ADVERTISEMENT

ರಾಗ ಹೇಮಾವತಿಗೆ ಸಮ್ಮೋಹನಗೊಂಡ ವಿರಾಸತ್

ಪ್ರವೀಣ್ ಗೋಡ್ಖಿಂಡಿ-– ಶಶಾಂಕ್ ಸುಬ್ರಹ್ಮಣ್ಯ ಜುಗಲ್‍ಬಂದಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 6:00 IST
Last Updated 14 ಜನವರಿ 2017, 6:00 IST
ಮೂಡುಬಿದಿರೆ: ರಾಗ ಹೇಮಾವತಿ ಆದರೇನು, ಮಧುವಂತಿಯಾದ ರೇನು...ವಿರಾಸತ್ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಶ್ರೋತೃವರ್ಗವನ್ನು ಶುಕ್ರವಾರ ಕೊಳಲುವಾದನದ ಮೂಲಕ ನಾದಸಮ್ಮೋಹನಕ್ಕೆ ಒಳಪಡಿಸಿದವರು ಕಲಾವಿದರಾದ ಶಶಾಂಕ್ ಸುಬ್ರಹ್ಮಣ್ಯ ಮತ್ತು ಪ್ರವೀಣ್ ಗೋಡ್ಖಿಂಡಿ.
 
ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿ ಕೆಯಲ್ಲಿ ಶುಕ್ರವಾರ ಸಂಜೆ ರಾಗ ಹೇಮಾ ವತಿಯನ್ನು ಶಶಾಂಕ್ ಅವರು ಕೊಳಲಿ ನಲ್ಲಿ ನುಡಿಸುತ್ತಿದ್ದಂತೆಯೇ ಪ್ರವೀಣ್ ಗೋಡ್ಖಿಂಡಿ ಅವರು ತಮ್ಮ ಬಾನ್ಸುರಿ ಯಲ್ಲಿ ನಾದಚಮತ್ಕಾರಕ್ಕೆ ತಾವೂ ಸಜ್ಜಾ ದರು. ಕರ್ನಾಟಕಿ ಮತ್ತು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಜುಗಲ್‍ಬಂದಿಯ ರಸದೌತಣಕ್ಕೆ ಬರೋಬ್ಬರಿ 40 ಸಾವಿರ ಮಂದಿಯ ಶ್ರೋತೃ ಗಡಣ ಸಜ್ಜಾಗಿತ್ತು. ಅದಾಗಲೇ ಹಂಸಧ್ವನಿಯಲ್ಲಿ ‘ವಾತಾಪಿ ಗಣಪತಿಂ ಭಜೇ’ ಎನ್ನುತ್ತಾ, ಕೇಳುಗರ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡ ಕಲಾವಿದರು, ಸಭಾಸಾಗರವನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುವುದಾಗಿ ಹೇಳು ತ್ತಲೇ ರಾಗಂ, ತಾನಂ ಪಲ್ಲವಿಗೆ ಪ್ರವೇಶ ಮಾಡಿದರು. 
 
