ADVERTISEMENT

ನ್ಯಾಯೋಚಿತ ಪರಿಹಾರ ನೀಡಲು ಆಗ್ರಹ

ಮೆಲ್ಕಾರ್: ತುಂಬೆ ಅಣೆಕಟ್ಟೆ ಸಂತ್ರಸ್ತರ ತುರ್ತು ಸಭೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:19 IST
Last Updated 6 ಫೆಬ್ರುವರಿ 2017, 5:19 IST

ಬಂಟ್ವಾಳ:  ಈ ಜಿಲ್ಲೆಯ ರೈತರು ಭಾರೀ ತಾಳ್ಮೆಯುಳ್ಳವರಾಗಿದ್ದು, ಅಭಿವೃದ್ದಿ ಕಾಮಗಾರಿಗಳಿಗೆ ಅಡ್ಡಿ ಪಡಿಸದೆ ಪೂರಕ ವಾಗಿ ಸ್ಪಂದಿಸುವ ಮನೋಭಾವ ಹೊಂದಿದ್ದಾರೆ. ಇದರಿಂದಾಗಿ  ತುಂಬೆ ಎರಡನೇ ಅಣೆಕಟ್ಟೆಯಿಂದ ಕೃಷಿ ಜಮೀನು ಮುಳುಗಡೆ ಭೀತಿ ಎದುರಿ ಸುತ್ತಿರುವ ಸಂತ್ರಸ್ತರಿಗೆ ಸರ್ಕಾರವು ಕೂಡಲೇ ನ್ಯಾಯೋಚಿತ ಪರಿಹಾರ ನೀಡ ಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಆಗ್ರಹಿಸಿದರು.

ತಾಲ್ಲೂಕಿನ ಮೆಲ್ಕಾರ್ನಲ್ಲಿ ಶನಿವಾರ ನಡೆದ ತುಂಬೆ ಅಣೆಕಟ್ಟೆ ಸಂತ್ರಸ್ತರ ತುರ್ತು ಸಭೆಯಲ್ಲಿ ಅವರು ಮಾತನಾ ಡಿದರು. ಈಗಾಗಲೇ ಅಣೆಕಟ್ಟೆಯಲ್ಲಿ 5 ಮೀಟರ್ ನೀರು ಸಂಗ್ರಹಿಸಲಾಗಿದ್ದು, ಸಂತ್ರಸ್ತ ರೈತರಿಗೆ ನೀಡಲು ರೂ 7 ಕೋಟಿ ಮೊತ್ತದ ಪರಿಹಾರಧನ ಬಿಡುಗಡೆಗೆ ಸರ್ಕಾರ ಆದೇಶಿಸಿದೆ. ಮುಂದಿನ ದಿನಗ ಳಲ್ಲಿ 6 ಮೀ. ನೀರು ಸಂಗ್ರಹಗೊಂಡರೆ ಗರಿಷ್ಠ ಮೊತ್ತದ ಪರಿಹಾರ ನೀಡಲು ಬಜೆಟ್‌ನಲ್ಲಿ ಹಣ ಮೀಸಲಿಡುವುದಾಗಿ ಸಕಾರ್‌ರ ತಿಳಿಸಿದೆ ಎಂದರು.

ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರ ಬೆಟ್ಟು, ಸದಸ್ಯ ಲೋಲಾಕ್ಷ, ಮಾಜಿ ಸದಸ್ಯ ಹಾಜಿ ಪಿ. ಮುಹಮ್ಮದ್ ರಫೀಕ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಎಪಿಎಂಸಿ ಸದಸ್ಯರಾದ ಕೆ. ಪದ್ಮನಾಭ ರೈ, ದಿವಾಕರ ಪಂಬದಬೆಟ್ಟು, ಸಜಿಪಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರೀಫ್ ನಂದಾವರ, ಸದಸ್ಯರಾದ ಯೂಸುಫ್ ಕರಂದಾಡಿ, ಕಬೀರ್ ಗಡಿಯಾರ, ಮಾಜಿ ಸದಸ್ಯ ಪರಮೇಶ್ವರ, ಸದಸ್ಯ ಮಧುಸೂಧನ್ ಶೆಣೈ, ಕಿಸಾನ್ ಸಮಿತಿ ಸದಸ್ಯ  ಮನೋಜ್ ಆಳ್ವ ಮತ್ತಿತರರು ಇದ್ದರು.

ಸಮಿತಿ ರಚನೆ: ಇದೇ ವೇಳೆ ತುಂಬೆ ಅಣೆಕಟ್ಟೆ ಸಂತ್ರಸ್ತರ ಪರಿಹಾರ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಯೂಸುಫ್ ಕರಂದಾಡಿ, ಉಪಾಧ್ಯಕ್ಷ ರಾಗಿ ಎಂ. ಪರಮೇಶ್ವರ, ದಿವಾಕರ ಪಂಬದಬೆಟ್ಟು, ಪ್ರಧಾನ ಕಾರ್ಯದರ್ಶಿ ಯಾಗಿ ಪಿ. ರಾಮಕೃಷ್ಣ ಆಳ್ವ, ಜೊತೆ ಕಾರ್ಯದರ್ಶಿಯಾಗಿ ಕೆ. ಎಂ. ಅಬ್ದುಲ್ ರಹಿಮಾನ್, ಪತ್ರಿಕಾ ಕಾರ್ಯದರ್ಶಿ ಯಾಗಿ ಅಹ್ಮದ್ ಕಬೀರ್, ಕೋಶಾಧಿಕಾ ರಿಯಾಗಿ ರಾಜಾ ಬಂಟ್ವಾಳ ಆಯ್ಕೆಗೊಂಡರು.

ಸದಸ್ಯರಾಗಿ ಬಾಲಕೃಷ್ಣ ಕಲ್ಯಾರು, ದಿನೇಶ್ ರೈ, ಮನೋಹರ ಕುಡಿಕೆಲ್ಲಕೋಡಿ, ರಾಧಾಕೃಷ್ಣ ಪೆರಿಯೋ ಡಿಬೀಡು, ಸುರೇಶ ಗಟ್ಟಿ ಅರಮನೆಹಿತ್ಲು, ಪ್ರಕಾಶ ಆಚಾರ್ಯ ನಂದಾವರ, ಚಿತ್ರಾಕ್ಷಿ ಹೊಸಮನೆ, ಜಯಂತ ಪೂಜಾರಿ ಕಲ್ಯಾರು ನೇಮಕಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.