ADVERTISEMENT

ಅಪ್ರಾಪ್ತ ವಯಸ್ಕರಿಂದ ವಾಹನ ಚಾಲನೆ: 40 ಪ್ರಕರಣ ದಾಖಲು

ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪೊಲೀಸರಿಂದ ದಿಢೀರ್ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 13:01 IST
Last Updated 3 ಜುಲೈ 2018, 13:01 IST
ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮಕ್ಕಳಿಗೆ ದಂಡ ವಿಧಿಸಿದ್ದಲ್ಲದೆ ಹೆತ್ತವರನ್ನು ಕರೆಸಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು
ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮಕ್ಕಳಿಗೆ ದಂಡ ವಿಧಿಸಿದ್ದಲ್ಲದೆ ಹೆತ್ತವರನ್ನು ಕರೆಸಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು   

ದಾವಣಗೆರೆ: ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದನ್ನು ತಡೆಯಲು ಮಂಗಳವಾರ ದಕ್ಷಿಣ ಸಂಚಾರ ಪೊಲೀಸರು ದಿಢೀರ್‌ ಕಾರ್ಯಾಚರಣೆ ಮಾಡಿದ್ದು, 40 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಟ್ಯೂಷನ್‌ಗೆ ಹೋಗುವ ಮಕ್ಕಳು ಒಳಗೊಂಡಂತೆ 18 ವರ್ಷದೊಳಗಿನವರು ವಾಹನ ಚಾಲನೆ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪಿಎಸ್ಐ ಶಿವರುದ್ರಪ್ಪ ಎಸ್‌. ಮೇಟಿ ನೇತೃತ್ವದಲ್ಲಿ ರೆಡ್ಡಿ ಬೀಲ್ಡಿಂಗ್ ಕ್ರಾಸ್, ಸರ್.ಎಂ.ವಿ. ಕಾಲೇಜ್ ಕ್ರಾಸ್, ವಿದ್ಯಾನಗರ ಕಾಫಿ ಡೇ ಕ್ರಾಸ್ ಹಾಗೂ ಪ್ರಮುಖ ಸ್ಥಳಗಳಲ್ಲಿ ವಾಹನ ತಪಾಸಣೆ ನಡೆಸಲಾಯಿತು.

ಅಪ್ರಾಪ್ತ ಮಕ್ಕಳಿಗೆ ದಂಡ ವಿಧಿಸಿದ್ದಲ್ಲದೆ ಹೆತ್ತವರನ್ನು ಕರೆಸಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮಕ್ಕಳು ವಾಹನ ಚಲಾಯಿಸಿದರೆ ಆಗುವ ಅನಾಹುತಗಳ ಬಗ್ಗೆ ಬುದ್ಧಿ ಮಾತು ಹೇಳಿ ಕಳುಹಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.