ADVERTISEMENT

ಶಾಲಾ ಜಮೀನು ಒತ್ತುವರಿ ತೆರವಿಗೆ ಸೂಚನೆ

ಸುಳ್ಯ: ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 4:50 IST
Last Updated 4 ಫೆಬ್ರುವರಿ 2017, 4:50 IST
ಸುಳ್ಯ: ತಾಲ್ಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ತಾಲ್ಲೂಕು ಪಂಚಾಯಿತಿ ಪಯಸ್ವಿನಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್. ಅಂಗಾರ ಅವರು, ದೇವಚಳ್ಳ ಶಾಲಾ ಜಮೀನು ಒತ್ತುವರಿ ಕುರಿತು ಚರ್ಚೆ ನಡೆದು ತಾಲ್ಲೂಕಿನ ಎಲ್ಲ ಶಾಲೆಗಳು ಒತ್ತುವರಿಯಾಗದಂತೆ ತಡೆಯುವುದು ಶಾಲೆಗಳ ಮುಖ್ಯ ಶಿಕ್ಷಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿ, ಒತ್ತುವರಿಯಾದರೆ ಅವುಗಳನ್ನು ತೆರವು ಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
 
ಅಂಗನವಾಡಿ ಬಂದ್ ಮಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸು ತ್ತಿರುವ ವಿಷಯ ಸಿಡಿಪಿಒ ಸುಕನ್ಯಾ ಸಭೆಯ ಗಮನಕ್ಕೆ ತಂದರು. ಭಾಗ್ಯಲಕ್ಷ್ಮಿ ಫಲಾನುಭವಿ ವಿದ್ಯಾರ್ಥಿಗಳು 3ನೇ ತರಗತಿಗೆ ಬಂದಾಗ ಅವರಿಗೆ ವಿದ್ಯಾರ್ಥಿ ವೇತನ ನೀಡಬೇಕಿದ್ದರೂ ಅದು ಸಿಗು ತ್ತಿಲ್ಲ ಎಂದು ಸದಸ್ಯ ಅಚ್ಯುತ ಮಲ್ಕಜೆ ಹೇಳಿದರು.  
 
ಅಮೃತ ಯೋಜನೆಯಲ್ಲಿ ಕೃಷಿಕೂಲಿ ಕಾರ್ಮಿಕರಿಗೆ ದೃಢಪತ್ರ ಸಿಗು ತ್ತಿಲ್ಲ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹೇಳಿದ್ದು, ತಹ ಶೀಲ್ದಾರ್ ಗ್ರಾಮಕರಣಿಕರಿಗೆ ಸೂಚನೆ ನೀಡಿ ಶೀಘ್ರ ಒದಗಿಸಬೇಕು ಎಂದು ಅಂಗಾರ ಆದೇಶಿಸಿದರು. ಇಲಾಖೆ ಯವರು ಫಲಾನುಭವಿಗಳ ಪಟ್ಟಿ ನೀಡಿ ದರೆ ಅದನ್ನು ದೃಢೀಕರಿಸಿ ನೀಡುವು ದಾಗಿ ತಹಶೀಲ್ದಾರ್ ತಿಳಿಸಿದರು.
 
ಮೊರಾರ್ಜಿ ಶಾಲೆಯಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಚ್ಯುತ ಮಲ್ಕಜೆ ಹೇಳಿದರು. ಅರಣ್ಯ ಉತ್ಪತ್ತಿ ಸಂಗ್ರಹಿ ಸುವ ಗುತ್ತಿಗೆದಾರರು ಸ್ಥಳೀಯ ಜನರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ವರ ಕಾರ್ಯ ವ್ಯಾಪ್ತಿ ಏನು? ಎಂದು ಅಧಿಕಾ ರಿಗಳು ಸ್ಪಷ್ಟನೆ ನೀಡಬೇಕು ಎಂದು ಸದಸ್ಯ ರಾಧಾಕೃಷ್ಣ ಪರಿವಾರಕಾನ ಆಗ್ರ ಹಿಸಿದರು. ಅಧಿಕಾರಿಗಳು ಜವಾ ಬ್ದಾರಿ ವಹಿಸುವಂತೆ ಅಂಗಾರ ಸೂಚಿಸಿದರು.
 
