ADVERTISEMENT

‘ಪತ್ರಿಕೆಗಳಲ್ಲಿ ಆಹಾರ ಕಟ್ಟಿ ಕೊಡುವಂತಿಲ್ಲ’

​ಪ್ರಜಾವಾಣಿ ವಾರ್ತೆ
Published 24 ಮೇ 2017, 8:45 IST
Last Updated 24 ಮೇ 2017, 8:45 IST
‘ಪತ್ರಿಕೆಗಳಲ್ಲಿ ಆಹಾರ ಕಟ್ಟಿ ಕೊಡುವಂತಿಲ್ಲ’
‘ಪತ್ರಿಕೆಗಳಲ್ಲಿ ಆಹಾರ ಕಟ್ಟಿ ಕೊಡುವಂತಿಲ್ಲ’   

ಮಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿರುವ ಆಹಾರ ಇಲಾಖೆ, ಸುದ್ದಿ ಪತ್ರಿಕೆಗಳಲ್ಲಿ ಆಹಾರ, ತಿನಿಸುಗಳನ್ನು ಕಟ್ಟಿಕೊಡುವುದನ್ನು ನಿಷೇಧಿಸಿದೆ. ದಿನಪತ್ರಿಕೆಗಳಲ್ಲಿ ಮುದ್ರಣಕ್ಕಾಗಿ ಬಳಸುವ ರಾಸಾಯನಿಕ ಮಸಿ ತಿಂಡಿಯಲ್ಲಿ ಬೆರೆತು, ಆರೋಗ್ಯಕ್ಕೆ ಹಾನಿ ಆಗಲಿದೆ.

ಹೀಗಾಗಿ ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಆಹಾರ ಪದಾರ್ಥಗಳನ್ನು ದಿನಪತ್ರಿಕೆಯಲ್ಲಿ ಕಟ್ಟಿಕೊಡುವುದನ್ನು ನಿಷೇಧಿಸಲಾಗಿದೆ. ದಿನಪತ್ರಿಕೆಗಳಲ್ಲಿ ಪ್ಯಾಕ್ ಮಾಡಿಕೊಡುವ ಯಾವುದೇ ಆಹಾರ ಪದಾರ್ಥಗಳನ್ನು, ಅದರಲ್ಲೂ ಮುಖ್ಯವಾಗಿ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಸಾರ್ವಜನಿಕರು ಖರೀದಿಸಬಾರದು.

ಆಹಾರದ ಉದ್ಯಮಿ ಗಳು, ಆಹಾರ ಪದಾರ್ಥಗಳನ್ನು ಕಟ್ಟಿಕೊಡಲು ದಿನಪತ್ರಿಕೆ ಉಪಯೋಗಿಸುವುದನ್ನು ಮುಂದುವರಿಸಿದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಕುಡಿಯುವ ನೀರಿನ ಜಾಗೃತಿ:  ಸಾರ್ವಜನಿಕರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಹಾರ ಒದಗಿಸುವ ಉದ್ದೇಶದಿಂದ ಕಾಯ್ದೆ ಜಾರಿಯಲ್ಲಿದ್ದು, ಇದರ ಅಡಿಯಲ್ಲಿ ಪ್ಯಾಕೇಜ್ಡ್ ಕುಡಿಯುವ ನೀರು ಸಹ ಆಹಾರವಾಗಿ ಪರಿಗಣಿಸಲಾಗುತ್ತದೆ. ಈ ನೀರನ್ನು ತಯಾರಿಸುವ ಘಟಕಗಳು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು.

ಕುಡಿಯುವ ನೀರನ್ನು ಹೊಂದಿರುವ ಕ್ಯಾನ್/ಬಾಟಲಿ/ಕಂಟೇನರ್ ಕಡ್ಡಾ ಯವಾಗಿ ಬಿಐಎಸ್ ನಿಂದ ಪರವಾನಗಿ ಪಡೆದಿದ್ದು, ಐಎಸ್‍ಐ ಚಿಹ್ನೆ ಹೊಂದಿರಲೇಬೇಕು.
ಪ್ಯಾಕ್ ಆದ ದಿನಾಂಕ ಮತ್ತು ಬಳಕೆಯ ಕೊನೆ ದಿನಾಂಕ ನಮೂದಿಸುವುದೂ ಕಡ್ಡಾಯ.

