ADVERTISEMENT

ಏಕದಿನ ಕ್ರಿಕೆಟ್‌ ಬೆಟ್ಟಿಂಗ್‌: 11 ಬುಕ್ಕಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 6:18 IST
Last Updated 23 ಸೆಪ್ಟೆಂಬರ್ 2017, 6:18 IST

ಹುಬ್ಬಳ್ಳಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕ ದಿನ ಕ್ರಿಕೆಟ್‌ ಪಂದ್ಯದ ವೇಳೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದ 11 ಬುಕ್ಕಿಗಳನ್ನು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೂವರು ಪರಾರಿಯಾಗಿದ್ದಾರೆ.

ಹುಬ್ಬಳ್ಳಿಯ ರಾಮಕೃಷ್ಣ ಜಿತೂರಿ, ರಾಕೇಶ ಬಾಕಳೆ, ಮಹಾವೀರ ಮಾದರ, ಸಚಿನ್ ಬಸವಾ, ಮಂಜುನಾಥ ಜರತಾರಘರ, ನಾರಾಯಣ ಧೋಂಗಡಿ, ಧನರಾಜ ಲದವಾ, ರಾಜೇಸಾಬ್‌ ನರಗುಂದ, ವಿನಾಯಕ ಕಾಟವೆ, ಎಂಬುವವರನ್ನು ಧಾರವಾಡ ತಾಲ್ಲೂಕಿನ ಇಟ್ಟಿಗಟ್ಟಿ ಗ್ರಾಮದ ಹೊರವಲಯದಲ್ಲಿ ಬಂಧಿಸಲಾಗಿದೆ.ಪರಾರಿಯಾಗಿರುವ ಶಂಕರ ವಾಲ್ಮೀಕಿ ಉರುಫ್‌ ದೇವಗನ್‌, ವಿನೋದ ಮೈತ್ರಾಯಿಹಿ, ಗಣು ಮೆಹರವಾಡೆ ಎಂಬುವವರಿಗೆ ಶೋಧ ಮುಂದುವರಿಸಲಾಗಿದೆ.

ಅವರಿಂದ ₹ 85 ಸಾವಿರ ನಗದು, 27 ಮೊಬೈಲ್‌ ಫೋನ್‌ಗಳು, ಒಂದು ಕಮ್ಯುನಿಕೇಟರ್‌ ಹಾಗೂ ಅದಕ್ಕೆ ಅಳವಡಿಸಿದ 16 ಮೊಬೈಲ್‌, ಎರಡು ಲ್ಯಾಪ್‌ ಟಾಪ್ ಗಳು, ಇಂಟರ್ನೆಟ್‌ ಡೊಂಗಲ್‌, ಕ್ಯಾಲ್ಕುಲೇಟರ್‌ ಗಳನ್ನು ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ADVERTISEMENT

ಇನ್ನೊಂದು ಪ್ರಕರಣದಲ್ಲಿ ಕೇಶ್ವಾಪುರದ ಸುಂದರಪುರಂ ಲೇಔಟ್‌ನ ಸುಂದರ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಬೆಟ್ಟಿಂಗ್‌ ನಲ್ಲಿ ತೊಡಗಿದ್ದ ರಾಕೇಶ್‌ ಕಠಾರೆ ಹಾಗೂ ಮಂಜುನಾಥ ಕಠಾರೆ ಎಂಬ ಸಹೋದರರನ್ನು ಸಿಸಿಬಿ ಇನ್‌ ಸ್ಪೆಕ್ಟರ್‌ ಎಸ್‌.ಎಸ್‌. ಹಿರೇಮಠ ನೇತೃತ್ವದ ತಂಡ ಬಂಧಿಸಿದೆ. ಅವರಿಂದ ಅರು ಮೊಬೈಲ್‌, ಟಿ.ವಿ. ಹಾಗೂ ₹ 6010 ನಗದು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.