ADVERTISEMENT

‘ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿಸುವ ಗುರಿ’

​ಪ್ರಜಾವಾಣಿ ವಾರ್ತೆ
Published 16 ಮೇ 2017, 6:00 IST
Last Updated 16 ಮೇ 2017, 6:00 IST

ಹುಬ್ಬಳ್ಳಿ: ಶೌಚಾಲಯ ಬಳಸುವುದು ಮತ್ತು ಕಟ್ಟಿಸುವುದು ಸ್ವಾಭಿಮಾನದ ವಿಷಯ. ಧಾರವಾಡ ಜಿಲ್ಲೆಯನ್ನು ಅಕ್ಟೋಬರ್‌ 2017 ರೊಳಗೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿಸುವ ಗುರಿ ಹೊಂದಲಾಗಿದೆ ಎಂದು ಧಾರವಾಡ ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ಸ್ನೇಹಲ್‌ ತಿಳಿಸಿದರು.

ಇಲ್ಲಿನ ಕಾಟನ್‌ ಮಾರ್ಕೆಟ್‌ ಸಮೀ­ಪದ ಕನ್ನಡ ಮತ್ತು ಸಂಸ್ಕೃತಿ ಭವನದಲ್ಲಿ ಧಾರವಾಡ ಜಿಲ್ಲಾ ಪಂಚಾಯ್ತಿ ಹಾಗೂ ಹುಬ್ಬಳ್ಳಿ ತಾಲ್ಲೂಕು ಪಂಚಾಯ್ತಿ ಆಯೋಜಿಸಿದ್ದ  ‘ನಮ್ಮನೆಯ ಶೌಚಾ­ಲಯ, ನಮ್ಮ ಸ್ವಾಭಿಮಾನ’ ಕಾರ್ಯ­ಕ್ರಮದಲ್ಲಿ ಅವರು ಮಾತನಾಡಿದರು.

ಹುಬ್ಬಳ್ಳಿ ತಾಲ್ಲೂಕಿನಲ್ಲಿ 7,400 ಮನೆಗಳು ಶೌಚಾಲಯ ಹೊಂದಿಲ್ಲ. ಆಶಾ, ಅಂಗನವಾಡಿ ಕಾರ್ಯಕರ್ತೆ­ಯರು, ಶಾಲಾ ಶಿಕ್ಷಕರು, ಪಿಡಿಓಗಳು ಶೌಚಾ­ಲಯ ನಿರ್ಮಿಸಿಕೊಳ್ಳುವಂತೆ ಜನ­ರಲ್ಲಿ ಜಾಗೃತಿ ಮೂಡಿಸ ಬೇಕು ಎಂದರು.

ADVERTISEMENT

ಒಂದು ಶೌಚಾಲಯ ನಿರ್ಮಿಸಿಕೊಳ್ಳು ವಂತೆ ಪ್ರೋತ್ಸಾಹಿಸಿ ಯಶಸ್ವಿಯಾದರೆ ₹150 ನೀಡಲಾಗುವುದು. ಈಗ ಬಾಕಿ ಉಳಿದುಕೊಂಡಿರುವ ಪ್ರೋತ್ಸಾಹ ಹಣವನ್ನು ಆದಷ್ಟು ಬೇಗ ಪಾವತಿ ಮಾಡಲಾಗುವುದು ಎಂದು ಹೇಳಿದರು.

ಶೌಚಾಲಯ ನಿರ್ಮಿಸಿಕೊಳ್ಳುವ ಎಸ್‌ಸಿ ಹಾಗೂ ಎಸ್‌ಟಿ ಕುಟುಂಬಕ್ಕೆ ₹ 15,000 ಸಹಾಯಧನ, ಬಿಪಿಎಲ್‌ ಕಾರ್ಡ್‌ ಹೊಂದಿದ ಕುಟುಂಬಕ್ಕೆ ₹ 10,000 ಸಹಾಯಧನ ನೀಡಲಾಗು ತ್ತದೆ. ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ವನ್ನೂ ನೀಡಲಾಗುತ್ತಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್‌. ಮುನಿರಾಜು ಮಾತ ನಾಡಿದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಕಡಪಟ್ಟಿ, ಎಸ್‌ಬಿಐ ಅಧಿಕಾರಿ ಜಿ.ಎಸ್‌. ಮುತಾಲಿಕ್‌ ಮಾತ ನಾಡಿದರು.

ಹುಬ್ಬಳ್ಳಿ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಹೊಸಮನಿ,  ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಎಸ್‌.ಎಂ. ಕೆಂಚಣ್ಣವರ, ತಾಲ್ಲೂಕು ಆರೋಗ್ಯಾಧಿಕಾರಿ ಪ್ರಮೀಳಾ, ಸಿ.ಎಚ್‌. ಅದರಗುಂಚಿ, ಎನ್‌.ಪಿ. ಪದ್ಮಾವತಿ, ಸಿ. ಕರಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.