ಈ ಪ್ರಧಾನ ಭಾಗದಲ್ಲಿ ಇಬ್ಬರೂ ಕಲಾವಿದರು ಪರಸ್ಪರ ಪ್ರೋತ್ಸಾಹದೊಂ ದಿಗೆ ಕಛೇರಿಗೆ ಹೆಚ್ಚು ಮೆರುಗು ನೀಡಿ ದರು. ಪ್ರಥಮ ಬಾರಿಗೆ ಶಶಾಂಕ್ ಜತೆ ಜುಗಲ್‍ಬಂದಿ ನಡೆಸುತ್ತಿರುವುದಾಗಿ ಪ್ರವೀಣ್ ಗೋಡ್ಖಿಂಡಿ ಅವರು ಹೇಳಿ ದರೂ, ನಿಡುಗಾಲದ  ಜತೆಗಾರರಂತೆ ಇಬ್ಬರೂ ಪರಸ್ಪರ ಅರಿತು ರಾಗವಿಸ ರಗಳಲ್ಲಿ ತೊಡಗಿಕೊಂಡರು. ಸ್ಪರ್ಧೆ ಯಿಲ್ಲದೆ, ಪರಸ್ಪರ ಪ್ರತಿಭೆಗಳ ಪೋಷಿ ಸುತ್ತಾ, ಸಂವಾದಿಯಾಗಿ ನಡೆದ ಕಛೇರಿ ಯಲ್ಲಿ ಶಶಾಂಕ್ ಆಗೀಗ ಸಭಾಸಾಗರ ದೊಂದಿಗೆ ಮಾತನಾಡಿ, ಕೊಳಲಿನ ಸಾಧ್ಯತೆಗಳನ್ನೂ ವಿವರಿಸಿದರು. ಶ್ರೋತೃ ಗಳು ಕೂಡ ಈ ಸಂವಾದವನ್ನು ಆಸ್ವಾ ದಿಸುತ್ತ, ತಾನಂ ಸಂದರ್ಭದಲ್ಲಿ ಏಕ ಧ್ಯಾನದಿಂದ ಸಂಗೀತರಸಧಾರೆಯಲ್ಲಿ ಮುಳುಗುವಂತಾಯಿತು. ಜೋಡ್-ಝಾಲಾದಲ್ಲಿ ಬಾನ್ಸುರಿಯ ಚಮತ್ಕಾರ ವನ್ನು ಆಸ್ವಾದಿಸಿದ ರಸಿಕರು, ಚಪ್ಪಾಳೆಯ ಮೂಲಕ ಗೋಡ್ಖಿಂಡಿ ಮತ್ತು ಶಶಾಂಕ್ ಅವರ ಸಾಮರ್ಥ್ಯವನ್ನು ಪ್ರಶಂಶಿದರು.
 
ಶ್ರೋತೃಗಳ ಪ್ರೋತ್ಸಾಹದೊಂದಿಗೆ ಪಲ್ಲ ವಿಯಲ್ಲಿ, ಆದಿತಾಳದಲ್ಲಿ ಕಲಾವಿದರು ಸಂಗೀತ ಸಮ್ಮೋಹಿನಿಯನ್ನು ಅನಾವ ರಣಗೊಳಿಸಿದರು. ಕಲಾವಿದರ ಉಸಿರಿನ ಅಗಾಧ ಸಾಧ್ಯತೆಗೆ ಬೆರಗಾದ ಶ್ರೋತೃ ಗಳು ಪಲ್ಲವಿಯಲ್ಲಿ ಮತ್ತೆ ಮತ್ತೆ ಹರ್ಷೋ ದ್ಗಾರ ಮತ್ತು ಚಪ್ಪಾಳೆ ನೀಡಿ ತಮ್ಮ ಸಂತಸ ವ್ಯಕ್ತಪಡಿಸಿದರು. ಅಷ್ಟರಲ್ಲಿ ವೇದಿಕೆಯ ನೆತ್ತಿಯಲ್ಲಿ ಚಂದ್ರೋದಯದ ಪ್ರಭಾವಳಿಯಿತ್ತು. 
 
ತಬಲಾದಲ್ಲಿ ಪಂಡಿತ್ ಶುಭಂಕರ ಬ್ಯಾನರ್ಜಿ ಮತ್ತು ಮೃದಂಗದಲ್ಲಿ ವಿದ್ವಾನ್ ಭಕ್ತವತ್ಸಲಂ ಅವರು ರಾಗಂ ತಾನಂ ಪಲ್ಲವಿಯಲ್ಲಿ ಕಲಾವಿದರಿಗೆ ಸಮರ್ಥ ಸಾಥ್ ನೀಡಿದರು. ತನಿ ಆವರ್ತನದಲ್ಲಿ ಮತ್ತೆ ತಮ್ಮ ಛಾಪೊತ್ತಿದ್ದ ತಾಳವಾದ್ಯ ಕಲಾವಿದರಿಗೆ ಸಭಿಕರು ಭೇಷ್ ಎಂದರು.  ಭಜನ್‌ನೊಂದಿಗೆ ಕಛೇರಿ ಮುಕ್ತಾಯವಾಗುತ್ತಿದ್ಧಂತೆಯೇ ಮತ್ತೆ ಚಪ್ಪಾಳೆಯ ಸುರಿಮಳೆ. 
 
ಎರಡನೇ ಹಂತದಲ್ಲಿ ನೃತ್ಯ ವೈವಿಧ್ಯ ದಲ್ಲಿ ಒಡಿಶಾದ ಗೋಟಿಪುವಾ ನೃತ್ಯ ವನ್ನು ಬರೋಬ್ಬರಿ 55 ಮಂದಿ ಕಲಾವಿ ದರು ಬೃಹತ್ ವೇದಿಕೆಯಲ್ಲಿ ಪ್ರಸ್ತುತಪ ಡಿಸಿದರೆ, ಬೆಂಗಳೂರಿನ 50 ಮಂದಿ ಕಲಾವಿದರು ನಿಯೋ ಕಥಕ್‌ಅನ್ನು ವಿರಾಸತ್ ಪ್ರೇಕ್ಷಕರಿಗೆ ಉಣಬಡಿಸಿದರು. ಗುಜರಾತ್‌ನ  ಪೃಥ್ವಿ ಶಾ ಅವರ ನಿರ್ದೇಶನದಲ್ಲಿ ಹುಡೋರಾಸ್ ನೃತ್ಯದಲ್ಲಿ 40ಕ್ಕೂ ಹೆಚ್ಚು ಕಲಾವಿ ದರಿದ್ದರು. ಬಡಗು ಯಕ್ಷಗಾನದ ಸೊಬಗಿನ ಪ್ರದರ್ಶನದೊಂದಿಗೆ ಮೊದಲ ದಿನದ ವಿರಾಸತ್ ಸಂಭ್ರಮ ಮುಕ್ತಾಯಗೊಂಡಿತು. 
 
**
ವಿಶ್ವಮಾನವತೆಸಂಕೇತ 
ವಿರಾಸತ್‌ನ ಲಾಂಛನವೆಂಬಂತೆ ಪ್ರಸಿದ್ಧವಾದ ಮೂರು ತ್ರಿಭುಜಗಳು ಸಭಾಂಗಣದ ಸುತ್ತ ಬಣ್ಣ ಬಣ್ಣದ ಬೆಳಕಿನೊಂದಿಗೆ ರಾರಾಜಿಸಿದರೆ, ಈ ಬಾರಿ ಸಭಾಂಗಣದ ಸುತ್ತಲೂ ಬೇರೆ ಬೇರೆ ದೇಶದ ಕಲಾತ್ಮಕ ಮುಖವಾಡಗಳನ್ನು ಇರಿಸಲಾಗಿತ್ತು.
 
ಇವು ವಿಶ್ವಮಾನವತೆಯ ಸಂಕೇತವನ್ನೂ ನೀಡು ತ್ತವೆ ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳುತ್ತ, ಸಭಿಕರ ಗಮನ ಸೆಳೆದರು. ವಿರಾ ಸತ್‌ಗೆ ಸಾಗುವ ದಾರಿಯುದ್ದಕ್ಕೂ ವಿವಿಧ ಕಲಾತ್ಮಕ ಪ್ರತಿಕೃತಿಗಳೂ ದೇಶದ ವಿವಿಧೆಡೆಯಿಂದ ಬಂದ ಕಲಾ ರಸಿಕರನ್ನು ಆಕರ್ಷಿಸಿದವು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.