ADVERTISEMENT

‘ಭೂ ಫಲವತ್ತತೆಗೆ ಹಸಿರೆಲೆ ಗೊಬ್ಬರ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 24 ಮೇ 2017, 5:03 IST
Last Updated 24 ಮೇ 2017, 5:03 IST

ಹರಿಹರ: ‘ಹಸಿರೆಲೆ ಗೊಬ್ಬರ ಹಾಗೂ ನೈಸರ್ಗಿಕ ವಿಧಾನಗಳಮೂಲಕ ಭೂಮಿಯ ಫಲವತ್ತತೆ ವೃದ್ಧಿಸಬಹುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗೋವರ್ಧನ ಹೇಳಿದ್ದಾರೆ. ತಾಲ್ಲೂಕಿನ ಶೇ 85ರಷ್ಟು ಕೃಷಿ ಭೂಮಿಯಲ್ಲಿ ಭತ್ತವನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ.

ಉತ್ತಮ ಇಳುವರಿ ಪಡೆಯಬೇಕೆಂಬ ಹಂಬಲದಿಂದ ರೈತರು ಜಮೀನಿಗೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಇದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹಸಿರೆಲೆ ಗೊಬ್ಬರ ಬೆಳೆಗಳಾದ ಡಯಾಂಚ, ಸೆಣಬು, ಅಲಸಂದೆ, ಹುರುಳಿ, ಗ್ಲಿರಿಸಿಡಿಯಾ, ಹೊಂಗೆಎಲೆಗಳು ಮಣ್ಣಿನ ಸಾರವನ್ನು ಹೆಚ್ಚಿಸುತ್ತವೆ. ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅಂಶಗಳು ಈ ಗೊಬ್ಬರದಿಂದ ಭೂಮಿಗೆ ಸೇರುತ್ತವೆ.  ಈ ಗಿಡಗಳ ಎಲೆ, ಕಾಂಡ ಹಸಿರಾಗಿರುವಾಗಲೇ ಮಣ್ಣಿಗೆ ಸೇರಿಸುವುದು ಅತ್ಯವಶ್ಯಕ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಭತ್ತ ಸೇರಿದಂತೆ ಯಾವುದೇ ಬೆಳೆ ಬೆಳೆಯುವುದಕ್ಕಿಂತ 40 ದಿನಗಳ ಮೊದಲು ಹಸಿರೆಲೆ ಬೆಳೆಯನ್ನು ಬೆಳೆಯಬೇಕು. ಅವುಗಳನ್ನು ಟ್ರ್ಯಾಕ್ಟರ್ ಬಳಸಿ ಭೂಮಿಯಲ್ಲಿ ಕೊಳೆಯುವಂತೆ ಮಾಡಿದರೆ ಭೂಮಿಯ ಫಲವತ್ತತೆ ಹೆಚ್ಚಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.