ADVERTISEMENT

‘ಮಂಡಕ್ಕಿ ಭಟ್ಟಿಗಳ ಸ್ಥಳಾಂತರಿಸಿ’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 4:40 IST
Last Updated 24 ಏಪ್ರಿಲ್ 2017, 4:40 IST

ದಾವಣಗೆರೆ: ನಗರದ ಹೊರಭಾಗದಲ್ಲಿ ಸೂಕ್ತ ಜಾಗ ಗುರುತಿಸಿ ಮಂಡಕ್ಕಿ ಹಾಗೂ ಅವಲಕ್ಕಿ ಭಟ್ಟಿಗಳನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸೂಚಿಸಿದರು.

ಮಂಡಕ್ಕಿ ಭಟ್ಟಿ ಬಡಾವಣೆಯ ಮಿಲಾದ್ ಮೈದಾನದಲ್ಲಿ ಶನಿವಾರ ಜಿಲ್ಲಾ ಮಂಡಕ್ಕಿ ಹಾಗೂ ಅವಲಕ್ಕಿ ಉತ್ಪಾದಕರ ಸಂಘ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಮಂಡಕ್ಕಿ ಹಾಗೂ ಅವಲಕ್ಕಿ ಭಟ್ಟಿ ಗಳನ್ನು ಆಧುನೀಕರಣಗೊಳಿಸುವ ಅವ ಶ್ಯಕತೆಯಿದೆ. ತಂತ್ರಜ್ಞಾನ ಅಳವಡಿಕೆಗೆ ₹ 25 ಕೋಟಿ ಮೀಸಲಿಡಲಾಗಿದೆ. ವಿದೇಶಿ ತಂತ್ರಜ್ಞಾನ ಅಳವಡಿಕೆಗೂ ಚಿಂತನೆ ನಡೆದಿದೆ. ಚೀನಾ, ಜರ್ಮನಿಯ ತಂತ್ರಜ್ಞರು ಪರಿಶೀಲನೆ ನಡೆಸಿದ್ದಾರೆ’ ಎಂದರು.

ADVERTISEMENT

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ದಾವಣಗೆರೆ ನಗರ ಮಂಡಕ್ಕಿ ಭಟ್ಟಿಗೆ ಹೆಸರುವಾಸಿ. ಈ ಉದ್ಯಮದಿಂದ ಪರಿಸರದ ಮೇಲೆ ಹಾನಿಯಾಗುತ್ತಿತ್ತು. ಭಟ್ಟಿಗಳ ಸ್ಥಳಾಂತರ ಹಾಗೂ ತಂತ್ರಜ್ಞಾನ ಅಳವಡಿಕೆಯಿಂದ ಸಮಸ್ಯೆ ನಿವಾರಣೆಯಾಗಲಿದೆ’ ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆ ಗಾರ ದಿನೇಶ್ ಅಮೀನ್‌ಮಟ್ಟು ಮಾತ ನಾಡಿ, ‘ಪಾಪ್‌ಕಾರ್ನ್ ಉದ್ಯಮದ ಹಾವಳಿಯಿಂದಾಗಿ ಪ್ರಸ್ತುತ ಮಂಡಕ್ಕಿ, ಅವಲಕ್ಕಿ ಉದ್ಯಮಕ್ಕೆ ಕುತ್ತು ಬಂದಿದೆ. ಹೊಸ ಮಾರ್ಗಗಳ ಮೂಲಕ ಉತ್ಪನ್ನ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ ಬೇಕಾದ ಅವಶ್ಯಕತೆ ಇದೆ’ ಎಂದರು.

ಕೆಪಿಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಜಿಲ್ಲಾ ಮಂಡಕ್ಕಿ ಮತ್ತು ಅವಲಕ್ಕಿ ಉತ್ಪಾದಕರ ಸಂಘದ ಅಧ್ಯಕ್ಷ ರಿಯಾಜ್ ಅಹಮದ್ ಸಾಬ್ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ತಂಜೀಮುಲ್ ಕಮಿಟಿ ಅಧ್ಯಕ್ಷ ಸಾದಿಕ್ ಪೈಲ್ವಾನ್, ಮೇಯರ್ ಅನಿತಾಬಾಯಿ ಮಾಲತೇಶ್, ದೂಡಾ ಅಧ್ಯಕ್ಷ ಜಿ.ಎಚ್.ರಾಮಚಂದ್ರಪ್ಪ, ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯರಾದ ಎ.ಬಿ.ರಹೀಂ, ದಿನೇಶ್ ಕೆ.ಶೆಟ್ಟಿ, ಜೆ.ಎನ್.ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.