ADVERTISEMENT

ಹಗ್ಗ ಹಿರಿಯ– ನಂದಳಿಕೆ ಕೋಣಕ್ಕೆ ಪ್ರಶಸ್ತಿ

ಕಕ್ಯಪದವು: ‘ಸತ್ಯ-ಧರ್ಮ’ ಕಂಬಳ ಸಮಾರೋಪ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 10:53 IST
Last Updated 5 ಮಾರ್ಚ್ 2015, 10:53 IST

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಉಳಿ ಗ್ರಾಮದ ಕಕ್ಯಪದವು ಮೈರ ಬರ್ಕೆಜಾಲು ಎಂಬಲ್ಲಿ ಶ್ರೀರಾಮಾಂಜನೇಯ ಗೆಳೆಯರ ಬಳಗ ವತಿಯಿಂದ ಭಾನುವಾರ ಸಮಾರೋಪಗೊಂಡ ‘ಸತ್ಯ-ಧರ್ಮ’ ಹೊನಲು ಬೆಳಕಿನ ಜೋಡುಕರೆ ಬಯಲು ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ನಂದಳಿಕೆ ಶ್ರೀಕಾಂತ ಭಟ್ ಅವರ ಕೋಣಗಳು ಪಡೆದವು. ನಕ್ರೆ ಜಯಕರ ಮಡಿವಾಳ ಕೋಣ ಓಡಿಸಿದ್ದರು.

ಹಗ್ಗ ಕಿರಿಯ: 1. ಅಡ್ವೆ ಕಂಕಣಗುತ್ತು ಹರೀಶ್ ಶೆಟ್ಟಿ (ಓ) ಮಂದಾರ್ತಿ ಸುರೇಶ್., 2. ಕಾರ್ಕಳ ತೆಲ್ಲಾರ್ ರತ್ನಾಕರ ಸುವರ್ಣ (ಓ) ಮರೋಡಿ ಶ್ರೀಧರ. ಕನೆಹಲಗೆ: 1. ವಾಮಂಜೂರು ತಿರುವೈಲುಗುತ್ತು ನವೀನಚಂದ್ರ ಆಳ್ವ. ಓಡಿಸಿದವರು- ಮಂದಾರ್ತಿ ಶಿರೂರು ನಾರಾಯಣ ನಾಯ್ಕ, 2. ಬಾರ್ಕೂರು ಶಾಂತಾರಾಮ ಶೆಟ್ಟಿ (ಓ) ಮಂದಾರ್ತಿ ಶಿರೂರು ಗೋಪಾಲ ನಾಯ್ಕ.

ಅಡ್ಡಹಲಗೆ: 1.ಬೇಲಾಡಿ ಬಾವ ಡಾ.ಪ್ರಜ್ಯೋತ್ ಶೆಟ್ಟಿ, ಓಡಿಸಿದವರು- ನಾರಾವಿ ಯುವರಾಜ ಜೈನ್. 2.-ಸುರತ್ಕಲ್ ಸವರ್ತ್ತಮ ಮಾಧವ ಪ್ರಭು (ಓ)-ಪಣಪ್ಪಿಲ ರಾಜವರ್ಮ ಮುದ್ಯ. ನೇಗಿಲು ಹಿರಿಯ: 1.-ಬೋಳದಗುತ್ತು ಸತೀಶ ಶೆಟ್ಟಿ (ಓ) ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ.ಶೆಟ್ಟಿ. 2.ಇರುವೈಲು ಪಾಣಿಲ ಬಾಡಪೂಜಾರಿ (ಓ)- ಕೊಳಕೆ ಇರ್ವತ್ತೂರು ಆನಂದ. ನೇಗಿಲು ಕಿರಿಯ: 1.ಪದವು ಕಾನಡ್ಕ ಫ್ರಾನ್ಸಿಸ್ ಪ್ಲಾವಿ ಡಿಸೋಜ(ಓ)ಪ್ರವೀಣ್ ಕೋಟ್ಯಾನ್ ಪಣತ್ತಿಲು, 2. ಕಾಂತಾವರ ಅಂಬೊಡಿ­ಮಾರ್ ರಘುನಾಥ್ ದೇವಾಡಿಗ(ಓ) ಶ್ರೀನಿವಾಸ ಗೌಡ ಅಶ್ವತ್ಥಪುರ.

