ADVERTISEMENT

ರೈತ ಪರ ಅಭ್ಯರ್ಥಿಗಳಿಗೆ ಬೆಂಬಲ: ರಾಜ್ಯ ರೈತ ಸಂಘ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 5:15 IST
Last Updated 3 ಫೆಬ್ರುವರಿ 2017, 5:15 IST
ರೈತ ಪರ ಅಭ್ಯರ್ಥಿಗಳಿಗೆ ಬೆಂಬಲ: ರಾಜ್ಯ ರೈತ ಸಂಘ
ರೈತ ಪರ ಅಭ್ಯರ್ಥಿಗಳಿಗೆ ಬೆಂಬಲ: ರಾಜ್ಯ ರೈತ ಸಂಘ   

ದಾವಣಗೆರೆ: ರೈತರ ಪರ ಕಾಳಜಿ ತೋರಿಸುವ ಹಾಗೂ ಹೋರಾಟ ಮಾಡುವ ಅಭ್ಯರ್ಥಿಗಳನ್ನು ಮಾತ್ರ ಬೆಂಬಲಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ತೀರ್ಮಾನಿಸಿತು.

ನಗರದ ಶಿವಯೋಗಿ ಮಂದಿರದ ಆವರಣದಲ್ಲಿ ಸೋಮವಾರ ಎಪಿಎಂಸಿ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಒಕ್ಕೂಟ ಈ ನಿರ್ಣಯ ಕೈಗೊಂಡಿತು.
ಎಪಿಎಂಸಿ ಚುನಾವಣೆಯಲ್ಲಿ ಅಭ್ಯರ್ಥಿಗೆ ಯಾವುದೇ ಪಕ್ಷದ ಚಿನ್ಹೆ ಇರುವುದಿಲ್ಲ. ಎಲ್ಲರೂ ಸ್ವತಂತ್ರ ಅಭ್ಯರ್ಥಿಗಳು. ರೈತ ಮತ್ತು ರೈತನ ಬೆಳೆಗಳ ಬಗ್ಗೆ ಮಾಹಿತಿ ಇರುವ ಹಾಗೂ ಮಾರುಕಟ್ಟೆಗೆ ಬೆಳೆ ತಂದಾಗ ವರ್ತಕರಿಗೂ ಮತ್ತು ರೈತರಿಗೂ ತಾರತಮ್ಯ ಮಾಡದಿರುವ ಅಭ್ಯರ್ಥಿಗಳನ್ನಷ್ಟೇ ಬೆಂಬಲಿಸಬೇಕು ಎಂದು ಸಭೆ ತೀರ್ಮಾನಿಸಿತು.

ಗುತ್ತಿಗೆದಾರರು, ರಿಯಲ್ ಎಸ್ಟೇಟ್‌ ಉದ್ಯಮಿಗಳು ಎಪಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇಂತಹವರ ಆಮಿಷಗಳಿಗೆ ರೈತರು ಒಳಗಾಗಬೇಕು. ರೈತರ ಪರ ಕಾಳಜಿ ಇರುವ ಅಭ್ಯರ್ಥಿಗಳಿಗಷ್ಟೇ ಮತ ನೀಡಬೇಕು ಎಂದು ಸಭೆ ಅಭಿಪ್ರಾಯ ವ್ಯಕ್ತಪಡಿಸಿತು. ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಮಹಾಮೈತ್ರಿ, ಸ್ವರಾಜ್ ಅಭಿಯಾನದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ವಾಸನ್ ಓಂಕಾರಪ್ಪ, ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾ ಗೌರವಾಧ್ಯಕ್ಷ ಚಿಕ್ಕನಹಳ್ಳಿ ರೇವಣಸಿದ್ದಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎನ್.ಹಳ್ಳಿ ಜಿ.ಪ್ರಭುಗೌಡ, ಮಹಾಮೈತ್ರಿಯ ರಾಜ್ಯ ಸದಸ್ಯ ಅನಿಷ್‌ಪಾಷ, ಸ್ವರಾಜ್ ಅಭಿಯಾನದ ಮೌಲಾನಾಯ್ಕ್, ತಾಲ್ಲೂಕು ಅಧ್ಯಕ್ಷ ಚಿನ್ನಸಮುದ್ರದ ಭೀಮಣ್ಣ, ಗೌರವಾಧ್ಯಕ್ಷ ಈಚಘಟ್ಟದ ರುದ್ರೇಶ್, ಕಾರ್ಯಾಧ್ಯಕ್ಷರಾದ ಕುಕ್ಕವಾಡದ ಬಸವರಾಜ್, ಮಾಯಕೊಂಡದ ಅಶೋಕ್, ನಾಗರಕಟ್ಟಿ ಜಯನಾಯ್ಕ್, ಅನುಗೋಡು ಭೀಮಣ್ಣ, ದೊಗ್ಗಳ್ಳಿ ಮಹೇಶ್, ಮುಕ್ತಳ್ಳಿ ಸಿದ್ದಪ್ಪ, ಕಡ್ಲಿಗುಂದಿ ಬಸಪ್ಪರೆಡ್ಡಿ ಬಲ್ಲೂರು ನಾಗರಾಜ್, ಅಣ್ಣಪ್ಪ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.