ADVERTISEMENT

‘ಸಾವಿತ್ರಿಬಾಯಿ ಮೌಲ್ಯಗಳ ಪ್ರತಿಪಾದಕಿ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 9:39 IST
Last Updated 3 ಜನವರಿ 2018, 9:39 IST

ಧಾರವಾಡ: ’ಅಕ್ಷರ ಸಾರ್ವಜನಿಕರಿಗೆ ನಿಲುಕದೆ ಇದ್ದ ಸಂದರ್ಭದಲ್ಲಿ ಎಲ್ಲರಿಗೂ ಜ್ಞಾನ ದೊರಕಬೇಕು ಎಂದು ಪಣ ತೊಟ್ಟವರು ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ’ ಎಂದು ‘ಹೊಸತು’ ಪತ್ರಿಕೆ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ ಹೇಳಿದರು.

ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ವಿಜ್ಞಾನ ಕಾಲೇಜು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ’ಲೋಕ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಳ್ವಿಕೆ ಇದ್ದ ಕಾಲದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಿಸಬೇಕು ಎನ್ನುವ ಮಹದಾಸೆ ಹೊತ್ತು ಯಶಸ್ವಿಯಾದವರು. ಓದುವುದೇ ಅಪರಾಧ ಎನ್ನುವ ಕಾಲದಲ್ಲಿ ಅಕ್ಷರ ಜ್ಞಾನ ನೀಡಲು ಮುಂದೆ ಬಂದ ತಾಯಿ ಫುಲೆ ಕೇವಲ ಶಿಕ್ಷಕಿಯಾಗಿರದೇ, ಸಾಮಾಜಿಕ ಮೌಲ್ಯಗಳ ಪ್ರತಿಪಾದಕಿಯಾಗಿದ್ದರು’ ಎಂದರು.

‘ಅಕ್ಷರ ಇಂದು ವಿಕಾಸದ ಮಾಧ್ಯಮವಾಗಬೇಕೇ ಹೊರತು ವಿನಾಶದತ್ತ ಕೊಂಡೊಯ್ಯುವ ಮಾಧ್ಯಮವಾಗಬಾರದು. ಇಂದಿನ ಶಿಕ್ಷಣ ಯುವ ಜನಾಂಗವನ್ನು ವಿಕಾಸದ ಬದಲು ವಿನಾಶದ ಕಡೆ ಕೊಂಡೊಯ್ಯುತ್ತಿದೆ. ವಿದ್ಯೆಯ ಜತೆ ವಿನಯ ಸೇರಿಕೊಂಡಾಗ ಮಾತ್ರ ಅದಕ್ಕೊಂದು ಅರ್ಥ ಮತ್ತು ಸಾರ್ಥಕತೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಚಿಂತನೆಯಲ್ಲಿ ತೊಡಗಬೇಕು’ ಎಂದರು.

ADVERTISEMENT

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮಾತನಾಡಿ, ‘ಸಾವಿತ್ರಿಬಾಯಿ ಜಯಂತಿ ಸರ್ಕಾರದ ವತಿಯಿಂದ ಆಚರಿಸುವಂತಾಗಬೇಕು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.