ADVERTISEMENT

ರಾಗಿ ಬೆಳೆ ಕೊಯ್ಲು: ಕೂಲಿಕಾರರಿಗಾಗಿ ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 6:12 IST
Last Updated 11 ನವೆಂಬರ್ 2017, 6:12 IST
ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಸಮೀಪದ ಜಂಗಮ ತುಂಬಿಗೆರೆ ಬಳಿ ಹೊಲವೊಂದರಲ್ಲಿ ಕೊಯ್ಲಿಗೆ ಸಿದ್ದವಾಗಿರುವ ರಾಗಿ ಹೊಲ
ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಸಮೀಪದ ಜಂಗಮ ತುಂಬಿಗೆರೆ ಬಳಿ ಹೊಲವೊಂದರಲ್ಲಿ ಕೊಯ್ಲಿಗೆ ಸಿದ್ದವಾಗಿರುವ ರಾಗಿ ಹೊಲ   

ಉಚ್ಚಂಗಿದುರ್ಗ: ಹರಪನಹಳ್ಳಿ ತಾಲ್ಲೂಕಿನ ಅರಸಿಕೆರೆ, ಚಟ್ನಿಹಳ್ಳಿ, ಕುರೆಮಾಗನಹಳ್ಳಿ, ಕರಡಿದುರ್ಗ, ನಂದಿಕಂಬ, ಬೇವಿನಹಳ್ಳಿ, ಜಂಗಮ ತುಂಬಿಗೆರೆ, ಮೇಗಳಗೆರೆ, ನಾಗತಿಕಟ್ಟೆ, ವೊಡ್ಡಿನಹಳ್ಳಿ ಇತರೆ ಗ್ರಾಮಗಳಲ್ಲಿ ರಾಗಿ ಬೆಳೆ ಕೊಯ್ಲಿಗೆ ಬಂದಿದೆ.

ಕೊಯ್ದು ಗೂಡು ಹಾಕಲು ರೈತರಿಗೆ ಕೂಲಿಕಾರರು ಸಿಗದೇ ರೈತರು ಕಂಗಾಲಾಗಿದ್ದಾರೆ. ಮಳೆರಾಯನ ಕಣ್ಣಾಮುಚ್ಚಾಲೆ ನಡುವೆ ರೈತರು ರಾಗಿ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದು, ಸೈನಿಕ ಹುಳು ಹಾವಳಿಯಿಂದ ತತ್ತರಿಸಿದ್ದರು. ನಿರಂತರ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಈ ಭಾಗದ ರೈತರಿಗೆ ಕೂಲಿ ನೀಡಲು ಪರಿತಪಿಸುವಂತಾಗಿದೆ.

ಕೂಲಿಕಾರರಿಗೆ ಹೆಚ್ಚಿದ ಡಿಮ್ಯಾಂಡ್: ಕೊಯ್ಲಿಗೆ ಬಂದಿರುವ ರಾಗಿ ಬೆಳೆಯನ್ನು ದುಂಡು ಹಾಕಲು, ಕೂಲಿಕಾರರು ಗುತ್ತಿಗೆ ಆಧಾರದ ಮೇಲೆ ಪ್ರತಿ ಎಕರೆಗೆ ₹ 5000 ದಿಂದ 7000ದವರೆಗೆ ಬೇಡಿಕೆ ಇದೆ.

ADVERTISEMENT

ಕಳೆದ ವರ್ಷ ₹ 1000 ದಿಂದ 2000‌ಗಳಷ್ಟಿದ್ದ ಗುತ್ತಿಗೆ ಕೂಲಿ ಏಕಾಏಕಿ ಡಿಮ್ಯಾಂಡ್ ನಡೆಯುತ್ತಿದೆ. ₹ 200 ರೂಪಾಯಿಗಳಂತೆ ದಿನದ ಕೂಲಿಗೆ ಸಿಗುತ್ತಿದ್ದ ಕಾರ್ಮಿಕರು ₹ 400 ಕೂಲಿ ಪಡೆಯುತ್ತಿದ್ದಾರೆ. ಪ್ರಾಕೃತಿಕ ವೈಪರಿತ್ಯತೆಯಿಂದ ನಿರಾಳರಾಗಿದ್ದ ರೈತರಿಗೆ ಕೂಲಿಕಾರರು ನುಂಗಲಾರದ ತುತ್ತಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.