ADVERTISEMENT

ದಾವಣಗೆರೆ: ಎನ್.ಎಂ.ಜೆ.ಬಿ. ಆರಾಧ್ಯ ನಿಧನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 4:09 IST
Last Updated 30 ನವೆಂಬರ್ 2017, 4:09 IST
ಎನ್.ಎಂ.ಜೆ.ಬಿ. ಆರಾಧ್ಯ
ಎನ್.ಎಂ.ಜೆ.ಬಿ. ಆರಾಧ್ಯ   

ದಾವಣಗೆರೆ: ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎಂ.ಜೆ.ಬಿ. ಆರಾಧ್ಯ (85) ಅವರು ಬುಧುವಾರ ರಾತ್ರಿ ನಿಧನರಾದರು.

ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಗುರುವಾರ ಮಧ್ಯಾಹ್ನ 3.30ಕ್ಕೆ ನಗರದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಆರಾಧ್ಯ ಅವರು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದರು.

ADVERTISEMENT

‘ಸಹಕಾರ ರಂಗದಲ್ಲಿ ಅಧಿಕಾರದ ಕುರ್ಚಿ ಮೇಲೆ ಕೂತವರು ಪ್ರತಿ ಕ್ಷಣವೂ ಆ ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕು. ಎಂತಹ ಸಂದರ್ಭದಲ್ಲೂ ಸ್ವಾರ್ಥಕ್ಕೆ ಅವಕಾಶ ನೀಡಬಾರದು. ಸಮಗ್ರ ದೃಷ್ಟಿಯ ಇಚ್ಛಾಶಕ್ತಿ ಇರಬೇಕು. ಸಹಕಾರ ಸಂಸ್ಥೆಯನ್ನು ಕಟ್ಟಿದಾಗ ಜನರು ಠೇವಣಿ ಇಡುವ ಮುನ್ನ ಯಾರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂಬುದನ್ನೂ ಗಮನಿಸುತ್ತಾರೆ. ನಂಬಿಕೆ ವಿಶ್ವಾಸದ ಮೇಲೆ ಎಲ್ಲ ಸಹಕಾರ ಸಂಸ್ಥೆಗಳ ಭವಿಷ್ಯ ನಿಂತಿರುತ್ತದೆ. ನಂಬಿಕೆಯೇ ಸಹಕಾರ ಕ್ಷೇತ್ರದ ಬುನಾದಿ. ಅದನ್ನು ಹಾಳು ಮಾಡಿದರೆ ಆ ಸಂಸ್ಥೆ ಅವಸಾನದತ್ತ ಸಾಗಿತೆಂದೇ ಅರ್ಥ’ ಎಂದು ನಂಬಿದ್ದವರು ಎನ್‌.ಎಂ.ಜೆ.ಬಿ.ಆರಾಧ್ಯ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.