ADVERTISEMENT

ಜನರ ಮುಂದೆ ಸವಾಲ್‌ಗೆ ಸಿದ್ಧ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 7:34 IST
Last Updated 21 ಸೆಪ್ಟೆಂಬರ್ 2017, 7:34 IST

ಹರಪನಹಳ್ಳಿ: ಮಠಾಧೀಶರು, ಸಾಹಿತಿಗಳು, ಪ್ರಗತಿಪರ ಸಂಘಟನೆಗಳ ಮುಖಂಡರು ಮಾಧ್ಯಮದವರು ಒಳಗೊಂಡಂತೆ ಜನತಾ ನ್ಯಾಯಾಲಯ ವೇದಿಕೆ ನಿರ್ಮಿಸಿದಲ್ಲಿ ಕಾಂಗ್ರೆಸ್‌ ಪಕ್ಷದ ಬಹಿರಂಗ ಸವಾಲ್‌ಗೆ ಉತ್ತರ ನೀಡುವುದಾಗಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಲಕ್ಷ್ಮಣ್‌ ಹೇಳಿದರು. ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷ ಆಹ್ವಾನಿಸಿದ ತಕ್ಷಣ ಚರ್ಚೆಗೆ ಹೋಗುವ ಅವಶ್ಯಕತೆ ಇಲ್ಲ ಎಂದರು.

ಬಿಜೆಪಿ ಅವಧಿಯಲ್ಲಿ ತಾಲ್ಲೂಕಿಗೆ ಬಂದಿರುವ ಒಟ್ಟು ಅನುದಾನ ₹1,707 ಕೋಟಿ. 240 ಕಿ.ಮೀ ರಸ್ತೆ, ವಾಜಪೇಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮೊರಾರ್ಜಿ ವಸತಿ ಶಾಲೆ, ಪಾಲಿಟೆಕ್ನಿಕ್‌ ಮತ್ತು ಐಟಿಐ ಕಾಲೇಜು, ಅಂಬೇಡ್ಕರ್‌ ಮತ್ತು ವಾಜಪೇಯಿ ಭವನ, ಬಂಜಾರ್‌ ಭವನ, ನಿರಂತರ ಜ್ಯೋತಿ, ಆಸರೆ, ಬಸವ ವಸತಿ ಒಳಗೊಂಡಂತೆ 12,500 ಮನೆ ನೀಡಿದ್ದೇವೆ. ಮಾಜಿ ಸಚಿವ ಕರುಣಾಕರ ರೆಡ್ಡಿ ಅವರನ್ನು ಅನಗತ್ಯವಾಗಿ ಹಿಯಾಳಿಸುವುದನ್ನು ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ ಎಂದರು.

ಪುರಸಭೆ ಅಧ್ಯಕ್ಷ ಎಚ್‌.ಕೆ.ಹಾಲೇಶ್‌ ಮಾತನಾಡಿ, ‘ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ವಕೀಲ ವೆಂಕಟೇಶ್‌, ಕೋಡಿಹಳ್ಳಿ ಭೀಮಪ್ಪ, ಚನ್ನಬಸಪ್ಪ ಅವರಿಗೆ ಬಿಜೆಪಿಯನ್ನು ಟೀಕಿಸುವ ಹಕ್ಕಿಲ್ಲ. ಕರುಣಾಕರ ರೆಡ್ಡಿ ಅವರಿಗೆ ಬೃಹತ್‌ ಸಂಖ್ಯೆಯಲ್ಲಿ ಬೆಂಬಲ ಸೂಚಿಸಿ ವಿವಿಧ ಸಮುದಾಯಗಳು ಸ್ವಯಂಪ್ರೇರಿತರಾಗಿ ಬಳ್ಳಾರಿಗೆ ಹೋಗಿ ಬಂದಿದ್ದನ್ನು ಅರಗಿಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಟೀಕಿಸಿದರು.

ADVERTISEMENT

ಎಂ.ಪಿ.ನಾಯ್ಕ, ಕಣಿವೆಹಳ್ಳಿ ಮಂಜುನಾಥ್‌ ಮಾತನಾಡಿದರು. ಸಣ್ಣ ಹಾಲಪ್ಪ.ಆರ್‌.ಲೋಕೇಶ್‌ ಮಾತನಾಡಿದರು. ಬಾಗಳಿ ಕೊಟ್ರೇಶಪ್ಪ, ಬಿ.ರೇವಣ್ಣ,ಸತ್ಯನಾರಾಯಣ, ಕೆ.ಮಲ್ಲಿಕಾರ್ಜುನ. ಕೊಟ್ರಬಸಪ್ಪ, ರಾಘವೇಂದ್ರ ಶೆಟ್ಟಿ, ಸಂತೋಷ್‌ ಅವರೂ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.