ADVERTISEMENT

ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 23 ಮೇ 2017, 6:12 IST
Last Updated 23 ಮೇ 2017, 6:12 IST

ಹೊನ್ನಾಳಿ: ರೈತರ ಕಷ್ಟ–ನಷ್ಟಗಳಿಗೆ ಮಳೆಯೇ ಶಾಶ್ವತ ಪರಿಹಾರ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟರು. ತಾಲ್ಲೂಕಿನಲ್ಲಿ ಆತ್ಮಹತ್ಯೆಗೆ ಶರಣಾದ  ರೈತರಾದ ದೊಡ್ಡೆತ್ತಿನಹಳ್ಳಿ ರುದ್ರಪ್ಪ, ಕೊಡಚಗೊಂಡನಹಳ್ಳಿಯ ಮಂಜಪ್ಪ, ಕೋಟೆಮಲ್ಲೂರಿನ ತೀರ್ಥಲಿಂಗೇಶ್ವರ ಗೌಡ ಹಾಗೂ ನರಸಗೊಂಡನಹಳ್ಳಿ ಸುಜಾತಾ ಅವರ  ಕುಟುಂಬಗಳಿಗೆ  ಸೋಮವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಲಾ ₹ 5 ಲಕ್ಷ ಪರಿಹಾರದ ಚೆಕ್‌ಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರದ ಪರಿಹಾರದ ಜತೆಗೆ ₹ 2,000 ವಿಧವಾ ವೇತನ, ಆರೋಗ್ಯ ರಕ್ಷಾ ಯೋಜನೆ, ಮೃತರ ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯಗಳನ್ನು ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಎಲ್ಲಾ ರೈತರಿಗೂ ಅವಶ್ಯ ವಿರುವ ಬಿತ್ತನೆ ಬೀಜ, ಗೊಬ್ಬರವನ್ನು ಸಮರ್ಪಕವಾಗಿ ವಿತರಿಸುವಂತೆ ಸಹಾಯಕ ಕೃಷಿ ನಿರ್ದೇಶಕ ಡಾ. ರೇವಣಸಿದ್ದನಗೌಡ ಅವರಿಗೆ ಸೂಚಿಸಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ಜಿ.ವಿಶ್ವನಾಥ್ ಮಾತನಾಡಿ, ‘ತಾಲ್ಲೂಕಿನ ನೋಂದಾಯಿಸಿದ 8,400 ರೈತರಿಗೆ  ₹ 8.46 ಕೋಟಿ ಬೆಳೆವಿಮೆ ಬಿಡುಗಡೆಯಾಗಿದೆ. ವಿಮೆ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ’ ಎಂದು ತಿಳಿಸಿದರು.

ತಹಶೀಲ್ದಾರ್ ಎನ್.ಜೆ.ನಾಗರಾಜ್, ಸಹಾಯಕ ಕೃಷಿ ನಿರ್ದೇಶಕ ಡಾ.ರೇವಣಸಿದ್ದನಗೌಡ, ಪಿಎಸ್ಐ ಕಾಡದೇವರ ಮಠ, ನ್ಯಾಮತಿ ಪಿಎಸ್ಐ ತಿಪ್ಪೇಸ್ವಾಮಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.