ADVERTISEMENT

ಲವ್ ಜೆಹಾದಿಗೆ ಪೊಲೀಸರ ಬೆಂಬಲ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 8:47 IST
Last Updated 10 ಸೆಪ್ಟೆಂಬರ್ 2017, 8:47 IST
ರೋಟರಿ ಕ್ಲಬ್ ವತಿಯಿಂದ ಶಿಕ್ಷಕರಿಗೆ ಗೌರವಾರ್ಪಣೆ
ರೋಟರಿ ಕ್ಲಬ್ ವತಿಯಿಂದ ಶಿಕ್ಷಕರಿಗೆ ಗೌರವಾರ್ಪಣೆ   

ಪುತ್ತೂರು: ಕರಾವಳಿ ಭಾಗದಲ್ಲಿ ಲವ್ ಜೆಹಾದ್ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಸಂಪ್ಯ ಠಾಣಾ ಪೊಲೀಸರು ಲವ್ ಜೆಹಾದ್ ಪ್ರಕರಣದ ಆರೋಪಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಗೋರಕ್ಷಕ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಅವರು ಆರೋಪಿಸಿದರು.

ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಪೊಲೀಸರು ತಮ್ಮ ಕಾರ್ಯವೈಖರಿಯ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಹಿಂದೂ ಸಮಾಜ ಮತ್ತು ಹಿಂದೂ ಸಂಘಟನೆಗಳು ತಿರುಗಿ ಬಿದ್ದರೆ ನಿಮಗೆ 24ಗಂಟೆ ಕಾಲವೂ ನಿದ್ರೆ ಮಾಡಲಾಗದ ಪರಿಸ್ಥಿತಿ ಬರಬಹುದು. ಕಾನೂನು ಹಾಗೂ ಹೋರಾಟದ ಮೂಲಕ ಸಮರ್ಪಕ ಉತ್ತರ ನೀಡಲು ಸಂಘಟನೆ ಸಿದ್ಧವಿದೆ ಎಂದು ಎಚ್ಚರಿಸಿದರು.

ಕೇರಳದಲ್ಲಿ ನಡೆಯುತ್ತಿದ್ದ ಲವ್ ಜೆಹಾದ್ ಕರಾವಳಿ ಭಾಗಕ್ಕೆ ಕಾಲಿಟ್ಟಿದೆ. ಪುತ್ತೂರು ತಾಲ್ಲೂಕಿನ ಪಾಲ್ತಾಡಿನಲ್ಲಿ ಲವ್ ಜೆಹಾದಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿ, ಒಂದು ತಿಂಗಳಾದರೂ ಆರೋಪಿಯ ಬಂಧನವಾಗಿಲ್ಲ. ಈ ಲವ್ ಜಿಹಾದಿ ಪ್ರಕರಣದ ಹಿನ್ನೆಲೆಯಲ್ಲಿ ಭಾನುವಾರ ಅಂಕತ್ತಡ್ಕದಲ್ಲಿ ನಡೆಯುವ ಜನಜಾಗೃತಿ ಸಮಾವೇಶಕ್ಕೆ ನಮ್ಮ ಪೂರ್ಣ ಬೆಂಬಲವಿದೆ ಎಂದರು.

ADVERTISEMENT

ಸಂಪ್ಯ ಠಾಣೆಯ ಪೊಲೀಸ್ ಅಧಿಕಾರಿ ಅಬ್ದುಲ್ ಖಾದರ್ ಅವರ ಕಾರ್ಯವೈಖರಿ ವಿರುದ್ಧ ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಇದೇ 15ರಂದು ಮಧ್ಯಾಹ್ನ 3 ರಿಂದ ಪುತ್ತೂರು ನಗರದಲ್ಲಿ ಪ್ರತಿಭಟನಾ ರ್‍ಯಾಲಿ, ಸಂಜೆ 4 ಗಂಟೆಗೆ ಇಲ್ಲಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಲಿದೆ. ಹಿಂದೂ ಜಾಗರಣಾ ವೇದಿಕೆಯ ಮುಖಂಡ ಜಗದೀಶ್ ಕಾರಂತ್ ಅವರು ಮುಖ್ಯ ಭಾಷಣ ಮಾಡುವರು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.