ADVERTISEMENT

ಪುತ್ತೂರು ಎಪಿಎಂಸಿ ಚುನಾವಣೆ: 29 ಮಂದಿ ಅಭ್ಯರ್ಥಿಗಳು ಕಣದಲ್ಲಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 6:56 IST
Last Updated 16 ಏಪ್ರಿಲ್ 2017, 6:56 IST

ಪುತ್ತೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ 13 ಸ್ಥಾನಗಳ ಪೈಕಿ ಸಹಕಾರಿ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದು, ಉಳಿದ 12 ಸ್ಥಾನಗಳಿಗೆ ಏ. 25ರಂದು ನಡೆಯಲಿರುವ ಚುನಾವಣೆಗೆ ಸಂಬಂ ಧಿಸಿ ಒಟ್ಟು 29 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.

ನಾಮಪತ್ರ ಸಲ್ಲಿಸಿದ್ದ 37 ಮಂದಿ ಅಭ್ಯರ್ಥಿಗಳ ಪೈಕಿ 8 ಮಂದಿ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾ ಗಿದ್ದ ಶನಿವಾರ ತಮ್ಮ ನಾಮ ಪತ್ರವನ್ನು ಹಿಂತೆಗೆದು ಕೊಂಡಿದ್ದಾರೆ. ಚುನಾವಣೆ ನಡೆಯುವ ಎಲ್ಲ 12 ಸ್ಥಾನಗಳಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು, ಮರ್ಧಾಳ, ಸವಣೂರು ಮತ್ತು ನೆಟ್ಟಣಿಗೆ ಮುಡ್ನೂರು ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಅಭ್ಯ ರ್ಥಿಗಳು ಉಳಿದುಕೊಂಡಿದ್ದಾರೆ. ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಾ ಕಣ ದಲ್ಲಿದ್ದಾರೆ. 

13 ಸ್ಥಾನಗಳ ಪೈಕಿ ಸಹಕಾರಿ ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇದರಿಂದಾಗಿ ಅವರು ಅವಿರೋಧವಾಗಿ ಆಯ್ಕೆ ಗೊಂಡಿದ್ದು, ಇದರಿಂದಾಗಿ ಬಿಜೆಪಿ ಸುಲಭದಲ್ಲೇ ಆರಂಭಿಕ ಖಾತೆ ತೆರೆದಿದೆ. ಅವಿರೋಧ ವಾಗಿ ಆಯ್ಕೆಗೊಂಡಿರುವ ಕೃಷ್ಣಕುಮಾರ್ ರೈ ಅವರು ಪ್ರಸ್ತುತ ಪುತ್ತೂರು ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷರಾಗಿದ್ದಾರೆ.

ADVERTISEMENT

ದೂರವಾದ ಬಂಡಾಯ ಭೀತಿ: ಕಾಂಗ್ರೆಸ್ ಪಕ್ಷದ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಕೆಯಾಗಿತ್ತು. ಇಲ್ಲಿನ ಬಣ ರಾಜಕೀಯದಿಂದಾಗಿ ಬಂಡಾಯದ ಭೀತಿಯೂ ಆವರಿಸಿತ್ತು. ಆದರೆ  ನಾಮ ಪತ್ರ ಹಿಂತೆಗೆದುಕೊಳ್ಳಲು ಕೊನೆ ದಿನವಾಗಿದ್ದ ಶನಿವಾರ ಅಂತಿಮ ಕ್ಷಣದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಬಣದವರು ನಾಮಪತ್ರಹಿಂತೆಗೆದುಕೊಂಡಿರುವುದರಿಂದ ಬಂಡಾಯದ ಭೀತಿ ದೂರವಾಗಿದೆ. ಶಾಸಕಿ ಶಕುಂತಳಾ ಶೆಟ್ಟಿ ನೇತೃತ್ವದಲ್ಲಿ ಆಯ್ಕೆ ಮಾಡಲಾದ ಪಕ್ಷ ನಿರ್ಧರಿತ ಅಭ್ಯ ರ್ಥಿಗಳು ಮಾತ್ರ ಕಣದಲ್ಲಿ ಉಳಿದು ಕೊಂಡಿದ್ದಾರೆ.

ದ್ವಂದ್ವ ನಿಲುವಿನ ಜೆಡಿಎಸ್ ಅಭ್ಯರ್ಥಿ12 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಮಾತ್ರ ಉಳಿದುಕೊಂಡಿರುವ ಜೆಡಿಎಸ್ ಅಭ್ಯರ್ಥಿಗಳ ಪೈಕಿ ಒಬ್ಬರು ಇದೀಗ ದ್ವಂದ್ವ ನಿಲುವಿನಲ್ಲಿದ್ದಾರೆ. ನೆಟ್ಟ ಣಿಗೆ ಮುಡ್ನೂರು ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ್ದ ಅಶ್ರಫ್ ಕೊಟ್ಯಾಡಿ ಅವರು ನಿಗದಿತ ಅವಧಿಯೊಳಗೆ ನಾಮಪತ್ರ ಹಿಂತೆಗೆ ದುಕೊಳ್ಳದಿದ್ದರೂ ಬಳಿಕದ ವಿದ್ಯಮಾ ನದಲ್ಲಿ ಅವರು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.