ADVERTISEMENT

ನೀರಿಗಾಗಿ ಪಂಚಾಯಿತಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 6:12 IST
Last Updated 3 ಜನವರಿ 2017, 6:12 IST

ಬಜ್ಪೆ: ನೀರಿಗಾಗಿ ಸಾರ್ವಜನಿಕರು ಗುರು ಪುರ ಕೈಕಂಬ ಸಮೀಪದ ಕಂದಾವರ ಪಂಚಾಯಿತಿಗೆ ಮುತ್ತಿಗೆ ಹಾಕಿ, ಸೋಮವಾರ ಪ್ರತಿಭಟನೆ ನಡೆಸಿದರು. ಕಂದಾವರ ಪಂಚಾಯಿತಿ ವ್ಯಾಪ್ತಿಯ ಕೊಳಂಬೆ ಸೌಹಾರ್ದನಗರದ ನಿವಾಸಿ ಗಳು ಅನೇಕ ಮೂಲ ಸಮಸ್ಯೆಗಳಿಂದ ಬಳಲುತ್ತಿದ್ದು, ಇದರಲ್ಲಿ ನೀರಿನ ಸಮಸ್ಯೆಯೂ ಸೇರಿದೆ. ಕಳೆದ 15 ವರ್ಷ ಗಳಿಂದ ಇಲ್ಲಿನ ನಿವಾಸಿಗಳು ನೀರಿನ ಸಮಸ್ಯೆ ಎದುರಿಸುತ್ತಲೇ ಇದ್ದು, ಇದನ್ನು ಕಂದಾವರ ಗ್ರಾಮ ಪಂಚಾಯಿತಿ ನಿರ್ಲ ಕ್ಷಿಸಿದೆ ಎಂಬ ಆರೋಪ ಸಾರ್ವಜನಿಕರದ್ದು.

ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ದೊರೆ ಯದೇ ಇದ್ದಾಗ, ಸೌಹಾರ್ದನಗರದ ನಿವಾಸಿಗಳು ಮುತ್ತಿಗೆ ಹಾಕಿ ಪಂಚಾ ಯಿತಿ ಅಧ್ಯಕ್ಷೆ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಂಚಾಯಿತಿಗೆ ಧಿಕ್ಕಾರ ಕೂಗಿದ ನಿವಾಸಿಗಳು ಪಂಚಾಯಿತಿ ತಮಗೆ ಕಲುಷಿತ ನೀರನ್ನು ಪೂರೈಸುತ್ತಿದೆ ಎಂದು ಆರೋಪಿಸಿದರು.

ಗುರುಪುರದ ವೆಂಟೆಡ್ ಡ್ಯಾಂನಿಂದ ಇಲ್ಲಿಗೆ ನೀರು ಪೂರೈಸಲಾಗುತ್ತಿದೆ. ಅದು ಕಲುಷಿತವಾಗಿದ್ದು, ಕುಡಿಯಲು ಅಯೋ ಗ್ಯವಾಗಿದೆ. ಇದು ಕೆಐಡಿಬಿಗಷ್ಟೇ ಪೂರೈಸಲು ಯೋಗ್ಯವಾಗಿದ್ದು, ಇದನ್ನೇ ಕುಡಿಯಲು ವಿನಿಯೋಗಿಸಲಾಗುತ್ತಿದೆ. ಅಲ್ಲದೆ ಈ ನೀರನ್ನು ಶುದ್ದೀಕರಿಸದೆ ಪೂರೈಸುವುದರಿಂದ ನಿವಾಸಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕುಡಿಯಲು ಯೋಗ್ಯವಾದ ನೀರನ್ನು ಪೂರೈಸದೇ ಹೋದರೆ ಗ್ರಾಮಸ್ಥರೆಲ್ಲಾ ಸೇರಿಕೊಂಡು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸಮಸ್ಯೆಯನ್ನು ಆಲಿಸಲು ಕಂದಾವರ ಪಂಚಾಯಿತಿ ಅಧ್ಯಕ್ಷೆ ವಿಜಯಗೋಪಾಲ ಸುವರ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಯು.ಪಿ. ಇಬ್ರಾಹಿಂ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಹಿತ ಹಲವರು ಹಾಜರಾಗಿದ್ದು, ನಿವಾಸಿಗಳಿಗೆ ಯೋಗ್ಯ ಕುಡಿಯುವ ನೀರನ್ನು ಪೂರೈಸುವ ಭರವಸೆ ನೀಡಿದರು. ಅಲ್ಲದೆ ಅವರು ಸ್ಥಳ ಪರಿಶೀಲನೆಯನ್ನೂ ನಡೆಸಿದರು.

ಕೊಳಂಬೆ ಸಮೀಪ ವಿಮಾನ ನಿಲ್ದಾಣ ಇದ್ದು, ವಿಮಾನ ನಿಲ್ದಾಣಕ್ಕೆ ಇಲ್ಲಿನ ಜಾಗ ಒದಗಿಸಲಾಗಿದೆ. ಇಲ್ಲಿನ ಪ್ರದೇಶದ ಅಭಿವೃದ್ಧಿಗೆ ಒದಗಿಸಲಾದ ಹಣವನ್ನು ಸಮರ್ಪಕವಾಗಿ ಬಳಸ ಲಾಗಿಲ್ಲ. ಈ ಹಣದ ಸಿಂಹಪಾಲನ್ನು ಶುದ್ದವಾದ ಕುಡಿಯುವ ನೀರಿಗೆ ವಿನಿಯೋಗಿಸಬೇಕು. ಈ ಬಗ್ಗೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಗಮನಿಸಬೇಕು. ಮರವೂರಿನಿಂದ ನೀರು ಪೂರೈಸಿ ಇಲ್ಲಿನ ಜನರ ಬವಣೆ ತೀರಿಸಬೇಕೆನ್ನುವುದು ಪ್ರತಿಭಟನಾಕಾರರ ಒತ್ತಾಯವಾಗಿದೆ. ಶುದ್ದವಾದ ಕುಡಿಯುವ ನೀರು ಪೂರೈಸುವ ಭರವಸೆ ನೀಡಿದ ಪಂಚಾ ಯಿತಿ ಪ್ರತಿಭಟನಾಕಾರರ ಮನವೊಲಿ ಸುವಲ್ಲಿ ಯಶಸ್ವಿಯಾಗಿದೆ.  ಬಜ್ಪೆ ಪೊಲೀಸರು ಸ್ಥಳಕ್ಕಾಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.