ADVERTISEMENT

ಮರುಳಸಿದ್ದೇಶ್ವರ ಕಾರ್ತಿಕೋತ್ಸವ, ಸಹಸ್ರ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 6:18 IST
Last Updated 30 ನವೆಂಬರ್ 2017, 6:18 IST
ಮರುಳಸಿದ್ದೇಶ್ವರ ಕಾರ್ತಿಕೋತ್ಸವ ದಶಮನೋತ್ಸವ ಪ್ರಯುಕ್ತ ಸಹಸ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಕೆ.ಆರ್‌.ಜಯದೇವಪ್ಪ, ನಾಗರಾಜ್ ಹಂಪೋಳ್ ಇದ್ದರು
ಮರುಳಸಿದ್ದೇಶ್ವರ ಕಾರ್ತಿಕೋತ್ಸವ ದಶಮನೋತ್ಸವ ಪ್ರಯುಕ್ತ ಸಹಸ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಕೆ.ಆರ್‌.ಜಯದೇವಪ್ಪ, ನಾಗರಾಜ್ ಹಂಪೋಳ್ ಇದ್ದರು   

ದಾವಣಗೆರೆ: ‘ಬಿಡುವಿಲ್ಲದ ವ್ಯಾಪಾರ –ವಹಿವಾಟಿನ ನಡುವೆಯೂ ದಾವಣಗೆರೆ ಎಪಿಎಂಸಿಯ ವರ್ತಕರು ಕಾರ್ತಿಕೋತ್ಸವದಂಥ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಆವರಣದಲ್ಲಿ ಸೋಮವಾರ ರಾತ್ರಿ ವಿಶ್ವಬಂಧು ಮರುಳಸಿದ್ದೇಶ್ವರ ಕಾರ್ತಿಕೋತ್ಸವ ದಶಮಾನೋತ್ಸವ ಪ್ರಯುಕ್ತ ನಡೆದ ಸಹಸ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿವೃತ್ತ ಐಎಫ್ಎಸ್‌ ಅಧಿಕಾರಿ ನಾಗರಾಜ್‌ ಹಂಪೋಳ್‌ ಮಾತನಾಡಿ, ‘ಮರುಳಸಿದ್ಧರ ಸಂದೇಶ ಇಂದಿಗೂ ಪ್ರಸ್ತುತ. ಅಹಿಂಸೆ, ಪರಮತ ಸಹಿಷ್ಣುತೆ ಮೊದಲಾದ ಮಾನವೀಯ ಮೌಲ್ಯಗಳಿಗೆ ಒತ್ತುಕೊಟ್ಟವರು ಅವರು’ ಎಂದು ಹೇಳಿದರು.

ADVERTISEMENT

ಶ್ರೀಮದ್‌ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್‌.ಜಯದೇವಪ್ಪ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ರಾಮಗೊಂಡನಹಳ್ಳಿ ಜಯಣ್ಣ, ವರ್ತಕರಾದ ಮೆಳ್ಳೆಕಟ್ಟೆ ಸಿದ್ದೇಶ್‌, ಬೇತೂರು ರಾಜಣ್ಣ, ವೈ.ವಸಂತಪ್ಪ, ಸಿರಿಗೆರೆ ಸಿದ್ದೇಶ್‌, ಬುಳ್ಳಾಪುರದ ಸಿದ್ದೇಶ್‌, ಕಾಕನೂರು ಪ್ರಭುದೇವ, ಕೊರಟಗೆರೆ ಶಿವಕುಮಾರ್‌, ಶಿವನಹಳ್ಳಿ ರೇವಣಸಿದ್ಧಪ್ಪ, ಎ.ಸಿ.ಶಿವಮೂರ್ತಿ, ದೇವರಮನಿ ಶಿವಕುಮಾರ್ ಇದ್ದರು.

ಕೋಶಾಧ್ಯಕ್ಷ ಕರೇಶಿವಪ್ಳ ಸಿದ್ದೇಶ್‌ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಕಟ್ಟೆ ಪ್ರಕಾಶ್ ವಂದಿಸಿದರು. ಕಾರ್ತಿಕ ಸಮಿತಿ ನಿರ್ದೇಶಕ ಸಿ.ಜಿ.ಜಗದೀಶ ಕೂಲಂಬಿ ಕಾರ್ಯಕ್ರಮ ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.