ADVERTISEMENT

‘ಜಾತಿ ಆಧಾರದಲ್ಲಿ ಸಮಾಜ ಒಡೆಯುವ ಪ್ರಯತ್ನ’

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 7:20 IST
Last Updated 24 ಜುಲೈ 2017, 7:20 IST

ಹುಬ್ಬಳ್ಳಿ: ‘ಕೆಲವು ರಾಜಕೀಯ ಶಕ್ತಿಗಳು ಸಮಾಜವನ್ನು ಜಾತಿ ಆಧಾರದ ಮೇಲೆ ಒಡೆಯುವ ಪ್ರಯತ್ನ ಮಾಡುತ್ತಿವೆ’ ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಆರೋಪಿಸಿದರು.

ನಗರದ ರೈಲ್ವೆ ನಾರ್ಥ ಇನ್‌ಸ್ಟಿಟ್ಯೂಟ್‌ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಡೆದ ಅಲ್ಪಸಂಖ್ಯಾಂತರಿಗೆ ಮೈಕ್ರೊ ಸಾಲದ ಚೆಕ್‌ ವಿತರಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಸರ್ಕಾರ ದುರ್ಬಲ ಹಾಗೂ ಹಿಂದುಳಿದ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿದೆ. ಅವರಿಗಾಗಿ ಹಲವು ಯೋಜನೆಗಳು ಇಂದು ಜಾರಿಯಲ್ಲಿವೆ. ಅವುಗಳ ಕುರಿತು ಮಾಹಿತಿ ಪಡೆದುಕೊಳ್ಳಿ’ ಎಂದು ಅವರು ಸಲಹೆ ನೀಡಿದರು.

ADVERTISEMENT

ಕೆಪಿಸಿಸಿ ವೈದ್ಯರ ಘಟಕದ ಉಪಾಧ್ಯಕ್ಷ ಡಾ. ಮಹೇಶ ನಾಲವಾಡ ಮಾತನಾಡಿ, ‘ಸರ್ಕಾರದಿಂದ ನೀಡಲಾಗುತ್ತಿರುವ ಮೈಕ್ರೊ ಸಾಲವನ್ನು ಬಳಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು’ ಎಂದು ಹೇಳಿದರು.

‘ಕಳೆದ ವರ್ಷ 140 ಮಹಿಳೆಯರಿಗೆ ಮೈಕ್ರೊ ಸಾಲ ನೀಡಲಾಗಿತ್ತು. ಪ್ರಸಕ್ತ ವರ್ಷ ಅದನ್ನು 180ಕ್ಕೆ ಹೆಚ್ಚಿಸಲಾಗಿದೆ. ಸರ್ಕಾರದಿಂದ ನೀಡಲಾಗುತ್ತಿರುವ ಈ ಸಾಲವನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳಬೇಕು’ ಎಂದು ಅವರು ಹೇಳಿದರು.

ಕಾಂಗ್ರಸ್‌ ಮುಖಂಡ ಪ್ರೊ. ಐ.ಜಿ. ಸನದಿ ಮಾತನಾಡಿದರು. ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ, ಕುಂದಗೋಳ ಶಾಸಕ ಸಿ.ಎಸ್‌ ಶಿವಳ್ಳಿ, ಅಲ್ಪಸಂಖ್ಯಾತರ ಇಲಾಖೆಯ ನಿರ್ದೇಶಕ ಮನಪ್ರೀತ ಸಿಂಗ್‌, ಧಾರವಾಡ ನಗರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಧಾರವಾಡ ಗ್ರಾಮೀಣ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎಚ್‌.ವಿ. ಮಾಡಳ್ಳಿ, ಮುಖಂಡರಾದ ಇಬ್ರಾಹಿಂ ಹೊಸಪೇಟ, ಜಾಕೀರ್‌ ಯರಗಟ್ಟಿ, ಸಿದಾರ್ಥ ಗಬ್ಬೂರ, ಶಾರೂಕ್‌ ಮುಲ್ಲಾ, ಅಬ್ದುಲ್‌ ಗನಿ ವಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.