ADVERTISEMENT

‘ಶ್ರದ್ಧೆ ಇದ್ದರೆ ದೈವಾನುಗ್ರಹ ಪ್ರಾಪ್ತಿ’

ನವೀಕೃತ ಗರ್ಭಗೃಹ ಸಮರ್ಪಣೆ-ಪುನಃ ಪ್ರತಿಷ್ಠೆ-ಬ್ರಹ್ಮಕಲಶೋತ್ಸವ

​ಪ್ರಜಾವಾಣಿ ವಾರ್ತೆ
Published 29 ಮೇ 2015, 11:45 IST
Last Updated 29 ಮೇ 2015, 11:45 IST

ಶಿರ್ವ: ‘ಜೀವನದ ಯಶಸ್ಸಿಗೆ ಪ್ರಾಮಾಣಿಕ ಪ್ರಯತ್ನದ ಜೊತೆಗೆ ದೇವರ ಅನು ಗ್ರಹವೂ ಮುಖ್ಯವಾಗಿದ್ದು, ಶೃದ್ಧೆ ನಂಬಿಕೆ ಉಳಿಸಿಕೊಂಡಾಗ ದೈವಾನುಗ್ರಹ ಪ್ರಾಪ್ತಿ ಯಾಗುತ್ತದೆ’ ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ನುಡಿದರು.

ಇತಿಹಾಸ ಪ್ರಸಿದ್ಧ ಬಂಟಕಲ್ಲು ಸಮೀಪದ ೯೨ಹೇರೂರು ಬಬ್ಬುಸ್ವಾಮಿ ಪರಿವಾರ ಸನ್ನಿಧಿಗಳ ನೂತನ ಶಿಲಾ ಮಯ ಆವರ್ಕಆರೂಢದಲ್ಲಿ ‘ನವೀಕೃತ ಗರ್ಭಗೃಹ ಸಮರ್ಪಣೆ-ಪುನ:ಪ್ರತಿಷ್ಠೆ-ಬ್ರಹ್ಮಕಲಶೋತ್ಸವ -ಮಹಾ ಅನ್ನಸಂತ ರ್ಪಣೆ’ ಪ್ರಯುಕ್ತ ಬುಧವಾರ ಏರ್ಪಡಿ ಸಿದ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ದೈವ ಬಲವಿಲ್ಲದೇ ಯಾವುದೇ ಕೆಲಸ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂಬು ದನ್ನು ಪ್ರತಿಯೊಬ್ಬರು ಅರ್ಥ ಮಾಡಿ ಕೊಂಡಾಗ ಮಾತ್ರ ಶ್ರದ್ಧೆ, ನಂಬಿಕೆ ತನ್ನಿಂದ ತಾನೆ ಬಲಗೊಳ್ಳಲಿದೆ ಎಂದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಪರಶುರಾಮ ಸೃಷ್ಠಿಯಲ್ಲಿ ದೈವ,ನಾಗ ಹಾಗೂ ಪ್ರಕೃತಿಯ ಆರಾಧನೆಗೆ ಹೆಚ್ಚಿನ ಮಹತ್ವವಿದ್ದು, ಪುರಾತನ ಸಾನಿಧ್ಯಗಳ ಜೀರ್ಣೋದ್ಧಾರ ದಿಂದ  ಧಾರ್ಮಿಕ ಚೌಕಟ್ಟು ಬೆಸೆದಾಗ ಕುಗ್ರಾಮಗಳು ಸುಗ್ರಾಮಗಳಾಗಿ ಪರಿವರ್ತನೆಗೊಂಡ ನೂರಾರು ನಿದರ್ಶನಗಳು ಈ ತುಳುನಾಡಿನಲ್ಲಿವೆ ಎಂದರು.

ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್ ಶೆಟ್ಟಿ ಪಾದೂರು, ಶಿರ್ವ ರೋಟರಿ ಅಧ್ಯಕ್ಷ ಡಾ.ಎನ್.ಎಸ್.ಶೆಟ್ಟಿ ಅಬ್ಬೆಟ್ಟುಗುತ್ತು ಹೇರೂರು, ಹಿರಿಯ ಶಿಕ್ಷಕ ಬಿ.ಪುಂಡಲೀಕ ಮರಾಠೆ ಶಿರ್ವ, ಮಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮಾತನಾಡಿದರು.
ಮಹಾಲಿಂಗೇಶ್ವರ ದೇವಳದ ಅರ್ಚಕ ವೇದಮೂರ್ತಿ ಗುರುರಾಜ ಭಟ್, ಮುಂಬಯಿ ಸಮಿತಿ ಅಧ್ಯಕ್ಷ ಅನಿಲ್ ಶೆಟ್ಟಿ, ದೈವಸ್ಥಾನದ ಅರ್ಚಕ ತಿಮ್ಮ ಪಾತ್ರಿ ಉಪಸ್ಥಿತರಿದ್ದರು.

ಜೀಣೋದ್ಧಾರ ಕಾರ್ಯಕ್ಕೆ ಸಹ ಕರಿಸಿದ ದಾನಿಗಳನ್ನು ವಿವಿಧ ಸಂಘಟ ನೆಗಳು, ಸ್ವಯಂ ಸೇವಕರನ್ನು ಸನ್ಮಾನಿಸ ಲಾಯಿತು, ಸಮಾರಂಭದ ಅಧ್ಯಕ್ಷತೆ ಯನ್ನು ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷ ಅಣ್ಣಾವರ ಶಂಕರ ಶೆಟ್ಟಿ ಎರ್ಮಾಳು ವಹಿಸಿದ್ದರು.
 
ಸಮಿತಿಯ ಅಧ್ಯಕ್ಷ ಗಣೇಶ ಶೆಟ್ಟಿ ಹೇರೂರು ಸ್ವಾಗತಿಸಿ ದರು.  ಮುಖ್ಯ ಶಿಕ್ಷಕ ನಿರ್ಮಲಕುಮಾರ್ ಶೆಟ್ಟಿ ಕಾರ್ಯಕ್ರಮ  ನಿರೂಪಿಸಿದರು.  ಸುಗಂಧಿ ಶೆಟ್ಟಿ ಪ್ರಾರ್ಥಿಸಿದರು. ಮುಂಬಯಿ ಸಮಿತಿ ಕಾರ್ಯದರ್ಶಿ ಅನಿಲ್ ಶೆಟ್ಟಿ ಅವರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT