ADVERTISEMENT

ಪುತ್ತೂರು, ಉಪ್ಪಿನಂಗಡಿಯಲ್ಲಿ ಖಂಡನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 8:53 IST
Last Updated 12 ಸೆಪ್ಟೆಂಬರ್ 2017, 8:53 IST
ಕೋಟಿ ಚೆನ್ನಯರ ತಾಯಿ ದೇಯಿ ಬೈದೈತಿಯ ಪುತ್ಥಳಿ ಬಳಿ ಅನಾಗರಿಕ ವರ್ತನೆ ತೋರಿದ ಆರೋಪಿ ವಿರುದ್ಧ ಕಠಿಣ ಕಾನೂನು ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
ಕೋಟಿ ಚೆನ್ನಯರ ತಾಯಿ ದೇಯಿ ಬೈದೈತಿಯ ಪುತ್ಥಳಿ ಬಳಿ ಅನಾಗರಿಕ ವರ್ತನೆ ತೋರಿದ ಆರೋಪಿ ವಿರುದ್ಧ ಕಠಿಣ ಕಾನೂನು ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.   

ಪುತ್ತೂರು: ತುಳುನಾಡಿನ ಐತಿಹಾಸಿಕ ವೀರಪುರುಷರಾದ ಕೋಟಿ ಚೆನ್ನ ಯರ ತಾಯಿ ದೇಯಿ ಬೈದೆತಿ ಪುತ್ಥಳಿಗೆ ಅವಮಾನ ಮಾಡಿರುವ ಆರೋ ಪಿಯನ್ನು ಬಂಧಿಸಿದ್ದು ಉತ್ತಮ ಕೆಲಸ. ಆದರೆ ಆರೋಪಿಯು ಮೂರ್ತಿಯ ಬಳಿ ಅಶ್ಲೀಲ ಭಂಗಿಯಲ್ಲಿ ಕುಳಿತಿದ್ದಾಗ ಫೋಟೋ ತೆಗೆದ ವ್ಯಕ್ತಿಯೂ ಅಪರಾಧಿ. ಈತನನ್ನು ತಕ್ಷಣ ಬಂಧಿಸಬೇಕು ಎಂದು ಪುತ್ತೂರು ತಾಲ್ಲೂಕು ಬಿಲ್ಲವ ಸಂಘದ ಮುಖಂಡರು ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್ ಅವರು ‘ಅರಣ್ಯ ಇಲಾಖೆಯು ಪಡುಮಲೆ ವ್ಯಾಪ್ತಿಯಲ್ಲಿ ದೇಯಿ ಬೈದ್ಯೆತಿ ಹೆಸರಿನಲ್ಲಿ ಔಷಧವನ ನಿರ್ಮಿಸಿದೆ. ಮೇಲಾಗಿ ವನದ ಮಧ್ಯೆ ದೇಯಿ ಬೈದೆತಿ ಮತ್ತು ಬಾಲ ಕೋಟಿ ಚೆನ್ನಯರ ಮೂರ್ತಿಗಳನ್ನು ನಿರ್ಮಿಸಿದೆ. ಹೀಗಿರುವಾಗ ಅದೊಂದು ಪವಿತ್ರ ತಾಣವಾಗಿದೆ. ಜಾತಿ ಭೇದ ಮರೆತು ಜನತೆ ಪೂಜಿಸುವ ಕಾರಣಿಕ ಶಕ್ತಿ ಮಾತೆ ದೇಯಿ ಬೈದೆತಿ ಮೂರ್ತಿಗೆ ಮಾಡಿರುವ ಅವಮಾನ ಖಂಡನೀಯ’ ಎಂದರು.

ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಆರ್.ಸಿ.ನಾರಾಯಣ್ ರೆಂಜ, ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಪೂಜಾ ವಸಂತ್, ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತ್‍ಲ್‍ನ ಪುತ್ತೂರು ತಾಲ್ಲೂಕು ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಪುತ್ತೂರು ಯುವವಾಹಿನಿ ಅಧ್ಯಕ್ಷ ಉದಯ ಕುಮಾರ್ ಕೊಲಾಡಿ, ಉಪ್ಪಿನಂಗಡಿ ಯುವವಾಹಿನಿ ಅಧ್ಯಕ್ಷ ಅಶೋಕ್ ಪಡ್ಪು, ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ಕೇಶವ ಪೂಜಾರಿ ಬೆದ್ರಾಳ, ಜತೆ ಕಾರ್ಯದರ್ಶಿ ಸದಾನಂದ ಮಡ್ಯೊಟ್ಟು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ADVERTISEMENT

ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹ
ಉಪ್ಪಿನಂಗಡಿ: ದೇಯಿ ಬೈದೈತಿಯ ಪುತ್ಥಳಿ ಬಳಿ ಅಬ್ದುಲ್ ಹನೀಫ್ ಎಂಬಾತ ಕುಳಿತು ಅನಾಗರಿಕ ವರ್ತನೆ ತೋರಿಸಿದ್ದು, ಇದರಿಂದಾಗಿ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟಾಗಿದೆ. ಆದ್ದ ರಿಂದ ಈತನನ್ನು ಕಠಿಣ ಕಾನೂನು ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.

