ADVERTISEMENT

ಅಕ್ರಮ ಮರಳು ಸಾಗಣೆ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 7:00 IST
Last Updated 8 ನವೆಂಬರ್ 2017, 7:00 IST

ಗಜೇಂದ್ರಗಡ: ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಅಕ್ರಮವಾಗಿ ಮರಳು ಸಾಗಣೆ ನಡೆಯುತ್ತಿದ್ದರೂ ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಬಿಜೆಪಿ ಮುಖಂಡ ಅಶೋಕ ವನ್ನಾಲ ಆರೋಪಿಸಿದ್ದಾರೆ.'

‘ಕಳೆದ ಹಲವು ದಿನಗಳ ಹಿಂದೆ ಸುರಿದ ಮಳೆಯಿಂದ ಹಳ್ಳಗಳಲ್ಲಿ ಮರಳು ಸಂಗ್ರಹಗೊಂಡಿದ್ದು, ಸಮೀಪದ ಹಿರೇಕೊಪ್ಪ, ರಾಜೂರು, ದಿಂಡೂರು, ಕಾತ್ರಾಳ, ರಾಂಪುರ, ಹೊಸರಾಂಪುರ, ಶಿರಗುಂಪಿ, ದ್ಯಾಮುಣಸಿ, ಗುಳಗುಳಿ ಸೇರಿ ಹಲವು ಹಳ್ಳಿಗಳಲ್ಲಿ ಮರಳು ದಂದೆ ಎಗ್ಗಿಲ್ಲದೇ ನಡೆಯುತ್ತಿದೆ.

ನಿತ್ಯ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೂ ಎಗ್ಗಿಲ್ಲದೇ ಟ್ರಾಕ್ಟರ್ ಮೂಲಕ ಮರಳು ಸಾಗಣೆ ನಡೆಯುತ್ತಿದೆ’ ಎಂದು ಅವರು ತಿಳಿಸಿದ್ದಾರೆ. ಮರಳು ದಂದೆಗೆ ರಾಜಕೀಯ ಪ್ರಭಾವಿಗಳ ಹಾಗೂ ಪೊಲೀಸರ ಬೆಂಬಲವಿದೆ. ಇನ್ನು ಮೇಲಾದರೂ ಎಂದು ಅವರು ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.