ADVERTISEMENT

ವಿಶೇಷ ನಿಯಮಾವಳಿ ರೂಪಿಸಿ: ಅಹಮ್ಮದ್

​ಪ್ರಜಾವಾಣಿ ವಾರ್ತೆ
Published 24 ಮೇ 2017, 8:34 IST
Last Updated 24 ಮೇ 2017, 8:34 IST

ಮಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಸದಾ ಅಭಿವೃದ್ಧಿಯ ಮಂತ್ರ ವನ್ನು ಜಪಿಸುತ್ತಿದ್ದು, ಹಲವಾರು ಭಾಗ್ಯ ಗಳ ನೆಪದಲ್ಲಿ ಜನತೆಗಳಿಗೆ ವಂಚಿಸುತ್ತಿದೆ. ಬೀದಿಬದಿ ವ್ಯಾಪಾರಸ್ಥರಿಗೆ ಮಾತ್ರ ನಾಲ್ಕು ವರ್ಷಗಳ ಅವಧಿಯಲ್ಲಿ ವಿಶೇಷ ನಿಯಮಾವಳಿಯನ್ನು ರೂಪಿಸದೆ ಅನ್ಯಾಯ ಎಸಗಿದೆ ಎಂದು ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಅಹಮ್ಮದ್‌ ಆಕ್ರೋಶ ವ್ಯಕ್ತಪಡಿಸಿದರು.

ಅವರು ನಗರದ ಎನ್‌ಜಿಓ ಹಾಲ್‌ನಲ್ಲಿ ಮಂಗಳವಾರ ಜರುಗಿದ ಸಿಐಟಿಯುಗೆ ಸಂಯೋಜಿತಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ 6ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಎಡಪಕ್ಷಗಳ ಪ್ರಬಲ ಒತ್ತಡದಿಂದಾಗಿ, ದೇಶದಲ್ಲಿ ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಿದೆ. ಅದನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು, ರಾಜ್ಯ ಸರ್ಕಾರ ಗಳು ವಿಶೇಷ ನಿಯಮಾ ವಳಿಗಳನ್ನು ರೂಪಿಸಬೇಕಾಗುತ್ತದೆ. ಆದರೆ, ರಾಜ್ಯ ದಲ್ಲಿ ಮಾತ್ರ ಇದುವರೆಗೆ ವಿಶೇಷ ನಿಯ ಮಾವಳಿ ರೂಪಿಸುತ್ತಿಲ್ಲ ಎಂದರು.

ADVERTISEMENT

ದೇಶದಲ್ಲಿ ಸ್ಮಾರ್ಟ್ ಸಿಟಿಯ ಹೆಸರಿ ನಲ್ಲಿ ಬಡವರ ಮೇಲಿನ ದಾಳಿಗಳು ತೀವ್ರಗೊಳ್ಳುತ್ತಿದೆ. ಕಾಯ್ದೆಯಲ್ಲಿ ನಿಯಂ ತ್ರಣ ಹಾಗೂ ರಕ್ಷಣೆ ಎಂಬುದಿದ್ದರೂ, ಇಲ್ಲಿ ನಿಯಂತ್ರಣಕ್ಕೆ ಒತ್ತು ನೀಡಲಾ ಗುತ್ತಿದ್ದು, ರಕ್ಷಣೆಯೇ ಇಲ್ಲವಾಗಿದೆ ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಸಮಾಜದಲ್ಲಿ ನಿಕೃಷ್ಟವಾಗಿ ಜೀವನ ನಡೆಸುತ್ತಿರುವ ಬೀದಿಬದಿ ವ್ಯಾಪಾರ ಸ್ಥರು, ಬದುಕನ್ನು ತಾವೇ ಕಟ್ಟಿಕೊಳ್ಳುವ ಮೂಲಕ ಪರೋಕ್ಷವಾಗಿ ಸರ್ಕಾರಗಳಿಗೆ ಸಹಾಯ ಮಾಡುತ್ತಿದ್ದಾರೆ. ಆದರೆ ಸರ್ಕಾರಗಳು ಮಾತ್ರ ಬೀದಿ ವ್ಯಾಪಾರಸ್ಥರ ಮೇಲೆ ಕೆಂಗಣ್ಣು ಬೀರಿ, ಅವರನ್ನು ಎತ್ತಂಗಡಿ ನಡೆಸಲು ಹೊಂಚು ಹಾಕುತ್ತಿವೆ ಎಂದು ಆರೋಪಿಸಿದರು.

ಸಮಾರೋಪ ಭಾಷಣ ಮಾಡಿದ ಸಿಐಟಿಯು ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನ ಮೊಗರು, ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳು, ಮಾನವ ಹಕ್ಕುಗಳ ಭಾಗವಾ ಗಿದೆ. ಅಂತಹ ಹಕ್ಕುಗಳ ರಕ್ಷಣೆಗೆ ಕ್ರಮಬದ್ಧವಾಗಿ ಹೋರಾಡಬೇಕಾಗಿದೆ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್. ಎಸ್‌. ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ಸಂಘದ ಅಧ್ಯಕ್ಷ ಮಹಮ್ಮದ್ ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿ ಗಳಾದ ಅತ್ತಾ ವುಲ್ಲಾ, ಅಣ್ಣಯ್ಯ, ಹಿತೇಶ್ ಪೂಜಾರಿ, ಹಸನ್, ಅಬ್ದುಲ್ ಖಾದರ್, ಮುತ್ತು ರಾಜು, ಶಿವಪ್ಪ, ಆದಂ ಬಜಾಲ್, ಆಸಿಫ್, ಹರೀಶ್, ಶ್ರೀಧರ್, ಹೆಲೆನ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.