ADVERTISEMENT

10 ಸಾವಿರ ಸ್ವೈಪಿಂಗ್‌ ಯಂತ್ರಗಳ ಸ್ಥಾಪನೆ

ಡಿಜಿಟಲ್ ವಹಿವಾಟಿಗೆ ಕರ್ಣಾಟಕ ಬ್ಯಾಂಕ್‌ನಿಂದ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 6:22 IST
Last Updated 28 ಮಾರ್ಚ್ 2017, 6:22 IST
10 ಸಾವಿರ ಸ್ವೈಪಿಂಗ್‌ ಯಂತ್ರಗಳ ಸ್ಥಾಪನೆ
10 ಸಾವಿರ ಸ್ವೈಪಿಂಗ್‌ ಯಂತ್ರಗಳ ಸ್ಥಾಪನೆ   
ಮಂಗಳೂರು:  ಡಿಜಿಟಲ್‌ ವಹಿವಾಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕರ್ಣಾ ಟಕ ಬ್ಯಾಂಕ್‌ ಒತ್ತು ನೀಡುತ್ತಿದ್ದು, ಇದು ವರೆಗೆ 10 ಸಾವಿರ ಸ್ವೈಪಿಂಗ್‌ ಯಂತ್ರಗ ಳನ್ನು ದೇಶದ ವಿವಿಧೆಡೆ ಸ್ಥಾಪಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭ ದಲ್ಲಿ 10 ಸಾವಿರನೇ ಯಂತ್ರವನ್ನು ಬೆಂಗ ಳೂರಿನ ಹೋಟೆಲ್‌ ಉದ್ಯಮಿ ಡಾ. ರವಿ ಚಂದರ್‌ ಅವರಿಗೆ, ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಪಿ. ಜಯರಾಮ್‌ ಭಟ್‌ ಹಸ್ತಾಂತರಿಸಿದರು. 
 
ಡಿಜಿಟಲ್‌ ವಹಿವಾಟಿಗಾಗಿ 2011 ರಿಂದ ಪಾಯಿಂಟ್‌ ಆಫ್‌ ಸೇಲ್‌ (ಪಿಒ ಎಸ್‌) ಯಂತ್ರಗಳ ಅಳವಡಿಕೆಯನ್ನು ಕರ್ಣಾಟಕ ಬ್ಯಾಂಕ್‌ ಪ್ರಾರಂಭಿಸಿದೆ. ವರ್ತಕರಿಗೆ ನಗದುರಹಿತ ವಹಿವಾಟು ನಡೆಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಸ್ವೈಪಿಂಗ್‌ ಯಂತ್ರಗಳನ್ನು ಕರ್ಣಾಟಕ ಬ್ಯಾಂಕ್‌ ಸ್ಥಾಪಿಸುತ್ತಿದೆ.

ಡಿಜಿಟಲ್‌ ಸ್ವೈಪಿಂಗ್ ಯಂತ್ರಗಳ ಮೂಲಕ ಹಣ ಪಾವತಿಸುವ ಗ್ರಾಹಕರ ಮೊಬೈಲ್‌ಗೆ ಯುಆರ್‌ಎಲ್‌ ಲಿಂಕ್‌ನ ಮಾಹಿತಿ ರವಾನಿಸಲಾಗುತ್ತದೆ. ಈ ಯುಆರ್‌ಎಲ್‌ ಲಿಂಕ್‌ ಮೂಲಕ ಗ್ರಾಹಕರು, ತಮ್ಮ ಖರೀದಿಗೆ ರಸೀದಿ ಪಡೆಯಬಹುದಾಗಿದೆ.  
 
ಇದರ ಜತೆಗೆ ‘ಪಿಒಎಸ್‌ ಮ್ಯಾನೇ ಜರ್‌’ ಎಂಬ ಹೊಸ ಮೊಬೈಲ್‌ ಆ್ಯಪ್‌ ಅನ್ನು ಬಿಡುಗಡೆ ಮಾಡಿದ್ದು, ಈ ಆ್ಯಪ್‌ ಮೂಲಕ ಗ್ರಾಹಕರು ತಮ್ಮ ದೈನಂದಿನ ವಹಿವಾಟಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.
 
ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆ ನೀಡುವ ನಿಟ್ಟಿನಲ್ಲಿ ಹೊಸ ಸೌಲಭ್ಯಗಳನ್ನು ಬ್ಯಾಂಕ್‌ ಕಲ್ಪಿಸುತ್ತಿದೆ. ಅದರಲ್ಲೂ ಪ್ರಮು ಖವಾಗಿ ಡಿಜಿಟಲ್‌ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಬ್ಯಾಂಕ್‌ ವ್ಯವ ಸ್ಥಾಪಕ ನಿರ್ದೇಶಕ, ಸಿಇಒ ಪಿ. ಜಯರಾಮ್‌ ಭಟ್‌ ಹೇಳಿದರು. 
 
ನೋಟು ರದ್ದತಿಯ ನಂತರ ಡಿಜಿ ಟಲ್ ವಹಿವಾಟಿನಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ. ಡಿಜಿಟಲ್‌ ವಹಿವಾಟು ಅಳವಡಿಸಿಕೊಳ್ಳುತ್ತಿರುವ ಗ್ರಾಹಕರು ಸಂಖ್ಯೆಯೂ ಹೆಚ್ಚಾಗಿದೆ. ಇದನ್ನು ಗಮ ನದಲ್ಲಿ ಇಟ್ಟುಕೊಂಡು ಡಿಜಿಟಲ್‌ ವಹಿ ವಾಟಿಗೆ ಕರ್ಣಾಟಕ ಬ್ಯಾಂಕ್‌ ಸಾಕಷ್ಟು ಮಹತ್ವ ನೀಡುತ್ತಿದೆ. ಈ ಆರ್ಥಿಕ ವರ್ಷ ದಲ್ಲಿ 7 ಸಾವಿರಕ್ಕೂ ಅಧಿಕ ಸ್ವೈಪಿಂಗ್‌ ಯಂತ್ರಗಳನ್ನು ಅಳವಡಿಸುವ ಮೂಲಕ ಗುರಿ ಮೀರಿದ ಸಾಧನೆ ಮಾಡಿದೆ ಎಂದು ತಿಳಿಸಿದರು. 
 
ಸ್ವೈಪಿಂಗ್‌ ಯಂತ್ರಗಳ ಸೇವೆಯನ್ನು ಕೈಗೆಟುವ ಬೆಲೆಯಲ್ಲಿ ನೀಡಲಾಗುತ್ತಿದ್ದು, ಇದಕ್ಕಾಗಿ 10 ಸಾವಿರ ಸ್ವೈಪಿಂಗ್‌ ಯಂತ್ರ ಗಳ ಅಳವಡಿಕೆ ಸಾಧ್ಯವಾಗಿದೆ. ಬರುವ ದಿನಗಳಲ್ಲಿ ಡಿಜಿಟಲ್‌ ಬ್ಯಾಂಕಿಂಗ್‌ಗೆ ಇನ್ನಷ್ಟು ಕೊಡುಗೆ ನೀಡಲು ಬ್ಯಾಂಕ್ ಸಿದ್ಧವಾಗಿದೆ ಎಂದು ಹೇಳಿದರು. 
 
ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಮಹಾಬಲೇಶ್ವರ ಎಂ.ಎಸ್., ಎಂಆರ್ ಎಲ್ ಪೋಸ್‌ನೆಟ್‌ನ ಸಿಇಒ ಪ್ರತಾಪ್‌ ಪಿ.ವಿ., ಬ್ಯಾಂಕಿನ ಪ್ರಾದೇಶಿಕ ಕಚೇರಿ ಮುಖ್ಯ ಗೋಕುಲ್‌ದಾಸ್‌ ಪೈ ಇದ್ದರು.
 
ಡಿಜಿಟಲ್‌ ವಹಿವಾಟಿಗೆ ಸಂಬಂಧಿಸಿದಂತೆ ಈ ಆರ್ಥಿಕ ವರ್ಷದಲ್ಲಿ ‘ಕೆಬಿಎಲ್‌ ಸ್ಮಾರ್ಟ್‌ ಯುಪಿಐ ಆ್ಯಪ್‌’, ರುಪೇ ಪ್ಲಾಟಿನಂ ಡೆಬಿಟ್‌ ಕಾರ್ಡ್‌ನಂತಹ ಹಲವು ಸೌಲಭ್ಯಗಳನ್ನು ಬ್ಯಾಂಕ್‌ ನೀಡಿದೆ.
ಪಿ.ಜಯರಾಮ್ ಭಟ್, ಕರ್ಣಾಟಕ ಬ್ಯಾಂಕ್ ಎಂಡಿ, ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.