ADVERTISEMENT

ದೇಯಿ ಬೈದೆತಿಗೆ ಅವಮಾನ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 9:40 IST
Last Updated 15 ಸೆಪ್ಟೆಂಬರ್ 2017, 9:40 IST
ಕಡಬದಲ್ಲಿ ಹಿಂದೂ ಪರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು. (ಉಪ್ಪಿನಂಗಡಿ ಚಿತ್ರ)
ಕಡಬದಲ್ಲಿ ಹಿಂದೂ ಪರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು. (ಉಪ್ಪಿನಂಗಡಿ ಚಿತ್ರ)   

ಉಪ್ಪಿನಂಗಡಿ: ತುಳುನಾಡಿನ ಪುಣ್ಯ ಪುರುಷರಾದ ಕೋಟಿ-ಚೆನ್ನಯರ ಮಾತೆ ದೇಯಿ ಬೈದ್ಯೆತಿ ಮೂರ್ತಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಕಡಬದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಾಗೂ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಬುಧವಾರ ಕಡಬ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು.

ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡ ಅಧ್ಯಕ್ಷ ಜನಾರ್ದನ್‌ ರಾವ್, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ರವಿರಾಜ್ ಶೆಟ್ಟಿ, ಬಿಜೆಪಿ ಜಿಲ್ಲಾ ಸಮಿತಿಯ ಸದಸ್ಯ ಕೃಷ್ಣ ಶೆಟ್ಟಿ, ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ಹಿಂಜಾವೆ ತಾಲ್ಲೂಕು ಅಧ್ಯಕ್ಷ ಪ್ರಶಾಂತ್ ಪಂಜೋಡಿ, ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣ ಪೂಜಾರಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಕುಸುಮಾ, ಪುತ್ತೂರು ಎಲ್.ಡಿ. ಬ್ಯಾಂಕ್‌ ಅಧ್ಯಕ್ಷ ಮನೋಹರ್ ರೈ, ಕಡಬ ಸರಸ್ವತಿ ವಿದ್ಯಾಲಯ ಸಂಚಾಲಕ ವೆಂಕಟ್ರಮಣ ರಾವ್, ಹಿಂಜಾವೇ ತಾಲ್ಲೂಕು ಸಂಚಾಲಕ ವೆಂಕಟ್ರಮಣ ಕುತ್ಯಾಡಿ, ಬಜರಂದಳ ಕಡಬ ತಾಲ್ಲೂಕು ಸಂಚಾಲಕ ಯತೀಶ್ ಇದ್ದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.