ADVERTISEMENT

ನೀರು ಕಲುಷಿತ: ಜಲಚರಗಳ ಸಾವು

​ಪ್ರಜಾವಾಣಿ ವಾರ್ತೆ
Published 18 ಮೇ 2017, 5:56 IST
Last Updated 18 ಮೇ 2017, 5:56 IST
ನೀರು ಕಲುಷಿತ: ಜಲಚರಗಳ ಸಾವು
ನೀರು ಕಲುಷಿತ: ಜಲಚರಗಳ ಸಾವು   

ಬಜ್ಪೆ: ಮರವೂರು ಬಹುಗ್ರಾಮ ಕುಡಿ ಯವ ಯೋಜನೆಯಡಿ ನಿರ್ಮಾಣ ಗೊಂಡ ಬಜ್ಪೆಯ ಮರವೂರು ಅಣೆಕಟ್ಟಿನ ನೀರಿಗೆ ಕೈಗಾರಿಕೆಗಳು ಹೊರಸೂಸುವ ರಾಸಾಯನಿಕ ಮಿಶ್ರಣಗೊಂಡು ಕಲುಷಿತವಾಗಿದೆ. ಇದರಿಂದಾಗಿ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಈ ನೀರನ್ನು ಕುಡಿದು ಸಾವಿರಾರು ಜಲಚರಗಳು ಹಾಗೂ ಜಾನುವಾರುಗಳು ಸತ್ತಿವೆ.

ಬಜ್ಪೆ ಸಮೀಪದ ಮರವೂರಿನಲ್ಲಿನ ಫಲ್ಗುಣಿ ನದಿಗೆ ಅಡ್ಡಲಾಗಿ ಸುಮಾರು ₹55 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ಕಟ್ಟಿದ್ದು,  ಏಪ್ರಿಲ್ 18ರಂದು ಉದ್ಘಾಟನೆಗೊಂಡಿತ್ತು.  ಬಜ್ಪೆ, ಸೂರಿಂಜೆ, ಮರವೂರು, ಮಳವೂರು ಮುಂತಾದ ಕಡೆ ಇದೇ ಅಣೆಕಟ್ಟಿನಿಂದ ನೀರು ಶುದ್ಧೀಕರಣಗೊಂಡು ರವಾನಿಸಲಾಗುತ್ತಿತ್ತು. ಉದ್ಘಾಟನೆಗೊಂಡು ತಿಂಗಳಾಗುವಷ್ಟರಲ್ಲಿ ನದಿಗೆ ಕೈಗಾರಿಕೆಗಳು ಸೂಸುವ ವಿಷಪೂರಿತ ರಾಸಾಯನಿಕ ಮಿಶ್ರಣಗೊಂಡು ನೀರು ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂದು ಜನರು ದೂರುತ್ತಿದ್ದಾರೆ.

ಕೈಗಾರಿಕೆಗಳು ತ್ಯಾಜ್ಯ ನೀರನ್ನು ಫಲ್ಗುಣಿ ನದಿಗೆ ಹರಿಯಬಿಟ್ಟಿದ್ದರಿಂದ ಅದು ಮರವೂರಿನ ಅಣೆಕಟ್ಟಿನಲ್ಲಿ ಶೇಖರಣೆಗೊಂಡು ಅದೇ ನೀರು ಜನರಿಗೆ ಕುಡಿಯಲು ಬಳಕೆಯಾಗು ವಂತಾಗಿದೆ. ನೀರಿಗೆ ರಾಸಾಯನಿಕ ಜಲಚರಗಳೆಲ್ಲಾ ಸತ್ತುಬಿದ್ದಿವೆ. ಮೀನು, ಏಡಿ, ಆಮೆಗಳ ಮೃತದೇಹಗಳು ನೀರಲ್ಲಿ ತೇಲುತ್ತಿದ್ದು, ಅಣೆಕಟ್ಟಿನ ಸಮೀಪ ರಾಶಿ ಬಿದ್ದಿದೆ. ಇದರಿಂದಾಗಿ ನೀರೆಲ್ಲಾ ವಾಸನೆಯುಕ್ತವಾಗಿದ್ದು, ಪ್ರದೇಶದಲ್ಲಿ ಕೆಟ್ಟ ವಾಸನೆ ಪಸರಿದೆ. ಮತ್ತೊಂದು ಬದಿಯ ನೀರನ್ನು ಕುಡಿಯಲು ಬಳಕೆ ಮಾಡುತ್ತಿದ್ದು, ಕಲುಷಿತ ನೀರು ಸೇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ADVERTISEMENT

