ADVERTISEMENT

50 ಎಕರೆ ಪ್ರದೇಶಕ್ಕೆ ಆವರಿಸಿದ ಬೆಂಕಿ

ಉಪ್ಪಿನಂಗಡಿ: ಕೊಯಿಲ ಹುಲ್ಲುಗಾವಲು ಬೆಂಕಿಗೆ ಆಹುತಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 6:27 IST
Last Updated 3 ಜನವರಿ 2017, 6:27 IST

ಉಪ್ಪಿನಂಗಡಿ: ಕೊಯಿಲ ಪಶು ಸಂ ಗೋಪನಾ ಕ್ಷೇತ್ರ ವ್ಯಾಪ್ತಿಯ ಹುಲ್ಲುಗಾ ವಲಿನಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡು ಸುಮಾರು 50 ಎಕರೆ ಪ್ರದೇಶದಲ್ಲಿ ಹುಲ್ಲುಗಾವಲು ಬೆಂಕಿ ಹೊತ್ತಿಕೊಂಡು ಭಸ್ಮವಾಗಿರುವ ಘಟನೆ ನಡೆದಿದೆ.

ಕೊಯಿಲ ಗಂಡಿಬಾಗಿಲು ರಸ್ತೆ ಬದಿ ಯಲ್ಲಿ ಆನೆಗುಂಡಿ ಬಳಿಯಿಂದ ಹೊತ್ತಿ ಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವಿಸ್ತರಿಸಿ ಗುಡ್ಡವನ್ನು ಆವರಿಸಿಕೊಂಡು ಮುಂದೆ ಆನೆಗುಂಡಿ, ಕೊಯಿಲ ಗೇಟ್ ಬಳಿಯ ಗುಡ್ಡದ ತನಕ ಸುಮಾರು 50 ಎಕರೆಗೂ ಅಧಿಕ ಪ್ರದೇಶಕ್ಕೆ ವ್ಯಾಪಿಸಿ ಹುಲ್ಲುಗಾ ವಲು ಬೆಂಕಿಗೆ ಆಹುತಿಯಾಯಿತು.

ಕಿಡಿಗೇಡಿ ಕೃತ್ಯ:  ಪ್ರತಿ ವರ್ಷ ಇಲ್ಲಿ ಬೆಂಕಿ ಕಾಣಿಸಿಕೊಂಡು ಹುಲ್ಲುಗಾವಲು ಸುಟ್ಟು ಭಸ್ಮವಾಗುವುದು ಸಾಮಾನ್ಯ ವಾಗಿದೆ. ದಾರಿಯಲ್ಲಿ ಹೋಗುವವರು ಬೀಡಿ, ಸಿಗರೇಟು ಸೇದಿ ಮುಳಿಹುಲ್ಲು ಮೇಲೆ ಹಾಕಿ ಹೋಗುವುದು ಒಂದು ಕಾರಣವಾದರೆ, ಕೆಲವರು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಿಡಿ ಹಚ್ಚು ವುದು ನಡೆಯುತ್ತಿದೆ. ಇನ್ನು ಕೆಲವು ಮಕ್ಕಳು ಆಟವಾಡುತ್ತಾ ಬೆಂಕಿ ಕೊಡು ವುದೂ ಉಂಟು. ಈ ಎಲ್ಲ ರೀತಿಯ ಕೃತ್ಯಗಳಿಂದಾಗಿ ಹುಲ್ಲುಗಾವಲು ಬೆಂಕಿಗೆ ಆಹುತಿಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಹಾವು, ಮೊಲ ಸಜೀವ ದಹನ:  ಹುಲ್ಲುಗಾವಲಿನಲ್ಲಿ ಆಶ್ರಯ ಪಡೆದು ಕೊಂಡಿದ್ದ ಮೊಲ, ಹಾವು ಮೊದಲಾದ ಜೀವಿಗಳು ಬೆಂಕಿಗೆ ಸಿಲುಕಿ ಬೆಂದು ಹೋಗಿದ್ದು ಕಂಡು ಬಂದಿದೆ.

ಕೆಲ ವೊಂದು ಹಾವುಗಳು ಅರೆ ಬೆಂದ ಸ್ಥಿತಿ ಯಲ್ಲಿ ಜೀವ ರಕ್ಷಣೆ ಸಲುವಾಗಿ ಎಲ್ಲೆಡೆ ಓಡಿ ಹೋಗುತ್ತಿದ್ದವು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.ಹುಲ್ಲುಗಾವಲಿಗೆ ಬೆಂಕಿ ಬಿದ್ದಿದೆ ಎಂದು ಗೊತ್ತಾಗುತ್ತಲೇ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ವೆಂಕಪ್ಪ ಪೂಜಾರಿ, ರಿಕ್ಷಾ ಚಾಲಕರಾದ ಪುಟ್ಟ, ಯತೀಶ್, ಹರೀಶ್, ಪಶು ಸಂಗೋಪನಾ ಕ್ಷೇತ್ರದ ಕಾರ್ಮಿಕರು ಬೆಂಕಿ ನಂದಿಸುವಲ್ಲಿ ಯಶ ಸ್ವಿಯಾದರು. ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಾದ ರಮೇಶ್ ಕುಮಾರ್, ಧನಂಜಯ, ಹೊನ್ನಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.