ಕೋಟಿ-ಚೆನ್ನಯ್ಯ ಹಾಗೂ ಅವರ ತಾಯಿ ದೇಯಿ ಬೈದೈತಿಯ ಬಗ್ಗೆ ಹಿಂದೂ ಸಮಾಜದಲ್ಲಿ ಪೂಜ್ಯನೀಯ ಭಾವನೆ ಇದೆ. ಕೋಟಿ-ಚೆನ್ನಯರ ಜನ್ಮ ಸ್ಥಳವಾದ ಪಡುಮಲೆಯ ಮುಡಿಪಿ ನಡ್ಕದಲ್ಲಿ ನಾಟಿ ವೈದ್ಯೆಯಾಗಿದ್ದ ದೇಯಿ ಬೈದೈತಿಯ ನೆನಪಿಗಾಗಿ ರಾಜ್ಯ ಸರ್ಕಾರ ಔಷಧಿ ವನವನ್ನು ನಿರ್ಮಿಸಿದ್ದು, ಅಲ್ಲಿ ದೇಯಿ ಬೈದೈತಿಯ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಸ್ಥಳವು ಹಿಂದೂಗಳಿಗೆ ಪವಿತ್ರವಾಗಿದ್ದು, ಇದಕ್ಕೆ ಅವಮಾನ ಮಾಡಿರುವುದು ಖಂಡನೀಯ’ ಎಂದರು.

ನಿಯೋಗದಲ್ಲಿ ವಿಶ್ವಹಿಂದೂ ಪರಿ ಷದ್ ಅಧ್ಯಕ್ಷ ಸಂದೀಪ್, ಬಜರಂಗದಳ ಸಂಚಾಲಕ ಮಹೇಶ್, ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಕೇಶವ ಗೌಡ, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವ್ಯವ ಸ್ಥಾಪನಾ ಸಮಿತಿ ಸದಸ್ಯ ಡಾ. ರಾಜಾ ರಾಮ್, ವಕೀಲ ಅನಿಲ್ ಕುಮಾರ್ ಮೊದಲಾದವರು ಇದ್ದರು. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ಅನುಪಸ್ಥಿತಿಯಲ್ಲಿ ಉಪ್ಪಿನಂ ಗಡಿ ಠಾಣಾ ಎಸ್‍ಐ ನಂದಕುಮಾರ್ ಮನವಿ ಸ್ವೀಕರಿಸಿದರು.

ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ
ಪುತ್ತೂರು: ದೇಯಿ ಬೈದೆತಿ ಪುತ್ಥಳಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಹಾಗೂ ಉಳಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿ ಕೆಯ ನೇತೃತ್ವದಲ್ಲಿ ಸೋಮವಾರ ಸಂಜೆ ಪುತ್ತೂರು ಬಸ್ ನಿಲ್ದಾಣದ ಗಾಂಧಿಕಟ್ಟೆ ಬಳಿ ಪ್ರತಿಭಟನೆ ನಡೆಯಿತು.

‘ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಕೆಎಫ್‍ಡಿ ಸಂಘಟನೆ ಕಾರ್ಯಕರ್ತರಾದ ಮತಾಂಧ ವ್ಯಕ್ತಿ ದೇಯಿ ಬೈದೆತಿಗೆ ಮಾತ್ರವಲ್ಲ. ಸಮಾಜದ ತಾಯಿಗೆ ಅಪಮಾನ ಮಾಡಿದ್ದಾನೆ. ಕೆಎಫ್‍ಡಿ, ಎಸ್‍ಡಿಪಿಐ ಯಂತಹ ಮತಾಂಧ ಸಂಘಟನೆಗಳನ್ನು ನಿಷೇಧ ಮಾಡ ಬೇಕು ಎಂದು ಆಗ್ರಹಿಸಿದರು.

ಹಿಂದೂ ಮುಖಂಡ ಕೆದಿಲ ಗಣರಾಜ್ ಭಟ್ ಅವರು ಮಾತನಾಡಿದರು. ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅಜಿತ್ ಹೊಸಮನೆ, ತಾಲ್ಲೂಕು ಅಧ್ಯಕ್ಷ ಸಚಿನ್ ಪಾಪೆಮಜಲು, ಬಿಜೆಪಿ ಮುಖಂಡರಾದ ರಾಜೇಶ್ ಬನ್ನೂರು, ಶಂಭು ಭಟ್, ಚಂದ್ರಶೇಖರ್ ಬಪ್ಪಳಿಗೆ,ಆರ್.ಸಿ ನಾರಾಯಣ್, ಬಜರಂಗದಳದ ಧನ್ಯಕುಮಾರ್ ಬೆಳಂದೂರು. ರಾಜೇಶ್ ಪೆರಿಗೇರಿ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.