ADVERTISEMENT

₹9.60 ಕೋಟಿ ಮಂಜೂರು, ಶೀಘ್ರ ಅನುಷ್ಠಾನ

ಉದನೆಯಲ್ಲಿ ಗುಂಡ್ಯ ಹೊಳೆಗೆ ಸೇತುವೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:45 IST
Last Updated 19 ಜನವರಿ 2017, 5:45 IST
₹9.60 ಕೋಟಿ ಮಂಜೂರು, ಶೀಘ್ರ ಅನುಷ್ಠಾನ
₹9.60 ಕೋಟಿ ಮಂಜೂರು, ಶೀಘ್ರ ಅನುಷ್ಠಾನ   

ಉಪ್ಪಿನಂಗಡಿ:  ‘ಶಿರಾಡಿ, ಕೊಣಾಜೆ ಗ್ರಾಮದ ಜನರ ಬಹು ಕಾಲದ ಬೇಡಿಕೆ ಯಾಗಿದ್ದ ಗುಂಡ್ಯ ಹೊಳೆಗೆ ಉದನೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಯೋಜನೆಯಡಿ ₹ 9.60 ಕೋಟಿ ರೂಪಾಯಿ ಅನುದಾನ ಮಂಜೂರು ಗೊಂಡಿದೆ. ಇದರ ಅನುಷ್ಠಾನಕ್ಕೆ ಇಂದಿ ನಿಂದಲೇ ಕಾರ್ಯ ಪ್ರವೃತ್ತರಾಗುತ್ತೇವೆ’ ಎಂದು ಕಡಬ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ. ವರ್ಗೀಸ್ ತಿಳಿಸಿದ್ದಾರೆ.

ಸೇತುವೆ ಅನುಷ್ಠಾನ ಕುರಿತಂತೆ ಉದನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿ ಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರುಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದರಲ್ಲಿ ಸಚಿವ ಬಿ. ರಮಾ ನಾಥ ರೈಯವರ ಶಿಫಾರಸ್ಸಿನ ಮೇರೆಗೆ ಕೊಣಾಜೆ ಗ್ರಾಮದ ಉದನೆ- ಪುತ್ತಿಗೆ- ಕಲ್ಲುಗುಡ್ಡೆ ರಸ್ತೆಗೆ ಉದನೆ ಎಂಬಲ್ಲಿ ಗುಂಡ್ಯ ಹೊಳೆಗೆ ₹ 9.60 ಕೋಟಿ ವೆಚ್ಚ ದಲ್ಲಿ ಸೇತುವೆ ನಿರ್ಮಾಣವೂ ಸೇರಿದೆ.

ಇಲ್ಲಿನ ಜನರ ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್, ಲೋಕೋಪ ಯೋಗಿ ಸಚಿವ ಮಹಾದೇವಪ್ಪ ಸೇರಿ ದಂತೆ ಅನುದಾನ ಬಿಡುಗಡೆಗೆ ಸಹಕರಿ ಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಶೀಘ್ರ ಅನುಷ್ಠಾನಕ್ಕೆ ಪ್ರಯತ್ನ:  ‘ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆದು ಶೀಘ್ರ ಅನುಷ್ಠಾನಗೊಳಿಸುವ ಸಂಬಂಧ ಇಂದಿನಿಂದಲೇ ಕಾರ್ಯಪ್ರವೃತ್ತರಾಗು ತ್ತೇವೆ. ಮುಂದಿನ 1 ವರ್ಷದ ಅವಧಿ ಯೊಳಗೆ ಸೇತುವೆ ಪೂರ್ಣಗೊಳ್ಳುವ ಸಂಬಂಧ ಎಲ್ಲ ರೀತಿಯಲ್ಲೂ ಪ್ರಯತ್ನಿಸು ವುದಾಗಿ ಹೇಳಿದ ಪಿ.ಪಿ. ವರ್ಗೀಸ್ ಅವರು, ಉದನೆಯಲ್ಲಿ ಸೇತುವೆ ನಿರ್ಮಾ ಣಗೊಂಡಲ್ಲಿ ತಾಲ್ಲೂಕು ಕೇಂದ್ರವಾಗ ಲಿರುವ ಕಡಬ ಸಂಪರ್ಕಿಸಲು ಶಿರಾಡಿ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.

ಉದನೆ- ಶಿಬಾಜೆ ರಸ್ತೆ ಡಾಂಬರೀಕ ರಣಕ್ಕೆ ₹ 80 ಲಕ್ಷ ರೂಪಾಯಿ ಬಿಡುಗ ಡೆಗೊಂಡಿದ್ದು ಟೆಂಡರ್ ಪ್ರಕ್ರಿಯೆ ಪ್ರಗತಿ ಯಲ್ಲಿದೆ. ಮತ್ತೆ ₹ 2.75 ಕೋಟಿಗೆ ಪ್ರಸ್ತಾ ವನೆ ಸಲ್ಲಿಸಿದ್ದು ಇದಕ್ಕೂ ಮಂಜೂರಾತಿ ಸಿಗುವ ನಿರೀಕ್ಷೆ ಇದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋ ತ್ತಮ ಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಆಶಾ ಲಕ್ಷ್ಮಣ್, ಕೆ.ಟಿ.ವ ಲ್ಸಮ್ಮ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ರೈ ಕರ್ಮಾಯಿ, ಪ್ರಧಾನ ಕಾರ್ಯದರ್ಶಿ ಡೇನಿಸ್ ಫರ್ನಾಂಡಿಸ್, ಕೆ.ಪಿ.ಥೋಮಸ್, ಸೆಬಾಸ್ಟಿಯನ್, ಎಸ್.ಎ. ದಿವಾಕರ ಗೌಡ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT