ADVERTISEMENT

8ನೇ ಪರಿಚ್ಛೇದಕ್ಕೆ ತುಳು: ಪ್ರಧಾನಿ ಭರವಸೆ

ಒಡಿಯೂರು ತುಳುನಾಡ ಜಾತ್ರೆಯಲ್ಲಿ ತುಳುವೆರೆ ತುಳಿಪು

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 6:22 IST
Last Updated 2 ಜನವರಿ 2017, 6:22 IST

ವಿಟ್ಲ: ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಗಳಿಂದ ಭರವಸೆ ದೊರೆತಿರುವುದರಿಂದ ಆ ನಿಟ್ಟಿನಲ್ಲಿ ವಿಶ್ವಾಸ ಮೂಡುತ್ತಿದೆ. ತುಳುವೆರೆ ತುಳಿಪು ಎಂಬ ಕಾರ್ಯ ಕ್ರಮದಲ್ಲಿ ತುಳುನಾಡ ಜಾತ್ರೆ ಈ ಬಾರಿ ನಡೆಯಲಿದ್ದು, ಇದರಲ್ಲಿ ಯುವ ಸಮು ದಾಯಕ್ಕೆ ಅವಕಾಶ ನೀಡುವ ಯೋಚನೆ ಯನ್ನು ಹಾಕಿಕೊಳ್ಳಲಾಗಿದೆ.

ಸ್ವಾರ್ಥಕ್ಕಾಗಿ ನೆಲ ಜಲವನ್ನು ಬರಡಾಗಿಸುವ ಪ್ರಯತ್ನ ನಮ್ಮಿಂದ ನಡೆಯುತ್ತಿವುದನ್ನು ತಡೆ ಯುವ ಕಾರ್ಯವಾಗಬೇಕು ಎಂದು ಒಡಿ ಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಶನಿವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ 2017ರ ಫೆಬ್ರವರಿ 5 ಮತ್ತು 6ರಂದು ನಡೆಯುವ ಒಡಿಯೂರು ರಥೋತ್ಸವ-ತುಳುನಾಡ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದರು.

ಜೀವನ ರಥವನ್ನು ವ್ಯಕ್ತಿಯೇ ಎಳೆಯಬೇಕಾಗಿದ್ದು, ಜೀವನ ಎಂಬ ಯಾತ್ರೆ ಹುಟ್ಟಿನಿಂದ ಆರಂಭವಾಗುತ್ತದೆ. ಜೀವನ ಯಾತ್ರೆ ಉತ್ತಮವಾಗಬೇಕೆಂಬ ನಿಟ್ಟಿನಲ್ಲಿ ದೇವರ ರಥಯಾತ್ರೆ ನಡೆ ಯುತ್ತದೆ. ನೆಲ ಜಲ ಸಂರಕ್ಷಣೆಯಾದರೆ ನಮ್ಮ ತುಳುನಾಡು ಉಳಿಯುತ್ತದೆ. ಸಂಸ್ಕೃತಿ - ಭಾಷೆಯನ್ನು ಉಳಿಸಿ ಬೆಳೆಸು ನಿಟ್ಟಿನಲ್ಲಿ ತುಳುನಾಡ ಜಾತ್ರೆ ನಡೆ ಯುತ್ತದೆ ಎಂದರು.

ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಮಂಗಳೂರು  ಗುರುದೇವ ಸೇವಾ ಬಳಗದ ಜಯಂತ್ ಜೆ. ಕೋಟ್ಯಾನ್, ಒಡಿಯೂರು ವಿವಿ ಧೋದ್ದೇಶ ಸಹಕಾರಿ ನಿಯಮಿತದ ಅಧ್ಯಕ್ಷ ಸುರೇಶ್ ರೈ, ನಿರ್ದೇಶಕರಾದ ಎಚ್ ಕೆ ಪುರುಷೋತ್ತಮ, ಉಗ್ಗಪ್ಪ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸಾಯೀಶ್ವರಿ ದಿನೇಶ್ ಶೆಟ್ಟಿ ಪ್ರಾರ್ಥನೆ ನಡೆಸಿದರು. ಸಂತೋಷ್ ಕುಮಾರ್ ಸ್ವಾಗತಿಸಿದರು. ಒಡಿಯೂರು ಗುರು ದೇವ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ ಪ್ರಸ್ತಾವನೆಗೈದರು. ಮೇಲ್ವಿಚಾ ರಕ ಸದಾಶಿವ ಅಳಿಕೆ ವಂದಿಸಿ, ಗ್ರಾಮ ಸಂಯೋಜಕಿ ಲೀಲಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.