ADVERTISEMENT

‘ಮಾದಿಗರು ಮುಖ್ಯವಾಹಿನಿಗೆ ಬರಲಿ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 6:02 IST
Last Updated 9 ನವೆಂಬರ್ 2017, 6:02 IST

ಹೊನ್ನಾಳಿ: ಮಾದಿಗ ಸಮಾಜದದವರು ಸಮಾಜದ ಮುಖ್ಯವಾಹಿನಿಗೆ ಬರಲು ಸಮಾಜದ ಮುಖಂಡರು, ನೌಕರ ಬಂಧುಗಳು ನೆರವು ನೀಡಬೇಕು ಎಂದು ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಆದಿ ಜಾಂಬವ ಮಹಾಸಂಸ್ಥಾನದ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ ಕೋರಿದರು.

ಬುಧವಾರ ತಾಲ್ಲೂಕು ಮಾದಿಗರ ಹಿತರಕ್ಷಣಾ ವೇದಿಕೆವತಿಯಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಶಿಬಿರ, ಪ್ರತಿಭಾ ಪುರಸ್ಕಾರ ಹಾಗೂ ಮಾದಿಗ ಸಮಾಜದ ಚುನಾಯಿತ ಪ್ರತಿನಿಧಿಗಳಿಗೆ ನಡೆದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಾದಿಗ ಎಂದರೆ ಮಾತಂಗ, ಮಾದಾರ ಎನ್ನುವ ಹೆಸರುಗಳಿವೆ. ಈ ಹೆಸರುಗಳನ್ನು ಹೆಚ್ಚು ಬಳಕೆ ಮಾಡಿ. ಯಾರು ಸಮಾಜದ ಹಿತವನ್ನು ಬಯಸುತ್ತಾರೊ ಅವರು ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ. ಸಮಾಜದ ಚಿಂತನೆ ಮಾಡುವವರು ಸಮಾಜದ ಆಸ್ತಿಯಾಗುತ್ತಾರೆ. ಪ್ರಸ್ತುತ ತಾರತಮ್ಯ, ಸಂಘರ್ಷ ಹೆಚ್ಚುತ್ತಿದೆ. ಅದಕ್ಕೆ ಹೋರಾಟ ಅನಿವಾರ್ಯ ಎಂದು ಹೇಳಿದರು.

ADVERTISEMENT

ಪ್ರತಿಭೆ ಪಲಾಯನ ಸಲ್ಲದು: ಪ್ರತಿಭೆಗಳು ಸ್ವಾರ್ಥಕ್ಕೆ, ಹಣದಾಸೆಗೆ ವಿದೇಶಕ್ಕೆ ಪಲಾಯನ ಮಾಡುತ್ತಿವೆ. ಇದು ಸರಿಯಲ್ಲ. ಪ್ರತಿಭೆಯನ್ನು ದೇಶದ ಉದ್ಧಾರಕ್ಕೆ ಬಳಸಿ ಎಂದು ಕರೆ ನೀಡಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಮಾಡಲಾಯಿತು. ಅಧ್ಯಕ್ಷತೆಯನ್ನು ಸೊರಟೂರು ಹನುಮಂತಪ್ಪ ವಹಿಸಿದ್ದರು.

ತಾಲ್ಲೂಕು ಪಂಚಾಯ್ತಿ ಸದಸ್ಯೆ ದಾಕ್ಷಾಯಣಮ್ಮ ನಾಗರಾಜಪ್ಪ, ದಿಡಗೂರು ತಮ್ಮಣ್ಣ, ರುದ್ರೇಶ್, ಬೆನಕನಹಳ್ಳಿ ಪರಮೇಶ್, ಭ್ರಷ್ಟಾಚಾರ ವಿರೋಧಿ ವೇದಿಕೆಯ ರಾಜ್ಯಾಧ್ಯಕ್ಷ ಗುರುಪಾದಯ್ಯ ಮಠದ್, ರಾಜು ಕಡಗಣ್ಣಾರ್, ಎಂ. ವಾಸಪ್ಪ, ವಿಜೇಂದ್ರ ಮಹೇಂದ್ರಕರ್, ಪಿಎಸ್ಐ ಕಾಡದೇವರಮಠ, ಬೆಸ್ಕಾಂ ಎಇಇ ಜಯಣ್ಣ, ಮಂಜಪ್ಪ ಮಾರಿಕೊಪ್ಪ, ವಕೀಲರಾದ ಗುಡ್ಡಪ್ಪ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.