ADVERTISEMENT

‘ದೇಶ ಕಾಯುವ ಸೈನಿಕರ ತ್ಯಾಗ ಪ್ರಶಂಸನೀಯ’

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 7:06 IST
Last Updated 18 ಏಪ್ರಿಲ್ 2017, 7:06 IST

ವಿಟ್ಲ: ‘ದೇಶದ ಗಡಿ ಭಾಗದಲ್ಲಿ ಸೈನಿಕ ರಿಂದ ಭದ್ರತೆಯ ಕಾರ್ಯ ನಡೆಯುತ್ತಿದೆ. ಉಗ್ರರ ಉಪಟಳ, ಪ್ರತಿಕೂಲ ಹವಾ ಮಾನದಲ್ಲಿ ದೇಶ ಕಾಯುವ ಕಾರ್ಯ ಸವಾಲಿನದ್ದು. ಇಂತಹ ಸನ್ನಿವೇಶದಲ್ಲೂ ದೇಶ ಸೇವೆಗಾಗಿ ಬದುಕನ್ನೇ ಮುಡಿ ಪಾಗಿಟ್ಟಿರುವ ಸೈನಿಕರ ತ್ಯಾಗ ಜೀವನ ಪ್ರಶಂಸನೀಯ’ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರು ದೇವಾನಂದ ಸ್ವಾಮೀಜಿ ಹೇಳಿದರು.

ಉಗ್ರರೊಂದಿಗೆ ಹೋರಾಡಿ ಸಾವಿನ ದವಡೆಯಿಂದ ಪಾರಾಗಿ ಊರಿಗೆ ಮರಳಿದ ಮುಡಿಪು ನಿವಾಸಿ ಸಂತೋಷ್ ಕುಲಾಲ್ ಅವರ ಮನೆಗೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದ ಸ್ವಾಮೀಜಿ ಬಳಿಕ ಆಶೀರ್ವಚನ ನೀಡಿದರು.‘ದೇಶ ಸೇವೆಯ ಕಾರ್ಯದಲ್ಲಿ ತಮ್ಮನ್ನು ಅರ್ಪಣೆ ಮಾಡಿಕೊಳ್ಳಲು ಎದೆಗಾರಿಕೆ ಹಾಗೂ ಆತ್ಮವಿಶ್ವಾಸ ಇದ್ದರೆ ಮಾತ್ರ ಸಾಧ್ಯ. ಸೈನಿಕರು ದೇಶದ ಸಂರಕ್ಷಣೆಯ ವಿಚಾರದಲ್ಲಿ ಬಹಳಷ್ಟು ಜಾಗೃತರಾಗಿರಬೇಕಾಗುತ್ತದೆ. ಸೈನಿಕರ ದೇಶ ಸೇವೆಯಲ್ಲಿ ಅವರ ಕುಟುಂಬದ ಸದಸ್ಯರ ತ್ಯಾಗವೂ ಕೂಡ ಅಷ್ಟೇ ಮುಖ್ಯವಾಗಿದೆ. ದೇಶ ಭಕ್ತಿಯ ಯುವಕ ರಿಗೆ ಸ್ಫೂರ್ತಿಯ ಚಿಲುಮೆಯಾಗಿರುವ ಸಂತೋಷ್ ಅವರು ಬೇಗನೆ ಗುಣ ಮುಖರಾಗಿ ದೇಶ ಸೇವಾ ಕಾರ್ಯಕ್ಕೆ ಇನ್ನಷ್ಟು ಶಕ್ತಿ ತುಂಬಲಿ’ ಎಂದು ಹಾರೈಸಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ‘ಉಗ್ರರ ಗುಂಡು ಹಾರಾಟ ದಿಂದ ಗಾಯಗೊಂಡರೂ ಲೆಕ್ಕಿಸದೆ ಹೋರಾಟ ಮಾಡಿ ಉಗ್ರರನ್ನು ಸದೆಬ ಡಿದಿರುವುದಕ್ಕೆ ಸಂತೋಷ್‌ ಅವರನ್ನು ಅಭಿನಂದಿಸಬೇಕು. ರಾಷ್ಟ್ರಕ್ಕೆ ಆಪತ್ತು ಬಂದಾಗ ಜೀವವನ್ನೇ ಪಣಕ್ಕೆ ಇಟ್ಟು ಸೇವೆ ಮಾಡುವ ಸೈನಿಕರ ಆದರ್ಶವನ್ನು ಗೌರವಿಸಬೇಕು. ಉಗ್ರರ ಹೋರಾಟದಲ್ಲಿ ಸಂತೋಷ್‌ ಅವರ ಕಾರ್ಯ ಜಿಲ್ಲೆಗೆ ಗೌರವ ಹಾಗೂ ಕೀರ್ತಿಯನ್ನು ತಂದಿದೆ. ಅವರು ಬೇಗ ಗುಣಮುಖರಾಗಿ ರಾಷ್ಟ್ರ ಸೇವೆಗೆ ಇನ್ನಷ್ಟು ಸಮಯ ಕೊಡುವಂತಾ ಗಲಿ’ ಎಂದು ಹಾರೈಸಿದರು.

ADVERTISEMENT

ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರು, ಅಮ್ಮೆಂಬಳ ಸಹಕಾರಿ ಬ್ಯಾಂಕ್ ಅಧ್ಯಕ್ಷ ಟಿ. ಜಿ ರಾಜಾರಾಮ ಭಟ್, ತಾಲ್ಲೂಕು ಪಂಚಾಯಿತಿ ಸದಸ್ಯ ನವೀನ್ ಪಾಗ ಲ್ಪಾಡಿ, ಮುಖಂಡರಾದ ಜಗದೀಶ್ ಕೂವೆತ್ತಬೈಲು, ಒಡಿಯೂರು ಶ್ರೀ ಗುರು ದೇವ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ, ಜಯಂತ್ ಜೆ. ಕೋಟ್ಯಾನ್, ಚಂದ್ರಶೇಖರ, ವೇಣುಗೋಪಾಲ ಮಾರ್ಲ, ವಾಸದೇವ ಕೊಟ್ಟಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.