ADVERTISEMENT

ಬಿರುಗಾಳಿ, ಮಳೆ: ನೂರಾರು ಅಡಿಕೆ ಗಿಡಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 6:49 IST
Last Updated 22 ಮಾರ್ಚ್ 2017, 6:49 IST

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಹಿರೇ ಬಂಡಾಡಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ವ್ಯಾಪಕ ರೀತಿಯ ಬಿರುಗಾಳಿ, ಮಳೆಯ ಅಬ್ಬರಕ್ಕೆ ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಲವರ ಕೃಷಿ ಜಮೀನಿಗೆ ಹಾನಿ ಉಂಟಾಗಿದ್ದು ನಷ್ಟ ಸಂಭವಿಸಿರುವ ವರದಿ ಆಗಿದೆ.

ಹಿರೇಬಂಡಾಡಿ ನಿವಾಸಿ ದಾಮೋ ದರ ಎಂಬುವರ ತೋಟದಲ್ಲಿ 15 ಅಡಿಕೆ ಗಿಡ, ಉಮೇಶ್‌ ಅವರ ತೋಟದಲ್ಲಿ 20 ಅಡಿಕೆ ಗಿಡಗಳು ಮುರಿದು ಬಿದ್ದಿವೆ. ನಿಡ್ಡೆಂಕಿಯ ಚಿದಾನಂದ ಎಂಬುವರ ದನದ ಹಟ್ಟಿಯ ಮೇಲ್ಚಾವಣಿ ಗಾಳಿಗೆ ಹಾರಿ ಹೋಗಿದೆ. ಕರೆಂಕಿ ವೆಂಕಟ್ರಮಣ ಗೌಡ ಎಂಬುವರ ತೋಟದಲ್ಲಿ 40 ಅಡಿಕೆ ಗಿಡ, ನಾರ್ಣಪ್ಪ ಗೌಡ ಎಂಬುವರ ತೋಟದಲ್ಲಿ 50 ಅಡಿಕೆ ಗಿಡಗಳು ಮುರಿದು ಬಿದ್ದಿವೆ.

ಹಿರೇಬಂಡಾಡಿ ಗ್ರಾಮ ಪಂಚಾ ಯಿತಿ ಸದಸ್ಯೆ ಚಂದ್ರಾವತಿ ಅವರ ಜಾಗ ದಲ್ಲಿದ್ದ ಎರಡು ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ತುಂಡಾಗಿವೆ. ಕಾರೆ ದಕೋಡಿ ಹಾಗೂ ಸೀಂಕ್ರ ಕೊಡಂಗೆ ಎಂಬಲ್ಲಿ ವಿದ್ಯುತ್ ವಯರ್‌ ಮೇಲೆ ಮರ ಬಿದ್ದು, ತಂತಿಗಳು ತುಂಡಾಗಿ ಬಿದ್ದಿವೆ. ಶಾಖೆಪುರ ಹಾಲು ಉತ್ಪಾದಕರ ಮಹಿ ಳಾ ಸಹಕಾರಿ ಸಂಘದ ಮೇಲ್ಚಾವಣಿಯ ಸಿಮೆಂಟ್ ಶೀಟ್ ಗಾಳಿಗೆ ಹಾರಿ ಹೋಗಿದೆ.

ಕುಬಲ ಎಂಬಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್‌ಪರಿ ವರ್ತಕದ ಪೆಟ್ಟಿಗೆ ಹಾನಿ ಉಂಟಾಗಿದೆ. ಹಿರೇಬಂಡಾಡಿ ಗ್ರಾಮ ವ್ಯಾಪ್ತಿಯಲ್ಲಿ ಮಳೆಯಿಂದ ಲಕ್ಷಾಂತರ ಮೌಲ್ಯದ ಆಸ್ತಿಗೆ ಹಾನಿ ಉಂಟಾಗಿದೆ. ಉಪ್ಪಿನಂಗಡಿ, ಕೊಯಿಲ, ರಾಮಕುಂಜ ಪರಿಸರದಲ್ಲೂ ಮಳೆಯಾಗಿದ್ದು, ಆದರೆ ಯಾವುದೇ ಹಾನಿ ಸಂಭವಿಸಿಲ್ಲ. 

ದೊಡ್ಡ ಗಾತ್ರದ ಆಲಿಕಲ್ಲು:  ಮಳೆ ಯೊಂದಿಗೆ ಆಲಿಕಲ್ಲು ಬೀಳುತ್ತಿತ್ತು, ಇವು ಗಳು ಜಲ್ಲಿ ಕಲ್ಲಿನಷ್ಟು ದೊಡ್ಡ ಗಾತ್ರದಲ್ಲಿ ಇದ್ದವು. ಹಲವು ಕಡೆ ಮೇಲ್ಚಾವಣಿಗೆ ಅಳವಡಿಸಿದ ಸಿಮೆಂಟ್ ಶೀಟ್‌ಗಳು, ಹೆಂಚುಗಳು ಮೇಲೆ ಆಲಿಕಲ್ಲು ಬಿದ್ದ ಪರಿಣಾಮ ಹಾನಿ ಆಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.