ಎಂ. ರಾಜೀವ ಶೆಟ್ಟಿ ಎಡ್ತೂರು, ಸುಧಾಕರ ಶೆಟ್ಟಿ ಮೊಗೆರೋಡಿ, ನಿರಂಜನ ರೈ ಕೊಡ್ಯಾಡಿ ಪ್ರಧಾನ ತೀರ್ಪುಗಾರರಾಗಿದ್ದರು.  ಸಮಾರೋಪ ಸಮಾರಂಭದಲ್ಲಿ ಕಂಬಳ ಸಮಿತಿ ಗೌರವಧ್ಯಕ್ಷ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮಾತ­ನಾಡಿದರು.

ಉದ್ಯಮಿ ಜಿತೇಂದ್ರ ಎಸ್.ಕೊಟ್ಟಾರಿ, ಮಂಗ­ಳೂರು ಬಿಜೆಪಿ ಕಾರ್ಯದರ್ಶಿ ಡಾ.ಭರತ್‌ರಾಜ್‌ ಶೆಟ್ಟಿ,  ರಾಜ್ಯ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ  ಕಿಶೋರ್ ಕುಮಾರ್ ಪುತ್ತೂರು, ಕಂಬಳ ಸಮಿತಿ ಅಧ್ಯಕ್ಷ  ಎಂ.ತುಂಗಪ್ಪ ಬಂಗೇರ, ಸ್ಥಳದಾನಿ ತುಕ್ರಪ್ಪ ಗೌಡ, ಉದ್ಯಮಿಗಳಾದ ನಾರಾಯಣ ಶೆಟ್ಟಿ ಕಕ್ಯ ಬೋಳದಗುತ್ತು ಸತೀಶ್ ಶೆಟ್ಟಿ, ವಿಜಯ ರೈ ಆಲದಪದವು.

ನವೀನ್ಚಂದ್ರ ಆಳ್ವ ತಿರುವೈಲುಗುತ್ತು, ವಕೀಲ ಹರೀಶ್ ಪೂಂಜ, ಗೆಳೆಯರ ಬಳಗದ ಅಧ್ಯಕ್ಷ ರಂಜಿತ್ ಮೈರ, ಮಾಜಿ ಅಧ್ಯಕ್ಷ ಪುರಂದರ ಕೆ., ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಕಂಬಳ ಸಮಿತಿ ಸದಸ್ಯ  ಸಾಯಿಗಿರಿಧರ ಶೆಟ್ಟಿ,  ಚಿದಾನಂದ ರೈ ಕಕ್ಯ, ಕೆ.ಹರಿಶ್ಚಂದ್ರ ಪೂಜಾರಿ, ಪುರುಷೋತ್ತಮ ಪೂಜಾರಿ, ಸುರೇಶ್ ಮೈರ, ಪ್ರಶಾಂತ್ ಮೈರ, ಶಿವಾನಂದ ಮೈರ, ಹರೀಶ್ ಕಕ್ಯ , ಸುಧಾಕರ ಶೆಟ್ಟಿ ಶಂಕರಬೆಟ್ಟು, ಪ್ರವೀಣ್ ಶೆಟ್ಟಿ ಕಿಂಜಾಲು, ಬಂಟ್ವಾಳ ಉಪ ತಹಶೀಲ್ದಾರ್ ರೋಹಿನಾಥ್  ಉಪಸ್ಥಿತರಿದ್ದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವಜ್ಞ ನಾರಾಯಣ ಶಾಂತಿ ಪಟ್ಲಕೆರೆ, ಕಂಬಳದ ತೀರ್ಪುಗಾರ ಎಂ. ರಾಜೀವ ಶೆಟ್ಟಿ ಎಡ್ತೂರು, ಸಮಾಜ ಸೇವಕ ರವಿ ಕಕ್ಯಪದವು, ಕಂಬಳ ಸಾಧಕ ಸುಂದರ ಕೆ. ಆಚಾರ್ಯ ಸಾಣೂರು, ಭೂತಾರಾಧಕ ಜಾರಪ್ಪ ಪೂಜಾರಿ ಕಲಾಯ ಅವರನ್ನು ಸಮ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.