ್ಯವಾಗಿದೆ. ಇಂತಹ ಸೇತುವೆಗಳು ದೇಶದ ಅರ್ಥಿಕ ಪ್ರಗತಿಯಾಗಲು ಸಹಾ ಯವಾಗುವುದು ಎಂದು  ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಮಾತನಾಡಿ, ಗಿರೀಶ್ ಭಾರದ್ವಾಜ್‌ ಅವರು, ಮೂಲತಃ ಮೆಕ್ಯಾನಿಕಲ್ ಎಂಜಿ ನಿಯರಿಂಗ್ ಪದವಿ ಪಡೆದಿದ್ದರೂ, ನಂ ತರ ಸಿವಿಲ್ ತಾಂತ್ರಿಕತೆಯಲ್ಲಿ ವೃತ್ತಿಯನ್ನು ಮುಂದುವರಿಸಿದರು ಎಂದು ಹೇಳಿದರು.

ADVERTISEMENT

ಕಾಲೇಜಿನ ನಿರ್ದೇಶಕ ಡಾ. ಕೆ.ಇ.ಪ್ರಕಾಶ್‌ ಸ್ವಾಗತಿಸಿದರು. ಪ್ರಾಂಶು ಪಾಲ ಡಾ. ದಿಲೀಪ್ ಕುಮಾರ್ ಕೆ. ವಂದಿಸಿದರು. ಶ್ರೀದೇವಿ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಪ್ರಿಯಾಂಕ ಎನ್. ಶೆಟ್ಟಿ, ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ. ಜಯರಾಮ್ ನಾಯಕ್‌ ವೇದಿಕೆಯಲ್ಲಿದ್ದರು. ಸಿವಿಲ್ ವಿಭಾಗದ ಅಧ್ಯಾಪಕಿ ರಾಧಿಕಾ ನಿರೂಪಿಸಿದರು.

***

ಭಾರತದ 32 ನದಿಗಳಿಗೆ ಸುಮಾರು 128 ತೂಗು ಸೇತುವೆಗಳನ್ನು ನಿರ್ಮಿಸಿ, ಭಾರತದ ‘ಬ್ರಿಡ್ಜ್ ಮ್ಯಾನ್’ ಎಂದು ಪ್ರಸಿದ್ಧಿಯಾಗಿ ರುವುದು ನಮಗೆ ಹೆಮ್ಮೆ

–ಎ.ಸದಾನಂದ ಶೆಟ್ಟಿ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.