ADVERTISEMENT

ಮಳೆಗೆ ತಡೆಗೋಡೆ ಕುಸಿದು ಮನೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 9:26 IST
Last Updated 18 ಸೆಪ್ಟೆಂಬರ್ 2017, 9:26 IST

ಬಂಟ್ವಾಳ: ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ಧಾರಾಕಾರ ಮಳೆಯಾಗಿದ್ದು, ಇಲ್ಲಿನ ಬಹುತೇಕ ರಸ್ತೆ ಬದಿ ಚರಂಡಿ ಇಲ್ಲದೆ ರಸ್ತೆಯಲ್ಲೇ ಕೆಸರು ನೀರು ಹರಿಯುತ್ತಿದೆ. ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಕೃತಕ ಕೆರೆ ನಿರ್ಮಾಣಗೊಂಡಿದೆ.

ತಡೆಗೋಡೆ ಕುಸಿತ: ತಾಲ್ಲೂಕಿನ ತೆಂಕ ಬೆಳ್ಳೂರು ಗ್ರಾಮದ ಧನುಪೂಜೆ-ಕಮ್ಮಾಜೆ ರಸ್ತೆ ನಡುವಿನ ತಡೆಗೋಡೆಯೊಂದು ಶನಿವಾರ ತಡರಾತ್ರಿ ಕುಸಿದು ಬಿದ್ದು ಇಲ್ಲಿನ ನಿವಾಸಿ ರವಿ ಎಂಬವರ ಮನೆಗೆ ಗೋಡೆಗೆ ಭಾರೀ ಹಾನಿ ಉಂಟಾಗಿದೆ. ಕಂದಾಯ ಇಲಾಖೆ ಸಿಬ್ಬಂದಿ ಸೀತಾರಾಮ ಕಮ್ಮಾಜೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT