ADVERTISEMENT

ದೇಯಿ ಬೈದ್ಯೆತಿ ಪುತ್ಥಳಿ ಶುದ್ದೀಕರಣಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 9:51 IST
Last Updated 13 ಸೆಪ್ಟೆಂಬರ್ 2017, 9:51 IST

ಪುತ್ತೂರು: ಪಡುಮಲೆ ವ್ಯಾಪ್ತಿಯ ಮುಡ್ಪಿನಡ್ಕದಲ್ಲಿ ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯೆತಿ ಹೆಸರಿನಲ್ಲಿ ನಿರ್ಮಾಣಗೊಂಡಿದ್ದ ಔಷಧೀಯ ವನದಲ್ಲಿ ಅಶ್ಲೀಲವಾಗಿ ಕೈಯಿಟ್ಟು ಅಪವಿತ್ರಗೊಳಿಸಿದ ಹಿನ್ನೆಲೆಯಲ್ಲಿ ಮೂರ್ತಿ ಶುದ್ಧೀಕರಣಕ್ಕೆ ಅರಣ್ಯ ಇಲಾಖೆ ಅವಕಾಶ ನೀಡದಿದ್ದುದ್ದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ದುರ್ಗಾವಾಹಿನಿ ಮಹಿಳಾ ಸಂಘ ಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿದವು.

ಈ ಎರಡು ಸಂಘಟನೆಯ ಸದಸ್ಯರಿಗೆ ಪುತ್ಥಳಿಯ ಶುದ್ಧೀಕರಣ ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಅರಣ್ಯ ಇಲಾಖೆಯವರು ಔಷಧ ವನದ ಪ್ರವೇಶ ದ್ವಾರದ ಬಾಗಿಲಿಗೆ ಬೀಗ ಹಾಕಿ ಒಳಹೋಗದಂತೆ ತಡೆದಿರುವುದು ಸಂಘಟನೆಗಳ ಆಕ್ರೋಶಕ್ಕೆ ಕಾರಣ ವಾಯಿತು.

ಅಲ್ಲಿದ್ದ ಅರಣ್ಯ ಇಲಾಖೆಯ ಅರಣ್ಯ ರಕ್ಷಕರೊಬ್ಬರ ಜೊತೆ ಮಾತುಕತೆ ನಡೆಸಿದರೂ ಅರಣ್ಯ ಇಲಾಖೆಯ ಮೇಲ ಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಅವರು ಗೇಟಿನ ಬೀಗ ತೆರವುಗೊಳಿಸಲು ನಿರಾಕರಿಸಿರುವುದು ಹಿಂದೂ ಸಂಘಟನೆಗಳನ್ನು ಕೆರಳಿಸಿತು.

ADVERTISEMENT

‘ಇದು ಸಾರ್ವಜನಿಕರ ಸ್ವತ್ತು. ಆದರೆ ಅರಣ್ಯ ಇಲಾಖೆ ಮತ್ತು ರಾಜಕೀಯ ಶಕ್ತಿಗಳು ಸೇರಿಕೊಂಡು ಮೂರ್ತಿ ಶುದ್ದೀಕರಣ ಕಾರ್ಯಕ್ಕೆ ಅಡ್ಡಿ ಪಡಿಸಿವೆ ಎಂದು ಆರೋಪಿಸಿದ ಸಂಘಟನೆಯ ಮುಖಂಡರು ಜಿಲ್ಲೆಯಾದ್ಯಂತ ಬುಧ ವಾರ ಹಿಂದೂ ಸಂಘಟನೆಗಳು ಅಲ್ಲಲ್ಲಿ ಪ್ರತಿಭಟನೆ ನಡೆಸುವಂತೆ ಹಾಗೂ ಕೋಟಿ ಚೆನ್ನಯರ ಆರಾಧನೆ ನಡೆಯುತ್ತಿರುವ ಪ್ರತೀ ಗರಡಿಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ಮಾಡುವಂತೆ’ ಬಜರಂಗದಳದ ದಕ್ಷಿಣ ಪ್ರಾಂತ ಗೋರಕ್ಷಕ್ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಕರೆ ನೀಡಿದರು.

ಅಪವಿತ್ರಗೊಂಡಿದ್ದ ದೇಯಿ ಬೈದೆ ತಿಯ ಪುತ್ಥಳಿಗೆ ದೇಶೀಯ ಗೋತಳಿಯ ಗೋವಿನ ಹಾಲು, ಸಿಯಾಳಾಭಿಷೇಕ ಮಾಡಿ ಪವಿತ್ರಗೊಳಿಸಲು ವಿಶ್ವಹಿಂದೂ ಪರಿಷತ್ ಮಾತ್ರ ಮಂಡಳಿ ಮತ್ತು ದುರ್ಗಾವಾಹಿನಿ ಸಮಿತಿಯವರು ತೀರ್ಮಾನಿಸಿದ್ದರು.

