ADVERTISEMENT

ಸೇತುವೆ ಬಳಿ ರಸ್ತೆ ದುರಸ್ತಿಗೊಳಿಸಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 11:32 IST
Last Updated 14 ಸೆಪ್ಟೆಂಬರ್ 2017, 11:32 IST
ಹೊನ್ನಾಳಿ ತುಂಗಭದ್ರಾ ನದಿಯ ಹಳೆ ಸೇತುವೆಯ ರಸ್ತೆ ಹದಗೆಟ್ಟು ಉದ್ದ ಗುಂಡಿಯಲ್ಲಿ ನಿಂತಿರುವ ಮಳೆಯ ನೀರು.
ಹೊನ್ನಾಳಿ ತುಂಗಭದ್ರಾ ನದಿಯ ಹಳೆ ಸೇತುವೆಯ ರಸ್ತೆ ಹದಗೆಟ್ಟು ಉದ್ದ ಗುಂಡಿಯಲ್ಲಿ ನಿಂತಿರುವ ಮಳೆಯ ನೀರು.   

ಹೊನ್ನಾಳಿ ಪಟ್ಟಣ ಸಂಪರ್ಕಿಸುವ ತುಂಗಭದ್ರಾ ನದಿಗೆ ಹೊಸ ಸೇತುವೆ ನಿರ್ಮಾಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಇದು ಲೋಕಾರ್ಪಣೆಯಾದ ಮೇಲೆ ಹಳೆಯ ಸೇತುವೆ ಏಕಮುಖವಾಗಿದೆ. ವಾಹನಗಳು ಸಂಚರಿಸಲು ಹಳೆಯ ಸೇತುವೆ ಈಗಲೂ ಯೋಗ್ಯವಾಗಿದೆ. ಆದರೆ ಹಳೆ ಸೇತುವೆಗೆ ಬರುವ ಮತ್ತು ಹೋಗುವ ಎರಡೂ ಕಡೆ ರಸ್ತೆ ತೀರಾ ಹದಗೆಟ್ಟಿದೆ.

ಈ ರಸ್ತೆ ಗುಂಡಿಗಳಲ್ಲಿ ಇತ್ತೀಚಿಗೆ ಸುರಿದ ಮಳೆಯ ನೀರು ನಿಂತ ಪರಿಣಾಮ ವಾಹನ ಸವಾರರಿಗೆ ಇಲ್ಲಿ ಸಂಚರಿಸುವುದೇ ತಲೆನೋವಾಗಿದೆ. ಹೊಸ ಸೇತುವೆ ಸಣ್ಣಪುಟ್ಟ ಕಾಮಗಾರಿ ಪೂರೈಸುವುದರ ಜೊತೆಗೆ ಹಳೆ ಸೇತುವೆಯ ಎರಡೂ ಕಡೆ ಹದಗೆಟ್ಟುಹೋಗಿರುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ದುರಸ್ತಿ ಮಾಡಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT