ADVERTISEMENT

ನರೇಂದ್ರ ಮೋದಿಯಿಂದ ಜನಪರ ಯೋಜನೆ

​ಪ್ರಜಾವಾಣಿ ವಾರ್ತೆ
Published 28 ಮೇ 2017, 7:16 IST
Last Updated 28 ಮೇ 2017, 7:16 IST

ಉಳ್ಳಾಲ: ಹಲವು ಜನಪರ, ಯಶಸ್ವಿ ಯೋಜನೆಗಳ ಮೂಲಕ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 3 ವರ್ಷಗಳನ್ನು  ಪೂರೈಸಿದ್ದು, ಉತ್ತಮ ಆಡಳಿತ ಹಾಗೂ ವಿದೇಶ ನೀತಿಗಳ ಮೂಲಕ ಇಡೀ ವಿಶ್ವವೇ ಭಾರದತ್ತ ನೋಡುವಂತಾಗಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಹೇಳಿದರು.

ತೊಕ್ಕೊಟ್ಟಿನಿ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸರ್ಕಾರ ಮೂರು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದರಿಂದ ಶುಕ್ರ ವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ ‘ನೋಟ್ ಬ್ಯಾನ್‌ನಂತಹ ನಿರ್ಧಾರ, ಜನಧನ, ವಿಮಾ ಯೋಜನೆ ಸೇರಿದಂತೆ ದೇಶದ ಜನರಿಗೆ ರೈತರಿಗೆ, ಬಡವರ ಏಳಿಗೆಗೆ ನೂರಾರು ಯೋಜನೆಗಳು ಇಂದು ಮೋದಿ ಸರ್ಕಾರವನ್ನು ಯಶಸ್ಸಿನೆಡೆಗೆ ಕೊಂಡೊಯ್ಯವಂತೆ ಮಾಡಿವೆ. ಭ್ರಷ್ಟಾ ಚಾರರಹಿತವಾಗಿ 3ವರ್ಷ ಪೂರೈಸಿರುವ ಸರ್ಕಾರ ದೇಶದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಚಂದ್ರಹಾಸ್ ಉಳ್ಳಾಲ್ ಮಾತನಾಡಿ, ‘ಮೋದಿ ಯವರು ದೇಶ ಕಂಡಂತಹ ಒಬ್ಬ ಅಸಾ ಮಾನ್ಯ ನಾಯಕರಾಗಿದ್ದಾರೆ’ ಎಂದರು. ಪಕ್ಷದ ಹಿರಿಯ ಮುಖಂಡರಾದ ಸೀತಾರಾಮ ಬಂಗೇರರವರು ದೀನ್‌ ದಯಾಳ್ ಉಪಾಧ್ಯಾಯ, ಶ್ಯಾಂ ಪ್ರಕಾಶ್ ಮುಖರ್ಜಿ, ಭಾರತ ಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ADVERTISEMENT

ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ.ಡಾ.ಕೆ.ಎ ಮುನೀರ್ ಬಾವಾ, ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ, ಕ್ಷೇತ್ರ ಉಪಾಧ್ಯಕ್ಷ ಪ್ರಕಾಶ್ ಸಿಂಪೋಣಿ, ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಕೋಟೆಕಾರು ಶಕ್ತಿ ಕೇಂದ್ರದ ಅಧ್ಯಕ್ಷ ಅಜಂತ್ ಪಿಲಾರು,  ಯಶವಂತ್ ಅಮೀನ್, ಸಂಜೀವ ಶೆಟ್ಟಿ ಅಂಬ್ಲಮೊಗರು  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.