ADVERTISEMENT

ದಾವಣಗೆರೆ ವಿ.ವಿ. ನೇಮಕಾತಿಗೆ ತಡೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 7:32 IST
Last Updated 21 ಸೆಪ್ಟೆಂಬರ್ 2017, 7:32 IST

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲ ಯದಲ್ಲಿ ಬೋಧಕ–ಬೋಧಕೇತರ ಹುದ್ದೆಗಳ ನೇಮಕಾತಿಗೆ ನಿಗದಿಪಡಿಸಿದ ಪರೀಕ್ಷೆಯನ್ನು ಸರ್ಕಾರ ತಡೆಹಿಡಿದಿದೆ.
ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಪರೀಕ್ಷೆಗೂ ಮೊದಲೇ ಸೋರಿಕೆ ಯಾಗಿರುವ ಕುರಿತು ಸರ್ಕಾರಕ್ಕೆ ದೂರುಗಳು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ನಿಗದಿಪಡಿಸಿದ ಲಿಖಿತ ಪರೀಕ್ಷೆಯನ್ನು ಕೂಡಲೇ ರದ್ದುಪಡಿಸುವಂತೆ ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಬುಧವಾರ ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವರಿಗೆ ಆದೇಶಿಸಿದ್ದಾರೆ.

ಸಚಿವ ಆಂಜನೇಯ ಹೇಳಿಕೆ: ಸಮಾಜ ಕಲ್ಯಾಣ ಸಚಿವ ಎಸ್‌.ಆಂಜನೇಯ ಹರಿಹರದ ಹನಗವಾಡಿ ಗ್ರಾಮದಲ್ಲಿ ಬುಧವಾರ ಪ್ರತಿಕ್ರಿಯಿಸಿ, ಹುದ್ದೆ ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿದೆ ಎಂದು ಹೇಳಿದರು.

ಮಾಧ್ಯಮಗಳ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲೇ ಉನ್ನತ ಶಿಕ್ಷಣ ಸಚಿವರಿಗೆ ಮೊಬೈಲ್‌ ಕರೆ ಮಾಡಿದ ಆಂಜನೇಯ ಅವರು, ಈ ಮಾಹಿತಿ ತಿಳಿಸಿದರು. ವಿಶ್ವವಿದ್ಯಾಲಯ ಕುಲಪತಿಗಳ ಅಧಿಕಾರಾವಧಿ ಸದ್ಯದಲ್ಲೇ ಮುಕ್ತಾಯ ವಾಗಲಿದೆ. ಈ ಹಂತದಲ್ಲಿ ನೇಮಕಾತಿಗೆ ಮುಂದಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.  ಈ ಹಿನ್ನೆಲೆಯಲ್ಲಿ  ಸರ್ಕಾರ  ನೇಮಕಾತಿಗೆ  ತಾತ್ಕಾಲಿಕ ತಡೆ  ನೀಡಿದೆ ಎಂದು ಹೇಳಿದರು.

ADVERTISEMENT

ಪರೀಕ್ಷೆಯನ್ನು  ತಡೆಹಿಡಿದಿರುವ ಬಗ್ಗೆ ದಾವಣಗೆರೆ ವಿಶ್ವವಿದ್ಯಾಲಯ ಕೂಡ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಿದೆ. ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಇದೇ 21 ಮತ್ತು 22ರಂದು ಪರೀಕ್ಷೆ ನಡೆಯಬೇಕಿತ್ತು.

ವಿದ್ಯಾರ್ಥಿಗಳ ಸಂಘಟನೆ ಪ್ರತಿಭಟನೆ: ‘ಕುಲಪತಿ ವಿ.ವಿ.ಕಲಿವಾಳ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಯುಜಿಸಿ ನಿಯಮದಂತೆ ಯಾವುದೇ ವಿ.ವಿಯ ಕುಲಪತಿ ತಮ್ಮ ಅಧಿಕಾರಾವಧಿಯ ಕೊನೆಯ 6 ತಿಂಗಳಲ್ಲಿ ನೇಮಕಾತಿ ನಡೆಸುವಂತಿಲ್ಲ. ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳವಂತಿಲ್ಲ. ಆದರೆ, ಕಲಿವಾಳ ಅವರ ಅವಧಿ ಕೇವಲ 3 ತಿಂಗಳು ಬಾಕಿ ಇದ್ದರೂ ತರಾತುರಿಯಲ್ಲಿ ನೇಮಕಾತಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಈಚೆಗೆ ಸ್ಟೂಡೆಂಟ್ಸ್ ಫೆಡರೇಷನ್ ಆಫ್‌ ಇಂಡಿಯಾದ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು.

ಸಮಯ, ಹಣ ಎರಡೂ ನಷ್ಟ: ಅಸಮಾಧಾನ: ‘ಪರೀಕ್ಷೆ ಬರೆಯಲು ಆಕಾಂಕ್ಷಿಗಳಾದ ನಾವು ರಾಜ್ಯದ ವಿವಿಧ ಭಾಗಗಳಿಂದ ದಾವಣಗೆರೆಗೆ ಬುಧವಾರವೇ ಬಂದಿದ್ದು, ಈಗ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಹಿಂತಿರುಗಬೇಕಾಗಿದೆ. ವಿಶ್ವವಿದ್ಯಾಲಯದ ಎಡವಟ್ಟಿನಿಂದಾಗಿ ನಮ್ಮ ಸಮಯ, ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.