ದೂರವಾಣಿ ಮಾತುಕತೆಯ ವೇಳೆ ಇವತ್ತು ಬಾಗಿಲು ತೆರೆದು ಅವಕಾಶ ನೀಡಲು ಸಾಧ್ಯವಿಲ್ಲ. ಎರಡು ದಿವಸಗಳ ಬಳಿಕ ನೀವು ಲಿಖಿತವಾಗಿ ಮನವಿ ಸಲ್ಲಿಸಿ, ನಾವು ಮತ್ತೆ ನಿಮಗೆ ಅನುಮತಿ ನೀಡುತ್ತೇವೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿಯವರು ಹೇಳಿರುವ ವಿಚಾರವನ್ನು ಬಜರಂಗದಳದ ದಕ್ಷಿಣ ಪ್ರಾಂತ ಗೋರಕ್ಷಕ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಅವರು ಪ್ರಕಟಿಸಿದಾಗ ಜಮಾಯಿಸಿದ ಮಂದಿ ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಮೀನಾಕ್ಷಿ ಮಾತನಾಡಿ, ‘ತಾಯಿ ಸ್ವರೂಪಿಯಾದ ದೇಯಿ ಬೈದ್ಯೆತಿ ಮಹಾಮಾತೆಯ ಪುತ್ಥಳಿಯ ಎದೆಗೆ ಕೈಹಾಕಿ ಪೊಟೋ ತೆಗೆದು ಅದನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ಹರಡಿರುವುದು ಇಡೀ ಹಿಂದೂ ಸಮಾಜಕ್ಕೆ ಮಾಡಿರುವ ಅಪಮಾನ. ದುಷ್ಟ ಪ್ರವೃತ್ತಿ ಮುಂದುವರಿದರೆ ನಾವು ರಣಚಂಡಿಗಳಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸ್ಥಳೀಯರಾದ ತಾಲ್ಲೂಕು ಪಂಚಾ ಯಿತಿ ಮಾಜಿ ಸದಸ್ಯೆ ರೇಖಾ ನಾಗರಾಜ್, ಪುತ್ತೂರಿನ ಗುರುನಾರಾಯಣ ಮಂದಿ ರದ ಕಾರ್ಯನಿರ್ವಹಣಾಧಿಕಾರಿ ಆರ್.ಸಿ.ನಾರಾಯಣ, ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಮಾತನಾಡಿದರು. ಉಷಾ ಗಣೇಶ್, ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ಧನ ಬೆಟ್ಟ, ಮೋಹಿನಿ ದಿವಾಕರ್, ಅಪರ್ಣ, ಜಿಲ್ಲಾ ಪ್ರಮುಖ್ ಪ್ರೇಮ ಲತಾ ರಾವ್, ಪ್ರಮುಖರಾದ ಗೌರಿ ಬನ್ನೂರು, ಪ್ರಭಾ ಆಚಾರ್ಯ,ಉಷಾ ನಾರಾ ಯಣ,ಸುಜಾತ ಪರ್ಲಡ್ಕ, ತ್ರಿವೇಣಿ ಕರುಣಾಕರ್, ನೇಹಾ ಕಲ್ಲಾರೆ ಇದ್ದರು.

ಡಿವೈಎಸಿ ಶ್ರೀನಿವಾಸ್ ,ಸಂಪ್ಯ ಠಾಣಾ ಎಸ್‍ಐ ಅಬ್ದುಲ್ ಖಾದರ್ ಅವರು ಬಂದೋಬಸ್ತ್ ಕಲ್ಪಿಸಿದ್ದರು. ಗೇಟಿನ ಬಳಿಯೇ ಹಾಲಭಿಷೇಕ: ಅಧಿ ಕಾರಿಗಳು ಔಷಧೀಯ ವನದ ಗೇಟಿನ ಬಾಗಿಲು ತೆರೆಯಲು ಒಪ್ಪದ ಕಾರಣ ಅಸಮಾಧಾನಗೊಂಡ ಸಂಘಟ ನೆಗಳ ಕಾರ್ಯಕರ್ತರು ಗೇಟಿನ ಪಕ್ಕದಲ್ಲಿಯೇ ನೆಲಕ್ಕೆ ಹಾಲಿನಭಿಷೇಕ, ಸಿಯಾಳಭಿಷೇಕ ಮಾಡಿ ಪುತ್ಥಳಿಯ ಶುದ್ದೀಕರಣಕ್ಕೆ ಅವಕಾಶ ನೀಡದಂತೆ ಷಡ್ಯಂತ್ರ ನಡೆಸಿದ ಸರ್ಕಾರ ಮತ್ತು ಗೇಟಿನ ಬೀಗ ತೆಗೆಯದೆ ಅವಕಾಶ ನಿರಾಕರಿಸಿದ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಪ್ರಾರ್ಥಿಸಿ ಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.