ಐಎಸ್‍ಐ ಚಿಹ್ನೆ ಹೊಂದದಿರುವ ಪ್ಯಾಕೇಜ್ಡ್ ಕುಡಿಯುವ ನೀರಿನ ತಯಾರಿಕೆ, ಮಾರಾಟ, ದಾಸ್ತಾನು ಮುಂತಾದವುಗಳನ್ನು ಗಮನಕ್ಕೆ ಬಂದಲ್ಲಿ, ಸ್ಥಳೀಯ ಆಹಾರ ಸುರಕ್ಷತಾಧಿಕಾರಿ ಗಮನಕ್ಕೆ ತರಬಹುದು.

ರಾಸಾಯನಿಕಗಳನ್ನು ಬಳಸಿ ಬಾಳೆ, ಸಪೋಟ, ಮಾವು, ಮೊಸಂಬಿ, ಮುಂತಾದ ಹಣ್ಣುಗಳನ್ನು ಕೃತಕವಾಗಿ ಮಾಗಿಸಿ ಮಾರಾಟ ಮಾಡುತ್ತಿರುವುದು ಅವ್ಯಾಹತವಾಗಿ ನಡೆದಿದ್ದು, ಕೃತಕವಾಗಿ ಮಾಗಿಸಿದ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಿರುವುದು ದೃಢಪಟ್ಟಿದೆ.ರಾಸಾಯನಿಕ ಬಳಸಿ ಹಣ್ಣುಗಳನ್ನು ಕೃತಕವಾಗಿ ಮಾಗಿಸಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ತಿಳಿಸಿದ್ದಾರೆ.

ಯಾರಿಗೆ ದೂರು ಕೊಡಬಹುದು?
ಡಾ. ರಾಜೇಶ್ ಬಿ.ವಿ., ಅಂಕಿತ ಅಧಿಕಾರಿಗಳು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾರ್ಯಾಲಯ ಮಂಗಳೂರು, (ಮೊ.ಸಂ.  9449843255, ದೂ.ಸಂ. 0824-2420466, 0824-2427316), ಎಚ್.ಪಿ. ರಾಜು, ಹಿರಿಯ ಆಹಾರ ಸುರಕ್ಷತಾಧಿಕಾರಿ, ಮಹಾನಗರ ಪಾಲಿಕೆ ವ್ಯಾಪ್ತಿ (ಮೊ.ಸಂ. 7019181523/ 8453441763, ದೂ.ಸಂ. 0824-2420466,  0824-2427316), ಡಾ. ನವೀನ್ ಚಂದ್ರ ಕುಲಾಲ್, ತಾಲ್ಲೂಕು ಆರೋಗ್ಯಾಧಿಕಾರಿ/ ಆಹಾರ ಸುರಕ್ಷತಾಧಿಕಾರಿ, ಮಂಗಳೂರು. (ಮೊ.ಸಂ. 9845228689, ದೂ.ಸಂ. 0824-2423692), ಡಾ. ಕೆ. ಕಲಾಮಧು, ತಾಲ್ಲೂಕು ಆರೋಗ್ಯಾಧಿಕಾರಿ/ ಆಹಾರ ಸುರಕ್ಷತಾಧಿಕಾರಿ, ಬೆಳ್ತಂಗಡಿ (ಮೊ.ಸಂ.9845967576, ದೂ.ಸಂ. 08256-232752), ಡಾ. ಸುಬ್ರಮಣ್ಯ ಎಂ.ಆರ್.

ತಾಲ್ಲೂಕು ಆರೋಗ್ಯಾಧಿಕಾರಿ/ ಆಹಾರ ಸುರಕ್ಷತಾಧಿಕಾರಿ, ಸುಳ್ಯ (ಮೊ.ಸಂ. 9449662224, ದೂ.ಸಂ. 08257-232479), ಡಾ. ದೀಪ ಪ್ರಭು, ತಾಲ್ಲೂಕು ಆರೋಗ್ಯಾಧಿಕಾರಿ/ ಆಹಾರ ಸುರಕ್ಷತಾಧಿಕಾರಿ, ಬಂಟ್ವಾಳ (ಮೊ.ಸಂ. 9845838677, ದೂ.ಸಂ. 08255-230662), ಸುಮಂತ್, ಆಹಾರ ಸುರಕ್ಷತಾ ಅಧಿಕಾರಿ, ಪುತ್ತೂರು ತಾಲ್ಲೂಕು (ಮೊ.ಸಂ.9449505104, ದೂ.ಸಂ. 08251-230650).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.