ಕೈಗಾರಿಕೆಗಳ ಕಲುಷಿತ ನೀರು ಮಿಶ್ರಣ: ಸುರತ್ಕಲ್, ಬೈಕಂಪಾಡಿ ಯಲ್ಲಿನ ಹಲವು ಕಂಪೆನಿಗಳು ಹಾಗೂ ಎಸ್‌ಇಜೆಡ್‌ನಿಂದ ಹೊರಬರುವ ನೀರನ್ನು ನೇರವಾಗಿ ನದಿಗೆ ಹರಿಯ ಬಿಡಲಾಗುತ್ತಿದೆ. ಅಲ್ಲದೆ ಜೋಕಟ್ಟೆ ಸಮೀಪದ ತೋಡಿನ ಮುಖಾಂತರ ಸಾಕಷ್ಟು ಕಲುಷಿತ ನೀರು ನೇರವಾಗಿ ನದಿಗೆ ಹರಿದುಬರುತ್ತಿದ್ದು, ಅದ ರಿಂದಾಗಿ ನೀರು ಕಲುಷಿತಗೊಳ್ಳುತ್ತಿದೆ. ಇದೇ ರೀತಿ ನಡೆದರೆ ನೀರು ಸಂಪೂರ್ಣವಾಗಿ ನೀರು ಕಲುಷಿತಗೊಂಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪೂರ್ಣವಾಗಿ ನೀರಿಗೆ ಮಾಡಿದ ಹೋಮದಂತಾಗುತ್ತದೆ.

ಹಲವರಿಗೆ ದೂರು: ನೀರು ಕಲು ಷಿತಗೊಂಡಿರುವ ಬಗ್ಗೆ ಈಗಾಗಲೇ ಹಲವು ಇಲಾಖೆಗಳಿಗೆ ದೂರು ನೀಡ ಲಾಗಿದೆ ಎಂದು ಮಳವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ್ ಅರ್ಬಿ ತಿಳಿಸಿದ್ದಾರೆ. ತಹಶೀಲ್ದಾರ್, ಜಿಲ್ಲಾಧಿ ಕಾರಿ, ಪರಿಸರ ಇಲಾಖೆ ಅಲ್ಲದೆ ಮಹಾ ನಗರ ಪಾಲಿಕೆಗೆ ಈಗಾಗಲೇ ದೂರು ನೀಡಲಾಗಿದ್ದು, ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಪ್ರಯೋಗಾಲಯಕ್ಕೆ ರವಾನೆ: ನೀರಿನ ಮಾದರಿಯನ್ನು ಮಂಗಳೂರು ಹಾಗೂ ಸುರತ್ಕಲ್‌ನ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಯಾವ ರಾಸಾ ಯನಿಕ ನೀರಲ್ಲಿ ಮಿಶ್ರಣಗೊಂಡಿದೆ, ಇದರಿಂದ ಆಗುವ ಅಪಾಯ ಇತ್ಯಾ ದಿಗಳ ಬಗ್ಗೆ ತಿಳಿದು ವರದಿ ತಯಾರಿಸಿ ಸಂಬಂಧಪಟ್ಟ ಇಲಾಖೆಗೆ ರವಾನಿಸ ಲಾಗುತ್ತದೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ.

ಅಪಾಯದಲ್ಲಿ ಪರಿಸರವಾಸಿಗಳು: ಮರವೂರು ಡ್ಯಾಂ ಸಮೀಪ ಒಟ್ಟು 18 ಮನಗಳಿದ್ದು, ಎಲ್ಲರೂ ಆತಂಕಗೊಂಡಿ ದ್ದಾರೆ. ನೀರಿನಿಂದ ಬರುವ ಕೆಟ್ಟ ವಾಸನೆಯಿಂದ ತಲೆ ತಿರುಗುವುದು, ತಲೆನೋವು, ವಾಂತಿ ಕಾಣಿಸಿ ಕೊಂಡಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ‘ಒಂದು ವಾರದಿಂದ ನರಕಯಾತನೆಯಿಂದ ಬಳಲುತ್ತಿರುವ ಗ್ರಾಮಸ್ಥರ ಸಮಸ್ಯೆಗಳನ್ನು ತಿಳಿಯಲು ಶಾಸಕ ಅಭಯ್ ಚಂದ್ರ ಜೈನ್ ಸಹಿತ ಯಾರೊಬ್ಬರೂ ಇಲ್ಲಿಗೆ ಬಂದಿಲ್ಲ’ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.