ರಸ್ತೆ ಬದಿ ಹಾಗೂ ಹೊಳೆ ಪರಂ ಬೋಕುಗಳಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇದಕ್ಕೆ ಯಾವ ಕಡಿವಾಣವೂ ಇಲ್ಲ. ಕಟ್ಟಡಗಳಿಂದ ಗಲೀಜು ನೀರನ್ನು ನೇರವಾಗಿ ಹೊಳೆಗೆ ಬಿಡಲಾಗುತ್ತದೆ ಎಂದು ಅಂಗಾರ ಹೇಳಿದರು.
 
ಇದಕ್ಕೆ ಹೇಗೆ ಪರವಾನಗಿ ನೀಡಲಾಗುತ್ತದೆ? ಎಂದು ಅವರು ನಗರ ಪಂಚಾಯಿತಿ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ಆಲೆಟ್ಟಿಗೆ ಹೋಗುವ ರಸ್ತೆ ಮೊದಲೇ ಕಿರಿದಾಗಿದೆ. ಅಲ್ಲೂ ರಸ್ತೆಗೆ ಹೊಂದಿಕೊಂಡು ಹೊಸದಾಗಿ ಕಟ್ಟಡ ಗಳು ಎದ್ದು ನಿಲ್ಲುತ್ತವೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು. ಅನಧಿಕೃತ ಕಟ್ಟಡಗಳನ್ನು ತೆರವು ಮಾಡುವಂತೆ ನಿರ್ಣಯ ಕೈಗೊಂಡು ಕ್ರಮಕ್ಕೆ ಜಿಲ್ಲಾಧಿ ಕಾರಿಗೆ ಕಳುಹಿಸುವಂತೆ ಅಂಗಾರ ಸೂಚಿಸಿದರು. 
 
 ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಶುಭದಾ ಎಸ್. ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾ ಕೃಷ್ಣ ಬೊಳ್ಳೂರು, ಕಾರ್ಯನಿರ್ವಹಣಾ ಧಿಕಾರಿ ಮಧುಕುಮಾರ್, ತಹಶೀಲ್ದಾರ್ ಎಂ.ಎಂ.ಗಣೇಶ್ ವೇದಿಕೆಯಲ್ಲಿದ್ದರು. 
 
**
6 ತಿಂಗಳಿಂದ ವೇತನ ಬಂದಿಲ್ಲ
ವಸತಿ ಯೋಜನೆಯ ನೋಡೆಲ್ ಅಧಿಕಾರಿಗೆ 6 ತಿಂಗಳಿನಿಂದ ವೇತನ ಬಾರದೇ ಸಮಸ್ಯೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ತಿಮ್ಮಪ್ಪ ಹೇಳಿದ್ದಾರೆ.
 
ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಸಂಬಳ ಬಾರದೇ ಅಧಿಕಾರಿಗಳು ಹೇಗೆ ಕೆಲಸ ಮಾಡುವುದು? ಎಂದು ಪ್ರಶ್ನಿಸಿದರು. ನಿರ್ಮಿತಿ ಕೇಂದ್ರದವರು ನೀಡಬೇಕಿದ್ದು, ಅವರು ಅದಕ್ಕೆ 
 
ಜವಾಬ್ದಾರರು ಎಂದು ಇಒ ಮಧುಕುಮಾರ್ ಹೇಳಿದರು. ಯಥಾಸ್ಥಿತಿಗೆ ಹೈಕೋರ್ಟ್ ಸೂಚನೆ ನೀಡಿದ್ದರೂ ಸಂಬಳ ನೀಡುತ್ತಿಲ್ಲ ಎಂದು ನೋಡೆಲ್ ಅಧಿಕಾರಿ ಸಂತೋಷ್ ಕುಮಾರ್ ಅಹವಾಲು ತೋಡಿಕೊಂಡರು. ವಿಧಾನಸಭಾ ಅಧಿವೇಶನದಲ್ಲಿ ಶಾಸಕರು ಈ ಕುರಿತು ಪ್ರಸ್ತಾಪಿಸಿ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.