ADVERTISEMENT

ಕಾಂಗ್ರೆಸ್ಸಿನಿಂದ ಕೀಳು ರಾಜಕಾರಣ: ಟೀಕೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 9:16 IST
Last Updated 14 ಜುಲೈ 2017, 9:16 IST

ಉಪ್ಪಿನ ಬೆಟಗೇರಿ: ‘ಕೇಂದ್ರದಲ್ಲಿ ಈ ಹಿಂದೆ ಆರು ದಶಕಗಳ ಕಾಲ ದುರಾಡಳಿತ ನಡೆಸಿದ ಕಾಂಗ್ರೆಸ್‌, ಈಗ ರಾಜ್ಯದಲ್ಲಿಯೂ ಅದೇ ಆಡಳಿತ ಮುಂದುವರೆಸಿದೆ’ ಎಂದು ಸಂಸದ ಪ್ರಹ್ಲಾದ ಜೋಶಿ ಟೀಕಿಸಿದರು.

ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಚಾಲನೆ ನೀಡಿ, 2ಜಿ ಸ್ಪೆಕ್ಟ್ರ್‌ಂ, ಕಲ್ಲಿದ್ದಲು,  ಕಾಮನ್‌ವೆಲ್ತ್ ಗೇಮ್ ಸೇರಿದಂತೆ ಹಲವಾರು ಹಗರಣಗಳಲ್ಲಿ ಭಾಗಿಯಾಗಿ ದೇಶ ಲೂಟಿ ಹೊಡೆದರೇ ಹೊರತು ಬಡವರಿಗಾಗಿ ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಲಿಲ್ಲ ಎಂದರು.

ಕೇಂದ್ರ ಸರ್ಕಾರ ಜಾರಿಗೊಳಿಸಿದ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸದೇ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಅವರು  ಹೇಳಿದರು. 60 ವರ್ಷ ಆಡಳಿತದಲ್ಲಿ ಕೇವಲ ಏಳು ಕೋಟಿ ಕುಟುಂಬಗಳಿಗೆ ಮಾತ್ರ ಅಡುಗೆ ಅನಿಲ ಸಂಪರ್ಕ ನೀಡಿದ್ದರೆ, ಅಧಿಕಾರಕ್ಕೆ ಬಂದ ಮೂರೇ ವರ್ಷದಲ್ಲಿ ಏಳು ಕೋಟಿ ಜನರಿಗೆ ಅಡುಗೆ ಅನಿಲ ವಿತರಿಸಲಾಗಿದೆ ಎಂದು ಎಂದರು.

ADVERTISEMENT

ಮಾಜಿ ಶಾಸಕಿ ಸೀಮಾ ಮಸೂತಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಅಮೃತ ದೇಸಾಯಿ ಹಾಗೂ ತವನಪ್ಪ ಅಷ್ಟಗಿ ಮಾತನಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹಾವೀರ ಅಷ್ಟಗಿ, ಉಪಾಧ್ಯಕ್ಷೆ ರತ್ನವ್ವ ವಿಜಾಪೂರ, ಭಾರತಿ ಮುಗುದುಂ, ಪ್ರೇಮಾ ಕುಮಾರದೇಸಾಯಿ, ನಾಗರಾಜ ಗಾಣಿಗೇರ, ಸಾಹು ಧೀರಜಕುಮಾರ, ಅಶೋಕ ಮಸೂತಿ, ಬಸಪ್ಪ ಹೊಸೂರ, ಮಹೇಶ ಯಲಿಗಾರ, ವೀರಣ್ಣ ಪರಾಂಡೆ, ರತ್ನಾ ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.